ನರಭಕ್ಷಕ ಚಿರತೆ ಸೆರೆ?
ನಾಲ್ವರನ್ನು ಬಲಿ ಪಡೆದಿದ್ದ ಚಿರತೆ ಎಂಬ ಶಂಕೆ
Team Udayavani, Mar 19, 2020, 5:56 AM IST
ತುಮಕೂರು: ನಾಲ್ವರನ್ನು ಬಲಿ ಪಡೆದ, ಜಿಲ್ಲೆಯಲ್ಲಿ ಭಾರೀ ಭೀತಿಗೆ ಕಾರಣವಾಗಿದ್ದ ನರಭಕ್ಷಕ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬಂದಿ ಯಶಸ್ವಿಯಾಗಿದ್ದಾರೆ.
ಜಿಲ್ಲೆಯಲ್ಲಿ ಇಬ್ಬರು ಮಕ್ಕಳು ಸಹಿತ ಒಟ್ಟಾರೆ ನಾಲ್ವರು ಚಿರತೆ ದಾಳಿಗೆ ಬಲಿಯಾಗಿದ್ದರು. ಮಾನವರ ಮೇಲೆ ದಾಳಿ ನಡೆಸಿದ್ದ 12ರಿಂದ 15 ಕಿ.ಮೀ. ವ್ಯಾಪ್ತಿಯಲ್ಲಿ ಕಾಣಿಸಿದ್ದ ಚಿರತೆಯ ಚಹರೆ ಮತ್ತು ಇದರ ಚಹರೆ ಒಂದೇ ರೀತಿ ಇರುವುದರಿಂದ ಇದೇ ನರಹಂತಕ ಚಿರತೆ ಇರಬಹುದು ಎಂದು ನಂಬಲಾಗಿದೆ.
ಸೆರೆ ಸಿಕ್ಕಿದ್ದು ಹೇಗೆ?
ತುಮಕೂರು ತಾಲೂಕಿನ ಹಾಲನೂರು ಸಮೀಪ ಹೇಮಾವತಿ ಚಾನಲ್ ಮೇಲೆ ಓಡಾಡುತ್ತಿದ್ದ ಚಿರತೆ ಜನರ ಕಣ್ಣಿಗೆ ಬಿತ್ತು. ಜನರನ್ನು ಕಂಡು ಗಾಬರಿಗೊಂಡ ಚಿರತೆ ಸೇತುವೆ ಕೆಳಗೆ ಅವಿತುಕೊಂಡಿತು. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅವರು ಕಾರ್ಯಾಚರಣೆ ನಡೆಸಿ ದರೂ ಚಿರತೆ ಸೆರೆ ಹಿಡಿಯಲು ಆಗಲಿಲ್ಲ. ಅನಂತರ ಅರಿವಳಿಕೆ ತಜ್ಞ ಡಾ| ಸನತ್ ಹಾಗೂ ಶಾರ್ಪ್‌ಶೂಟರ್ ಅಕ್ರಂ ಅವರನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಯಿತು. ಡಾ| ಸನತ್ ಅವರು ಸೇತುವೆ ಕೆಳಗೆ ಅಡಗಿದ್ದ ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಬಳಿಕ ಸೆರೆ ಹಿಡಿಯಲಾಯಿತು. ಇನ್ನು ಕೆಲವು ಪರೀಕ್ಷೆಗಳ ಬಳಿಕ ಇದೇ ನರಹಂತಕ ಚಿರತೆಯೇ ಎಂಬುದನ್ನು ಖಾತರಿಪಡಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್
ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್ ಆಗಲಿ: ವಿ.ಸೋಮಣ್ಣ
BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್
Leopard: ಹಾಡಹಗಲೇ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿದ ಚಿರತೆ…
Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 153: ವೈಯಕ್ತಿಕ ಅಭಿಪ್ರಾಯ ಬೇರೆ, ಕರ್ತವ್ಯ ಬೇರೆ
BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ
JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್
Chandan Shetty: ಕಾಟನ್ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು
Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.