ಬದುಕು ಆಧರಿಸಿದ ಆಟೋ

ಸುಖೀಗೀತ

Team Udayavani, Mar 20, 2020, 4:30 AM IST

pema-nelyadi–auto

ಹೀಗೆ ಆಟೋ ರಿಕ್ಷಾ ಓಡಿಸುವಾಗ ನನಗೆ ಅಪ್ಪ ನೆನಪಾಗುತ್ತಾರೆ. ಮುಡಿಪು ಬಳಿಯ ಪಜೀರಿನಲ್ಲಿ ನನ್ನ ತವರುಮನೆ. ಅಪ್ಪ ಕೋಚಪ್ಪ ಪೂಜಾರಿ, ನನ್ನನ್ನು ಬಹಳ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅಣ್ಣನಿಗೆ ಸಮನಾಗಿ ನಾನೂ ಜೀವನ ಕೌಶಲವನ್ನು ಕಲಿಯಬೇಕು. ಗಂಡುಮಗನ ಹಾಗೇ ಬೆಳೆಯಬೇಕು ಎಂದು ಹೇಳುತ್ತಿದ್ದರು. ಅಣ್ಣ ವೈರಿಂಗ್‌ ಮಾಡುವಾಗ ನಾನೂ ಅದೇ ಕೆಲಸವನ್ನು ಮಾಡುತ್ತಿದ್ದೆ. ಆದರೆ, ಅಪ್ಪ ನಮ್ಮನ್ನೆಲ್ಲ ಬಿಟ್ಟು ಬೇಗನೇ ಹೋದರು. 7ನೆಯ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡುವುದು ಸಾಧ್ಯವಾಯಿತು. ಅಪ್ಪನಿಲ್ಲದೇ ಇದ್ದಾಗ ಹೆಣ್ಣುಮಕ್ಕಳು ಹೊರಗೆ ದುಡಿಯಲು ಹೋಗುವುದು ಬೇಡ ಎಂಬ ಕಾಳಜಿ ಅಮ್ಮನದು. ಆದರೂ ಉದ್ಯೋಗಸ್ಥೆಯಾಗಬೇಕು ಎಂದು ನಾನು ಸೀರೆಗೆ ಗೊಂಡೆ ಹಾಕುವುದು ಕಲಿತೆ. ಇಂಗ್ಲಿಷ್‌ ಕಲಿತರೆ ಇನ್ಫೋಸಿಸ್‌ನಲ್ಲಿ ಉದ್ಯೋಗ ಸಿಗುತ್ತದೆ ಎಂಬ ಆಸೆಯಿಂದ ಅದನ್ನೂ ಪ್ರಯತ್ನಿಸಿದೆ. ಅಷ್ಟರಲ್ಲಿ ಅಮ್ಮ, ಅಣ್ಣ ನನ್ನನ್ನು ಒಳ್ಳೆಯ ಮನೆಗೆ ಮದುವೆ ಮಾಡಿಕೊಟ್ಟ ಬಳಿಕ ನಾನು ನೆಲ್ಯಾಡಿಗೆ ಬಂದೆ.

ಪತಿ ರಮೇಶ್‌ ಪೂಜಾರಿ, ಮಗಳು ಅಮೃತಾ, ಪುಟ್ಟ ಮಗು ಧನಂಜಯ್‌ ಜೊತೆ ಜೀವನ ಸುಲಭವೇನೂ ಆಗಿರಲಿಲ್ಲ. ನಾನೇ ದುಡಿಯುವುದು ಅನಿವಾರ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣ ಆಯಿತು. ನಾವೇ ಒಂದು ಮನೆ ಮಾಡಿಕೊಳ್ಳಬೇಕಾದಾಗ, ಒಡವೆ ಮಾರಿ ಒಂದಿಷ್ಟು ಜಾಗ ಖರೀದಿಸಿ ಮನೆ ಕಟ್ಟಿಕೊಂಡದ್ದಾಯಿತು. ಆದರೆ, ಖರ್ಚುವೆಚ್ಚಗಳನ್ನು ಸರಿದೂಗಿಸುವುದು ದೊಡ್ಡ ಸವಾಲೇ ಆದಾಗ, ನಾನು ರಿಕ್ಷಾ ಓಡಿಸುತ್ತೇನೆ ಎಂದು ಅವರಲ್ಲಿ ಹೇಳಿದೆ. ಅವರು ಯಾವುದಕ್ಕೂ ಬೇಡ ಎನ್ನುವವರಲ್ಲ. ದುಡಿಮೆ ಮಾಡುವುದಾದರೆ ಪ್ರೋತ್ಸಾಹ ನೀಡುವವರು. ಹಾಗಾಗಿ, ಬ್ಯಾಂಕ್‌ ಸಾಲಮಾಡಿ ರಿಕ್ಷಾ ಖರೀದಿಸಿದೆವು.

ಬಡತನ ಎನ್ನುವುದು ಎಲ್ಲ ಅವಮಾನಗಳನ್ನು ಮೆಟ್ಟಿ ನಿಲ್ಲುವ ಧೈರ್ಯವನ್ನು ಕೊಡುತ್ತದೆ. ಆಟೋರಿಕ್ಷಾ ಓಡಿಸಲು ಶುರು ಮಾಡಿದಾಗ ಸ್ವಲ್ಪ ಮುಜುಗರ ಆಗಿದ್ದು ನಿಜ. ಆದರೆ, ಕೆಲಸವನ್ನು ಮಾಡಲೇಬೇಕಿತ್ತು. ಬ್ಯಾಂಕ್‌ ಸಾಲ ಕಟ್ಟಿ, ಉಳಿದ ಹಣದಲ್ಲಿ ಮನೆ ನಿರ್ವಹಣೆ ಮಾಡಬೇಕಿತ್ತು. ನೆಲ್ಯಾಡಿಯ ಆಸುಪಾಸಿನ ಹಳ್ಳಿಗಳಿಗೆ ಬಸ್ಸು ವ್ಯವಸ್ಥೆ ಇಲ್ಲದೇ ಇರುವುದರಿಂದ ಆಟೋರಿಕ್ಷಾಕ್ಕೆ ಜನರು ಬರುತ್ತಾರೆ. ಹಗಲು ಹೊತ್ತಿನಲ್ಲಿ ಓಡಾಟಕ್ಕೆ ಯಾವುದೇ ಸಮಸ್ಯೆ ಇಲ್ಲ. ಸ್ಟಾಂಡ್‌ನ‌ಲ್ಲಿರುವ ಇತರ ಆಟೋರಿಕ್ಷಾದವರು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ.

ಮಹಿಳಾ ಪ್ರಯಾಣಿಕರು ರಾತ್ರಿ ವೇಳೆ ಆಟೋರಿಕ್ಷಾ ಬಾಡಿಗೆಗೆ ಕರೆದರೆ ಆಗೀಗ ಹೋದದ್ದುಂಟು. ಸಂಸಾರ ಸಾಗಿಸುವುದಕ್ಕೆ ಬೇಕಾದಷ್ಟು ದುಡಿಮೆ ಮಾಡುವುದು ಇಷ್ಟರವರೆಗೆ ಸಾಧ್ಯವಾಗಿದೆ. ಇತರ ವೃತ್ತಿಗಳಲ್ಲಿ ಇದ್ದಂತೆಯೇ ಈ ವೃತ್ತಿಯಲ್ಲಿಯೂ ಸವಾಲು ಇದ್ದೇ ಇದೆ. ಮಹಿಳೆ ಎಂಬ ಕಾರಣಕ್ಕೆ ವಿಶೇಷವಾದ ಸವಾಲು ಎಂದು ಹೇಳುವಂಥದ್ದೇನೂ ಇಲ್ಲ. ಒಂದು ವರ್ಷ ಮೂರು ತಿಂಗಳಿಂದ ಈ ಕೆಲಸದಲ್ಲಿದ್ದೇನೆ. ನಡು ರಸ್ತೆಯಲ್ಲಿ ಆಟೋ ರಿಕ್ಷಾ ಹಾಳಾದಾಗ ಸ್ವಲ್ಪ ಆತಂಕವಾಗುತ್ತದೆ.

ಮನೆಯ ಬಳಿ ಸ್ವಲ್ಪ ಜಾಗವನ್ನು ನನ್ನ ಮಾವನವರು ಕೊಟ್ಟಿದ್ದಾರೆ. ಅಡಿಕೆ ಗಿಡಗಳನ್ನು ಹಾಕಿದ್ದೇನೆ. ಅಲ್ಲಿ ನೀರಿನ ವ್ಯವಸ್ಥೆ ಇಲ್ಲ. ನೀರಿನ ವ್ಯವಸ್ಥೆ ಮಾಡಿಕೊಂಡು ಸ್ವಲ್ಪ ಕೃಷಿ ಮಾಡಬೇಕು ಎಂಬ ಆಶೆಯಿದೆ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತ ಇದ್ದೇನೆ. ಸದ್ಯಕ್ಕಂತೂ ಆಟೋರಿಕ್ಷಾವೇ ಬಾಳಿಗೆ ಆಧಾರ.

ಪ್ರೇಮಾ, ನೆಲ್ಯಾಡಿ

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.