ಕಾಲಜ್ಞಾನದಲ್ಲಿ ಕೊರೊನಾಗೆ ಕೋಟಿ ಬಲಿ
Team Udayavani, Mar 20, 2020, 1:16 PM IST
ಚಿಂತಾಮಣಿ: ದಿನೇ ದಿನೆ ಕೋವಿಡ್ 19 ವೈರಸ್ ಹೆಚ್ಚುತ್ತಿರುವುದು ಕಂಡರೆ ದೈವ ಪುರುಷರೆಂದೇ ಪ್ರಸಿದ್ಧಿ ಪಡೆದಿದ್ದ ಆಂಧ್ರದ ಪೂತಲೂರು ವೀರಬ್ರಹ್ಮಯ್ಯ ಹೇಳಿದ ಪ್ರತಿಯೊಂದು ಮಾತು ಸತ್ಯವಾಗಿದೆ. ಅವರು ತಮ್ಮ ಕಾಲಜ್ಞಾನದಲ್ಲಿ 300 ವರ್ಷಗಳ ಹಿಂದೆಯೇ ಕೊರಂಗಿ (ಕೊರೊನಾ) ಕಾಯಿಲೆ ಬಗ್ಗೆ ದಾಖಲಿಸಿದ್ದು, ಸದ್ಯ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಮರಣ ಮೃದಂಗ ಬಾರಿಸುತ್ತಿದೆ. ವೀರಬ್ರಹ್ಮಯ್ಯ ತಮ್ಮ ಕಾಲಜ್ಞಾನದಲ್ಲಿ ಬರೆದ ಪ್ರತಿಯೊಂದು ವಿಚಾರವು 20-21 ನೇ ಶತಮಾನದಲ್ಲಿ ನಡೆದಿದ್ದರಿಂದ ಕಾಲಜ್ಞಾನ ನೂರಕ್ಕೆ ನೂರರಷ್ಟು ಸತ್ಯ ಎನ್ನುವಂತಾಗಿದೆ.
ಕಾಲಜ್ಞಾನದಲ್ಲೇನಿದೆ ?: ಪೂತಲೂರಿನ ವೀರಬ್ರಹ್ಮಯ್ಯನವರು ಬರೆದ ಕಾಲಜ್ಞಾನದ 140ನೇ ಪದ್ಯದಲ್ಲಿ “ಈಶಾನ್ಯ ದಿಕ್ಕಿನ ವಿಷಗಾಳಿ ಪುಟ್ಟೇನು ಲಕ್ಷಲಾದಿ ಪ್ರಜಲು ಸಚ್ಚೆರಯ್ಯ ಕೊರಂಗಿಯನು ಜಬ್ಬು ಕೋಟಿಮಂದಿಕಿ ತಗುಲಿ ಕೊಡಿಲಾಗಾ ತೂಗಿ ಸಚ್ಚೇರಯ್ಯ’ ಎಂದು ದಾಖಲಾಗಿದೆ. ಅಂದರೆ ಬ್ರಹ್ಮಯ್ಯ ಈ ಪದ್ಯದಲ್ಲಿ ಚೀನಾವನ್ನು ಈಶಾನ್ಯ ದಿಕ್ಕಿಗೆ ಹೋಲಿಸಿದ್ದು, ಕೋವಿಡ್ 19 ವನ್ನು ಕೊರಂಗಿ ಎಂದು ಬರೆದಿದ್ದು, ಬ್ರಹ್ಮಯ್ಯರು ಬರೆದ ಎಲ್ಲಾ ವಿಷಯಗಳು ಸತ್ಯ ಎನ್ನುವಂತಾಗಿದೆ. ಕೊರೊನಾಗೆ ಕೋಟಿ ಮಂದಿ ಬಲಿಯಾಗುವರು ಎಂದು ಪ್ರಸ್ತಾಪಿಸಲಾಗಿದ್ದು, ಜನರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ. ಕಾಲಜ್ಞಾನದ ಒಂದು ತುಣುಕು ಸಂಪೂರ್ಣ ವಿವರದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರವಚನಕಾರ ಟಿಎಲ್ ಆನಂದ್, ಅತೀಂದ್ರಿಯ ಜ್ಞಾನ ಪಡೆದ ಜ್ಞಾನಿಗಳು ಕಾಲಜ್ಞಾನ-ಭವಿಷ್ಯವಾಣಿಯನ್ನು ನುಡಿದಿರುತ್ತಾರೆ. ಅಂತಹ ಕಾಲಜ್ಞಾನಿಗಳಲ್ಲಿ ಕೈವಾರದ ತಾತಯ್ಯನವರು ಹಾಗೂ ಪೂತಲೂರಿನ ವೀರಬ್ರಹ್ಮಯ್ಯ ನವರು ಪ್ರಮುಖರು. ವೀರ ಬ್ರಹ್ಮಯ್ಯನವರು ರಚಿಸಿರುವ ಕಾಲಜ್ಞಾನದಲ್ಲಿ ಮುಂದೊಂದು ದಿನ “”ಕೋರಂಗಿ” ಎನ್ನುವ ಹೊಸ ಕಾಯಿಲೆಗೆ ಹೆಚ್ಚು ಜನ ಮರಣಿಸುವರು ಎಂಬ ಉಲ್ಲೇಖವಿರುವುದಾಗಿ ತಿಳಿದುಬಂದಿದೆ ಎಂದರು. ಒಟ್ಟಾರೆ ಕಾಲಜ್ಞಾನ ಮಾನವಕೋಟಿಗೆ ಎಚ್ಚರಿಕೆಯ ಗಂಟೆ ಎಂದೇ ಹೇಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chintamani: ಭೀಕರ ಅಪಘಾತ; ಬಸ್ ಚಕ್ರದ ಕೆಳಗೆ ಬೈಕ್ ಸಿಲುಕಿ ದಂಪತಿ ಸಾವು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kottigehara: ನಾಯಿ ದಾಳಿಯಿಂದ ಮಗುವಿಗೆ ಗಾಯ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.