ಮಾಯವಾಗುತ್ತಿರುವ ಬಡವರ ಬಂಧು ಗೇರುಬೀಜ!
Team Udayavani, Mar 19, 2020, 7:45 AM IST
ವಿದೇಶ, ಇತರ ರಾಜ್ಯಗಳಿಂದ ಹೇರಳವಾಗಿ ಗೋಡಂಬಿ ಭಾರತಕ್ಕೆ ಆಮದಾಗುತ್ತಿರುವುದರಿಂದ ಇಲ್ಲಿನ ಗೇರು ಕೃಷಿಗೆ ಹೊಡೆತ ಉಂಟಾಗಿರುವುದಾಗಿ ಗೇರು ಮಿಲ್ ಮಾಲಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಕುಂಬಳೆ: ಬಡವರ ಬಂಧುವಾಗಿರುವ ಗೇರುಬೀಜದ ಬೆಲೆ ಪ್ರಕೃತ ಕುಂಟಿತವಾಗಿ ಬಡವರು ಸಂಕಷ್ಟಕ್ಕೀಡಾಗಿದ್ದಾರೆ. ಹಿಂದಿನ ಕಾಲದಲ್ಲಿ ಹೆಚ್ಚಿನ ಕಡೆಗಳ ಗುಡ್ಡ ಪ್ರದೇಶದಲ್ಲಿ ನೈಸರ್ಗಿಕವಾಗಿ ಎತ್ತರಕ್ಕೆ ಬೆಳೆದ ಗೇರು ಮರಗಳನ್ನು ಕಾಣಬಹುದಿತ್ತು.ಇದರಲ್ಲಿ ಹೇರಳ ಬಣ್ಣಬಣ್ಣದ ಗೇರು ಹಣ್ಣು ಸಹಿತ ಬೀಜದ ಇಳುವರಿಯನ್ನು ಗೊಂಚಲು ಗೊಂಚಲಾಗಿ ಕಾಣಬಹುದಿತ್ತು. ಕ್ರಮೇಣ ಇಂತಹ ದೊಡ್ಡ ಮರಗಳ ಕಾಂಡಕ್ಕೆ ಹುಳು ಬಾಧೆ ತಗಲಿ ಮರಗಳು ಸಾವಿನಂಚಿಗೆ ತಲುಪಿದವು. ಈ ರೋಗ ವಿಸ್ಕೃತಗೊಂಡು ಸಣ್ಣ ಗೇರು ಮರಗಳಿಗೂ ಬಾಧಿಸಿ ಇದೀಗ ಗೇರು ಕೃಷಿ ನಾಶದಂಚಿಗೆ ತಲುಪಿದೆ.
ಹಿಂದೆ ಮನೆ ಮಂದಿಯ ಮಕ್ಕಳ ಸಹಿತ ಗೇರು ಕೃಷಿಯತ್ತ ಆಕರ್ಷಿತರಾಗಿದ್ದ ಕೃಷಿಕರು ಮುಂದೆ ಕೆಲವೊಂದು ಕೃಷಿಕರು ತಮ್ಮ ಗುಡ್ಡದಲ್ಲಿ ರಬ್ಬರ್ ಕೃಷಿ ಬೆಳೆಯುವ ಆತುರದಲ್ಲಿ ಅದೆಷ್ಟೋ ಗೇರು ಕೃಷಿ ಹೊಂದಿದ ಮರಗಳನ್ನು ಕಡಿದು ರಬ್ಬರ್ ಕೃಷಿ ಮಾಡಿ ಹೇರಳ ಲಾಭಕ್ಕಾಗಿ ಹಾತೊರೆದು ಅತ್ತ ರಬ್ಬರ್ ಬೆಲೆ ಕುಸಿತಗೊಂಡು ಇತ್ತ ಗೋಡಂಬಿ ಕೃಷಿಯೂ ವಿನಾಶದಂಚಿಗೆ ತಲುಪಿದೆ. ಮಾತ್ರವಲ್ಲದೆ ಗೋಡಂಬಿ ಬೆಳೆಯೇ ಕುಂಠಿತಗೊಂಡಿದೆ.
ಬೆಲೆ ಕುಸಿತ
ಇದೀಗ ಗೇರು ಬೀಜಕ್ಕೆ ಕೆ.ಜಿ ಒಂದಕ್ಕೆ 100-110 ರೂ ಇದ್ದ ಬೆಲೆ ಕೇವಲ 90ಕ್ಕೆ ಇಳಿದಿದೆ. ಬೇಸಗೆ ಮಳೆ ಸುರಿದು ಗೇರು ಮರದ ಹೂವು ನಾಶವಾಗಿ ಗೇರುಬೀಜ ಇಳುವರಿ ಕುಂಠಿತಗೊಂಡು ಮಾರುಕಟ್ಟೆಯಲ್ಲಿ ಗೋಡಂಬಿ ಕೊರತೆ ಉಂಟಾಗಿದೆ.
ಯಾವುದೇ ರಸಗೊಬ್ಬರ, ನೀರು ಹಾಕದೆ ಹೇರಳವಾಗಿ ಬೆಳೆಯುತ್ತಿದ್ದ ಗೇರು ಕೃಷಿ ವರ್ಷದಿಂದ ವರ್ಷಕ್ಕೆ ಕುಂಠಿತಗೊಳ್ಳುವುದು. ಇದರಿಂದ ಬಡವರ ಪಾಲಿಗೆ ನಷ್ಟವಾಗುತ್ತಿದೆ. ಹಿಂದೆ ಬಡತನದ ಕಾಲದಲ್ಲಿ ಹೆಚ್ಚಿನ ಗ್ರಾಮೀಣ ಪ್ರದೇಶಗಳ ಜನರ ದಿನನಿತ್ಯದ ಖರ್ಚಿಗೆ ಮತ್ತು ಬಟ್ಟೆಬರೆಗಳಿಗೆ ಗೇರುಬೀಜದ ಆರ್ಥಿಕ ಸಂಪನ್ಮೂಲ ಸಮತೂಗಿಸಬಹುದಾದ ಒಂದು ಕಾಲವಿತ್ತು. ಆದರೆ ಬಳಿಕ ಗೇರು ಕೃಷಿಯನ್ನು ಅವಲಂಬಿಸದೆ ಇತರ ಸಂಪನ್ಮೂಲಗಳಿಂದ ಬರುವ ಆದಾಯದಿಂದ ಸರಿದೂಗಿಸುವಲ್ಲಿ ಕೃಷಿಕರು ಮುಂದಾಗಿರುವರು.
ಗೇರು ಮರದಿಂದ ಕೇವಲ ಗೇರು ಬೀಜಮಾತ್ರ ದೊರಕುವುದಲ್ಲದೆ ಇದರ ಹಣ್ಣು (ಗೋಂಕು) ಕೂಡ ಬಟ್ಟಿ ಇಳಿಸಲು ಉಪಯುಕ್ತವಾಗಿದೆ. ಗೇರು ಹಣ್ಣಿನಿಂದ ಸಿದ್ಧಪಡಿಸಿದ ಶರಾಬು (ವಾಟೀಸ್) ಔಷಧೀಯ ಗುಣಹೊಂದಿದೆ. ಗ್ರಾಮೀಣ ಪ್ರದೇಶದಲ್ಲಿ ಗುಡ್ಡ ಸುರಂಗದೊಳಗೆ ಕದ್ದು ಮುಚ್ಚಿ ತಯಾರಿಸಿದ ಗೇರು ಹಣ್ಣಿನ ಶರಾಬು ಬಾಣಂತಿಯರಿಗೆ ದಿವೌÂಷಧಿಯಾಗಿದೆ. ಅಲ್ಲದೆ ಜಾನುವಾರುಗಳ ಕೆಲವೊಂದು ರೋಗಗಳಿಗೆ ಉಪಯುಕ್ತ ಔಷಧಿಯಾಗಿದೆ. ಅದೇ ರೀತಿ ಮದ್ಯಪಾನ ಪ್ರಿಯರಿಗೆ ಗೇರು ಹಣ್ಣಿನ ಶರಾಬು ಬಹಳಷ್ಟು ಕಿಕ್ ಕೊಡುವುದಂತೆ.
ಗುಡ್ಡದಲ್ಲಿ ಬೆಳೆದ ಗೇರು ಬೀಜವನ್ನು ಸಂಗ್ರಹಿಸಲು ಇಂದಿನ ದಿನಗಳಲ್ಲಿ ಆಳುಗಳ ಕೊರತೆ ಕಾಡುತ್ತಿವೆ. ಮಾತ್ರವಲ್ಲದೆ. ಜಾನುವಾರುಗಳ ಕೊರತೆಯಿಂದಾಗಿ ಗೇರು ಮರಗಳ ಮಧ್ಯೆ ಕಳೆಗಿಡಗಳು ಬೆಳೆದು ಗೇರು ಬೀಜ ಸಂಗ್ರಹಿಸಲು ತೊಂದರೆಯಾಗುತ್ತಿದೆ. ಸರಕಾರದ ಗೇರು ಇಲಾಖೆಯ ವತಿಯಿಂದ ಬೆಳೆದ ಗೇರುಕೃಷಿ ಕಾಡಿನಲ್ಲಿ ಗೇರು ಕೃಷಿಯನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ಮತ್ತು ಕಳ್ಳ ಕಾಕರಿಂದ ನಷ್ಟವನ್ನು ಅನುಭವಿಸಬೇಕಾಗಿದೆ.
ಯಾವುದೇ ಪಾಲು ಬಂಡವಾಳವಿಲ್ಲದೆ ಪ್ರಾಕೃತಿಕವಾಗಿ ಬೆಳೆಯುವ ಗೇರು ಕೃಷಿಯತ್ತ ಹಿಂದಿನ ಕಾಲದಲ್ಲಿ ತೋರಿದ ಪ್ರೀತಿಯಿಂದ ದೂರವಾಗಿರುವುದರಿಂದ ಗೇರು ಕೃಷಿಯೂ ಕೃಷಿಕರಿಂದ ದೂರವಾಗುತ್ತಿದೆ. ಆದರೆ ಕೆಲವು ಕೃಷಿಕರು ಕಸಿ ಗೇರು ಗಿಡಗಳನ್ನು ತಂದು ತಮ್ಮ ಹಿತ್ತಿಲಲ್ಲಿ ಬೆಳೆದರೂ ಇದು ಕೆಲವು ವರ್ಷಗಳ ಕಾಲಮಾತ್ರ ಇಳುವರಿ ನೀಡಿ ಬಳಿಕ ರೋಗದಿಂದ ಈ ಮರಗಳೇ ಸತ್ತು ಹೋಗುವುವು. ಭಾರೀ ಬೇಡಿಕೆಯ ಸತ್ವಭರಿತ ಗೇರುಬೀಜ ಇದೇ ರೀತಿ ಕುಂಠಿತವಾದಲ್ಲಿ ಮುಂದಿನ ದಿನಗಳಲ್ಲಿ ವಿದೇಶದಿಂದ ಆಗಮಿಸುವ ಗೋಡಂಬಿಯನ್ನೇ ಅವಂಬಿಸ ಬೇಕಾಗಿದೆ. ಅಳಿವಿನಂಚಿಗೆ ಸಾಗುತ್ತಿರುವ ಸರಕಾರ ಮತ್ತು ಗೇರು ನಿಗಮಗಳು ಗೇರು ಕೃಷಿ ಉಳಿವಿನತ್ತ ಚಿಂತಿಸಿಬೇಕಾಗಿದೆ.
ಬೆಲೆ ಹೆಚ್ಚಳ ನಿರೀಕ್ಷೆ
ಹಳ್ಳಿ ಪ್ರದೇಶಗಳಲ್ಲಿ ಗೇರು ಕೃಷಿ ಮಾಯವಾಗಿ ಮತ್ತು ಅಕಾಲಿಕ ಮಳೆಯ ಪ್ರಭಾವದಿಂದ ಮಾರುಕಟ್ಟೆಯಲ್ಲಿ ಗೇರು ಬೀಜ ಅಪರೂಪವಾಗಿದೆ. ಬೆಲೆ ಕಡಿಮೆಯಾದ ಕಾರಣ ಬೆಲೆ ಹೆಚ್ಚಾಗುವ ನೀರೀಕ್ಷೆಯಲ್ಲಿ ಕೃಷಿಕರು ಮಾರಾಟಕ್ಕೆ ಮುಂದಾಗುವುದಿಲ್ಲ.
– ಹಸೈನಾರ್. ಗೇರುಬೀಜ ಖರೀದಿದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.