![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 20, 2020, 12:56 PM IST
ಕೋಟ : ಕೋವಿಡ್-19 ವೈರಸ್ ವಿರುದ್ಧ ಹೋರಾಟದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಜ.22ರಂದು ರವಿವಾರ ಕರೆ ನೀಡಿದ ಜನತಾ ಕರ್ಪ್ಯೂ ಬೆಂಬಲಿಸಿ ಯಶಸ್ವಿಗೊಳಿಸುವ ಸಲುವಾಗಿ ಕೋಟ ಹೋಬಳಿಯ ಬಿಲ್ಲಾಡಿ ಗ್ರಾ.ಪಂ. ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಗ್ರಾಮಸ್ಥರು ಹಾಗೂ ಸರ್ವ ಸದಸ್ಯರ ತುರ್ತುಸಭೆ ನಡೆಯಿತು.
ಕೋವಿಡ್-19 ವೈರಸ್ ಹಾಗೂ ಜನತಾ ಕರ್ಪ್ಯೂ ಕುರಿತು ಗ್ರಾ.ಪಂ ವ್ಯಾಪ್ತಿಯ ಜನರಿಗೆ ಮನವರಿಕೆ ಮಾಡುವ ಹಾಗೂ ಜನಜಾಗೃತಿ ಮೂಡಿಸುವ ಕುರಿತು ಕರಪತ್ರ ಬಿಡುಗಡೆಗೊಳಿಸಲಾಯಿತು. ಗ್ರಾ.ಪಂ ವ್ಯಾಪ್ತಿಯ ಜನಸಂದಣಿ ಸೇರುವ ಗೇರುಬೀಜ ಕಾರ್ಖಾನೆ, ಕಟ್ಟಿಂಗ್ ಶೆಡ್ಡ್, ಹೋಟೆಲ್, ಅಂಗಡಿಗಳು,ಹಾಲು ಉತ್ಪಾದಕ ಸಹಕಾರಿ ಸಂಘಗಳು , ದೇವಸ್ಥಾನಗಳಲ್ಲಿ ಕರಪತ್ರವನ್ನು ವಿತರಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಉಪಸ್ಥಿತರಿದ್ದ ಸರ್ವಸದಸ್ಯರು ಈ ಕುರಿತು ಬೆಂಬಲ ಸೂಚಿಸಿ ತಮ್ಮ ವಾರ್ಡ್ ಗಳಲ್ಲಿ ಜಾಗೃತಿ ಕಾರ್ಯಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಗ್ರಾ.ಪಂ ಉಪಾದ್ಯಕ್ಷೆ ಸರಸ್ವತಿ ಬಾಯಿ, ಸದಸ್ಯರಾದ ರಾಮನಾಯ್ಕ್,ಅರುಣ್ ಶೆಟ್ಟಿ, ಶರತ್ ಶೆಟ್ಟಿ, ಎನ್.ಆರ್. ಸುರೇಶ್ , ಚಂದ್ರ ಹಾಂಡ, ಗುಲಾಬಿ, ಶಾರದ ಹಾಗೂ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾ.ಪಂ ಪಿಡಿಒ ಪ್ರಶಾಂತ್ ಕಾರ್ಯಕ್ರಮ ನೆರವೇರಿಸಿದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.