ಕೋವಿಡ್ 19 ವೈರಸ್ ಭೀತಿ: ಕುಕ್ಕುಟೋದ್ಯಮಕ್ಕೂ ಹೊಡೆತ
Team Udayavani, Mar 19, 2020, 5:06 AM IST
ಉಡುಪಿ: ಕೋವಿಡ್ 19 ವೈರಸ್ ಭೀತಿಯಿಂದಾಗಿ ಕುಕ್ಕುಟೋದ್ಯಮ ನೆಲಕ್ಕಚ್ಚುವ ಭೀತಿ ಎದುರಾಗಿದೆ. ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಒಂದು ಮೊಟ್ಟೆಗೆ 3 ರೂ.ಗೆ ಕುಸಿದಿದೆ. ಉಡುಪಿ ನಗರದಲ್ಲಿ ಒಂದು ಮೊಟ್ಟೆಗೆ 2.50 ರೂ. ನಿಂದ 4 ರೂ. ನಲ್ಲಿ ಮಾರಾಟವಾಗುತ್ತಿದೆ.
ಹಕ್ಕಿ ಜ್ವರ ಭೀತಿ!
ಹಕ್ಕಿಜ್ವರವು ರಾಜ್ಯದಲ್ಲಿ ಕಾಣಿಸಿಕೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೋಳಿ ಮಾಂಸಕ್ಕೂ ಬೇಡಿಕೆ ಕಡಿಮೆಯಾಗಿ ಕುಕ್ಕುಟೋದ್ಯಮ ತೀರಾ ಸಂಕಷ್ಟಕ್ಕೆ ಸಿಲುಕಿದೆ. ಜಿಲ್ಲೆಯಲ್ಲಿ ಕೋಳಿ ಸಾಕಣೆ ಕೇಂದ್ರಗಳು, ಕೋಳಿ ಮಾಂಸ ಮಾರಾಟ ಕೇಂದ್ರಗಳು ಹಾಗೂ ಕೋಳಿ ಸಾಗಾಣಿಕೆ ವಾಹನಗಳ ಚಲನ ವಲನಗಳ ಮೇಲೆ ನಿಗಾವಹಿಸಲಾಗುತ್ತಿದೆ. ಪ್ರತಿ ಒಂದು ಕೆ.ಜಿ.ಲೈವ್ (ಜೀವಂತ) ಕೋಳಿ ಪ್ರಸ್ತುತ 16 ರೂ.ಗೆ ಮಾರಾಟವಾಗುತ್ತಿದೆ. ಮಾಂಸಕ್ಕೆ 40ರಿಂದ 80 ರೂ. ವರೆಗೂ ಮಾರಾಟವಾಗುತ್ತಿದೆ.
ತಪ್ಪು ಸಂದೇಶ
ಇಷ್ಟೆಲ್ಲ ಅನಾಹುತಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಸಂದೇಶ ವೇಗವಾಗಿ ಹರಡುತ್ತಿರುವುದೇ ಕಾರಣವಾಗಿದೆ. ಇಂತಹ ತಪ್ಪು ಸಂದೇಶ ಹರಡುವುದರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕಾಗಿದೆ ಎನ್ನುವುದು ಕೋಳಿ ಸಾಕಣಿಕೆದಾರ ವಿಜಯ ದೇವಾಡಿಗ ಆತಂಕ ವ್ಯಕ್ತಪಡಿಸಿದರು.
ಆತಂಕಗೊಳ್ಳುವ ಅಗತ್ಯವಿಲ್ಲ
ಕೋಳಿ ಸೇವನೆಯಿಂದ ಕೊರೊನಾ ಬರುವುದಿಲ್ಲ. ಸರಿಯಾಗಿ ಬೇಯಿಸಿದ ಮಾಂಸದಲ್ಲಿ ಯಾವುದೇ ವೈರಸ್‌ಗಳು ಬದುಕುಳಿಯುವುದಿಲ್ಲ. ಜಿಲ್ಲೆಯಲ್ಲಿ ಹಕ್ಕಿ ಜ್ವರವಿಲ್ಲ. ಆದರೆ ಮುನ್ನೆಚ್ಚರಿಕೆ ಯಾಗಿ ನಿತ್ಯ 5 ಕಡೆ ಕೋಳಿ ಫಾರಂಗಳ ಸ್ಯಾಂಪಲ್ ಬೆಂಗಳೂರು ಲ್ಯಾಬ್‌ಗ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಇಲ್ಲಿಯವರೆಗೆ ಪರೀಕ್ಷೆ ಒಳಪಡಿಸಿದ ಮಾದರಿಗಳು ನೆಗೆಟಿವ್ ಬಂದಿವೆ. ಜನರು ಆತಂಕಗೊಳ್ಳುವ ಅಗತ್ಯವಿಲ್ಲ.
-ಡಾ. ಹರೀಶ್ ತಮಣಕರ್, ಪಶುಪಾಲನ ಇಲಾಖೆಯ ಉಪ ನಿರ್ದೇಶಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.