“ಪ್ರವಾಸೋದ್ಯಮ ಕಾಮಗಾರಿ ನಿರ್ವಹಿಸಲು ವಾಸ್ತುಶಿಲ್ಪಿಗಳನ್ನು ನೇಮಿಸಿ’

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ

Team Udayavani, Mar 19, 2020, 5:37 AM IST

“ಪ್ರವಾಸೋದ್ಯಮ ಕಾಮಗಾರಿ ನಿರ್ವಹಿಸಲು ವಾಸ್ತುಶಿಲ್ಪಿಗಳನ್ನು ನೇಮಿಸಿ’

ಉಡುಪಿ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಬಗ್ಗೆ ಕೈಗೊಳ್ಳುವ ವಿವಿಧ ಕಾಮಗಾರಿ ಗಳನ್ನು, ಪ್ರವಾಸಿಗರನ್ನು ಆಕರ್ಷಿಸುವಂತೆ ನೂತನ ರೀತಿಯಲ್ಲಿ ಹಾಗೂ ವಿಭಿನ್ನ ವಿನ್ಯಾಸದಲ್ಲಿ ಯೋಜನೆ ಸಿದ್ಧಪಡಿಸಲು ವಾಸ್ತು¤ಶಿಲ್ಪಿಯೊಬ್ಬರನ್ನು ಜಿಲ್ಲಾ ಸಮಿತಿ ಯಲ್ಲಿ ನೇಮಿಸಿಕೊಂಡು ಅವರ ಮೂಲಕ ಜಿಲ್ಲೆಯ ಪ್ರವಾಸಿ ತಾಣಗಳು ರಾಜ್ಯ, ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವಂತೆ ಕಾಮಗಾರಿ ಗಳನ್ನು ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲ ಬೀಚ್‌ಗಳು ಮತ್ತು ಪ್ರವಾಸೋದ್ಯಮ ಇಲಾಖೆಯ ಕಾಮಗಾರಿಗಳು ಏಕ ರೂಪದಲ್ಲಿ ನಿರ್ಮಾಣಗೊಂಡರೆ ಪ್ರವಾಸಿಗರಿಗೆ ಅಕರ್ಷಕವಾಗಿರುವುದಿಲ್ಲ. ಆದ್ದರಿಂದ ಹೊಸ ಅಭಿವೃದ್ಧಿ ಕಾಮಗಾರಿಗಳನ್ನು ಸಿದ್ಧಪಡಿಸುವಾಗ ವಾಸ್ತು ಶಿಲ್ಪಿಗಳ ಸಲಹೆಯಂತೆ ವಿನೂತನ ರೀತಿಯಲ್ಲಿ ಆಕರ್ಷಕವಾಗಿ ಕಾಮಗಾರಿ ಅನುಷ್ಠಾನ ಗೊಳಿಸಬೇಕು. ಜಿಲ್ಲಾ ಪ್ರವಾಸೋದ್ಯಮ ಸಮಿತಿಯಲ್ಲಿ ವಾಸ್ತುಶಿಲ್ಪಿಯೊಬ್ಬರನ್ನು ನೇಮಿಸಬೇಕು ಹಾಗೂ ಜಿಲ್ಲೆಯಲ್ಲಿನ ಎಲ್ಲ ಬೀಚ್‌ಗಳಿಗೆ ಬ್ಲೂ ಫ್ಲಾ$Âಗ್‌ ಸರ್ಟಿಫಿಕೇಶನ್‌ ದೊರೆಯುವ ನಿಟ್ಟಿನಲ್ಲಿ ಕೈಗೊಂಡಿರುವ ಎಲ್ಲ ಕಾಮಗಾರಿಗಳನ್ನು ಮಾ. 31 ರೊಳಗೆ ಮುಕ್ತಾಯಗೊಳಿಸಬೇಕು ಎಂದು ಅವರು ಹೇಳಿದರು.

2019-2020 ನೇ ಸಾಲಿನ ಕೆಟಿವಿಜಿ ಶಿಫಾರಸ್ಸುಗಳ ಅಡಿ ಬಿಡುಗಡೆಯಾದ ಕಾಮಗಾರಿಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲಿ ಕೆಲಸಗಳನ್ನು ಸಂಪೂರ್ಣಗೊಳಿಸಬೇಕು. ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕೋಸ್ಟಲ್‌ ಟೂರಿಸಂಗೆ ಹೆಚ್ಚಿನ ಅನುದಾನ ಹಣ ನೀಡಲಾಗಿದ್ದು, ಜಿಲ್ಲೆಯಲ್ಲಿನ ಅಗತ್ಯ ಕಾಮಗಾರಿಗಳ ಕುರಿತು ಯೋಜನೆಗಳ ವಿವರ ಮತ್ತು ಈ ಕಾಮಗಾರಿಗಳ ವೆಚ್ಚದ ಅಂದಾಜು ಪಟ್ಟಿಯನ್ನು ಶೀಘ್ರದಲ್ಲಿ ಸರಕಾರಕ್ಕೆ ವರದಿ ಸಲ್ಲಿಸಬೇಕು. ಜಿಲ್ಲೆಯ ಪ್ರವಾಸೋದ್ಯಮ ಟಾಸ್ಕ್ ಫೋರ್ಸ್‌ ಸಮಿತಿಯ ವರದಿಯ ಕರಡುಪ್ರತಿ ಸಿದ್ಧಪಡಿಸಿ ಕೂಡಲೇ ಸಲ್ಲಿಸಬೇಕು. ಪ್ರವಾಸಿ ಬೋಟ್‌ ಹಾಗೂ ಸಾಹಸ ಜಲಕ್ರೀಡೆ ಚಟುವಟಿಕೆಗಳನ್ನು ನಡೆಸಲು ಅರ್ಜಿ ಸಲ್ಲಿಸಿದವರಿಗೆ ಅನುಮತಿ ನೀಡಿದ ಅವರು, ಈ ಬೋಟ್‌ಗಳಿಗೆ ಅನುಮತಿ ಪಡೆದವರು ಯಾವುದೇ ಕಾರಣಕ್ಕೂ ಸಮುದ್ರದೊಳಗೆ ಹಾಗೂ ನಿಷೇಧಿತ ಪ್ರದೇಶವನ್ನು ಪ್ರವೇಶ ನೀಡದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಅರ್ಬನ್‌ ಆರಿಟೆಕ್ಟ್ ಪ್ರತಿಮಾ ಮನೋಹರ್‌, ಉಡುಪಿ ಜಿಲ್ಲೆಯ ಬೀಚ್‌ಗಳಲ್ಲಿ ವಾಟರ್‌ ಫ್ರಂಟ್‌ ಮತ್ತು ಬೀಚ್‌ ಫ್ರಂಟ್‌ ಯೋಜನೆಯನ್ನು ವಿಭಿನ್ನ ರೀತಿಯ ಸೌಕರ್ಯಗಳೊಂದಿಗೆ ಅಭಿವೃದ್ಧಿಗೊಳಿಸಿ, ಮಾದರಿ ಬೀಚ್‌ಗಳನ್ನಾಗಿ ಪರಿವರ್ತಿಸುವ ಕುರಿತು ಪಿಪಿಟಿ ಪ್ರದರ್ಶನ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿ.ಪಂ. ಉಪ ಕಾರ್ಯದರ್ಶಿ ಕಿರಣ್‌ ಫ‌ಡೆ°àಕರ್‌, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ ನಾಯ್ಕ, ಪೌರಾಯುಕ್ತ ಆನಂದ ಕಲ್ಲೋಳಿಕರ್‌, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲೆಯ ಪ್ರಮುಖ ಪ್ರವಾಸ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ರಾಜ್ಯಸಭೆ ಬಹುಮತದತ್ತ ಬಿಜೆಪಿ ಚಿತ್ತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Karkala: ಬೈಕ್‌ ಢಿಕ್ಕಿ; ಗಾಯ

Karkala: ಬೈಕ್‌ ಢಿಕ್ಕಿ; ಗಾಯ

ನ. 26 : ಕಾಪುವಿನಲ್ಲಿ ಸಂವಿಧಾನ ಉಳಿಸಿ ಬೃಹತ್ ಆಂದೋಲನ ಮತ್ತು ಜಾಗೃತಿ ಜಾಥಾ ಆಯೋಜನೆ

ನ. 26 : ಕಾಪುವಿನಲ್ಲಿ ಸಂವಿಧಾನ ಉಳಿಸಿ ಬೃಹತ್ ಆಂದೋಲನ ಮತ್ತು ಜಾಗೃತಿ ಜಾಥಾ ಆಯೋಜನೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

Police

Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ

Suside-Boy

Putturu: ಬಡಗನ್ನೂರು: ನೇಣು ಬಿಗಿದು ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.