ಜಡ್ಡಿನಮೂಲೆ : ಸೇತುವೆ -ಕಿಂಡಿ ಅಣೆಕಟ್ಟೆಗೆ ಅನುದಾನ ಮಂಜೂರು
Team Udayavani, Mar 19, 2020, 5:25 AM IST
ಆಜ್ರಿ: ಇಲ್ಲಿನ ಜನರ ದಶಕಗಳಿಗೂ ಹೆಚ್ಚು ಸಮಯದ ಕಾಲು ಸಂಕದ ನಡಿಗೆಗೆ ಕಡೆಗೂ ಮುಕ್ತಿ ಸಿಗುವ ಕಾಲ ಕೂಡಿ ಬಂದಿದೆ. ಆಜ್ರಿ ಗ್ರಾಮದ ಜಡ್ಡಿನಮೂಲೆಯಲ್ಲಿ ಕುಬಾj ನದಿಗೆ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರ ಮುತುವರ್ಜಿಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 3.5 ಕೋ.ರೂ. ಅನುದಾನ ಮಂಜೂರಾಗಿದೆ.
ಆಜ್ರಿ ಗ್ರಾಮದ ಬಡಬಾಳು, ಜಡ್ಡಿನಮೂಲೆ, ಯಡೂರು, ಕೇವರ್ಜಿ, ಕ್ಯಾಕೋಡು ಭಾಗದವರು ಸೇತುವೆ ಯಿಲ್ಲದೆ ಮಳೆಗಾಲದಲ್ಲಿ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದರು. 1 ಕಿ.ಮೀ. ಸಂಚರಿಸಬೇಕಾದ ಗ್ರಾಮಸ್ಥರು ಮಳೆಗಾಲದಲ್ಲಿ ಸೇತುವೆಯಿಲ್ಲದೆ 5 ಕಿ.ಮೀ. ಹೆಚ್ಚುವರಿಯಾಗಿ ಸಂಚರಿಸುವ ಸ್ಥಿತಿ ಇಲ್ಲಿಯರದಾಗಿದೆ.
ಆಜ್ರಿಯಿಂದ ಬಡಬಾಳುವಿಗೆ ಸಂಪರ್ಕಿ ಸಲು ಕುಬಾj ನದಿಯನ್ನು ದಾಟಬೇಕಿದ್ದು, ಸಮರ್ಪಕ ಸೇತುವೆಯಿಲ್ಲದೆ ಸಾರ್ವಜನಿಕರು, ಮಕ್ಕಳು ಸಮಸ್ಯೆ ಅನುಭವಿಸು ತ್ತಿದ್ದಾರೆ. ಮಳೆಗಾಲದಲ್ಲಿ ಊರವರೇ ನಿರ್ಮಿಸಿದ ಕಾಲು ಸಂಕದಲ್ಲಿ ಈ ಭಾಗದ ನೂರಾರು ಮಂದಿ ನದಿ ದಾಟುತ್ತಾರೆ. ಒಂದೊಮ್ಮೆ ಕಾಲು ಸಂಕ ಮುರಿದು ಬಿದ್ದರೆ ಮತ್ತೆ ಮಳೆಗಾಲ ಮುಗಿಯುವವರೆಗೆ ಈ ಮಾರ್ಗದಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಲಿದೆ.
ಯಾವೆಲ್ಲ ಊರಿಗೆ ಪ್ರಯೋಜನ?
ಜಡ್ಡಿನಮೂಲೆಯಲ್ಲಿ ಸೇತುವೆ ಯಾದರೆ ಬಡಬಾಳು, ಯಡೂರು, ಯಡ್ನಾಡಿ, ತೆಂಕಬೈಲು, ಜಡ್ಡಿನಮೂಲೆ, ಜಿಗಿನ್‌ಗುಂಡಿ, ಕಂಪದಕೆರೆ, ಕೇವರ್ಜಿ, ಕ್ಯಾಕೋಡು, ತೆಂಕಬೈಲು ಈ ಎಲ್ಲ ಊರಿಗೆ ಒಂದು ಕಡೆಯಿಂದ ಆಜ್ರಿ, ಸಿದ್ದಾಪುರ ಕಡೆಗೆ, ಮತ್ತೂಂದು ಕಡೆಯಿಂದ ಶಂಕರನಾರಾಯಣ, ಸಿದ್ದಾಪುರ, ಕುಂದಾಪುರಕ್ಕೆ ಸಂಚರಿಸಲು ಪ್ರಯೋಜನ ವಾಗಲಿದೆ. ಇದಲ್ಲದೆ ಕಿಂಡಿ ಅಣೆಕಟ್ಟು ಕೂಡ ನಿರ್ಮಾಣವಾಗುವುದರಿಂದ ಈ ಭಾಗದ ಹತ್ತಾರು ಎಕರೆ ಕೃಷಿ ಪ್ರದೇಶಗಳಿಗೂ ಅನುಕೂಲವಾಗಲಿದೆ. ಮಾತ್ರವಲ್ಲದೆ ಈ ಪ್ರದೇಶದ ಸುತ್ತಮುತ್ತಲಿನ ಅಂತರ್ಜಲ ಮಟ್ಟ ಏರಿಕೆಗೂ ಪ್ರಯೋಜನವಾಗಲಿದೆ.
ಶೀಘ್ರ ಕಾಮಗಾರಿಗೆ ಚಾಲನೆ
ಇಲ್ಲಿನ ಗ್ರಾಮಸ್ಥರು ಜಡ್ಡಿನಮೂಲೆಯಲ್ಲಿ ಸೇತುವೆ ಅಗತ್ಯ ಎಂದು ಬಹಳಷ್ಟು ವರ್ಷಗಳಿಂದಲೂ ಮನವಿ ಸಲ್ಲಿಸುತ್ತಲೇ ಬಂದಿದ್ದರು. ನಾನು ಚುನಾವಣಾ ಪ್ರಚಾರ ಸಂದರ್ಭ ಗೆದ್ದು ಬಂದರೆ ಸೇತುವೆಗೆ ಅನುದಾನ ತರುತ್ತೇನೆಂದು ಮಾತು ಕೊಟ್ಟಿದ್ದೆ. ಅದರಂತೆ ಈಗ ನಡೆದುಕೊಂಡಿದ್ದು, ಸೇತುವೆ ಸಹಿತ, ಈ ಭಾಗದ ಕೃಷಿ ಭಾಗಕ್ಕೆ ಅನುಕೂಲವಾಗುವಂತೆ ಕಿಂಡಿ ಅಣೆಕಟ್ಟು ಕೂಡ ನಿರ್ಮಾಣವಾಗಲಿದೆ.
ಸಣ್ಣ ನೀರಾವರಿ ಇಲಾಖೆಯಿಂದ 3.5 ಕೋ.ರೂ. ಅನುದಾನ ಮಂಜೂರಾಗಿದೆ. ಶೀಘ್ರ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಲಾಗುವುದು.
-ಬಿ.ಎಂ. ಸುಕುಮಾರ್ ಶೆಟ್ಟಿ ಬೈಂದೂರು ಶಾಸಕರು
ಸುದಿನ ವರದಿ
ಜಡ್ಡಿನಮೂಲೆಯಲ್ಲಿ ಸೇತುವೆ ಬೇಡಿಕೆ ಕುರಿತಂತೆ ಫೆ.16 ರಂದು “ಉದಯವಾಣಿ ಸುದಿನ’ ಮುಖಪುಟದಲ್ಲಿ “ಕಾಲು ಸಂಕದ ಸಂಕಷ್ಟದ ನಡಿಗೆಗೆ ಇನ್ನೂ ಸಿಕ್ಕಿಲ್ಲ ಮುಕ್ತಿ ‘ಎನ್ನುವ ವಿಶೇಷ ವರದಿ ಪ್ರಕಟಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ
ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ
Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.