ಜನರಲ್ಲಿ ಆತಂಕ ಸೃಷ್ಟಿಸಿದ ದಿಢೀರ್ ಮಳೆ
Team Udayavani, Mar 20, 2020, 9:35 PM IST
ಬೆಂಗಳೂರು: ಕೋವಿಡ್ 19 ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆ ನಗರದಲ್ಲಿ ದಿಢೀರ್ ಮಳೆ ಆಗಮನವಾಗಿದ್ದು, ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ!
ಸಾಮಾನ್ಯವಾಗಿ ತಾಪಮಾನ ಹೆಚ್ಚಾದಾಗ ವೈರಸ್ ಹರಡುವುದು ಕಡಿಮೆ. ಆದರೆ, ಮಳೆ ಮತ್ತು ತಂಪಾದ ವಾತಾವರಣ ಉಂಟಾದರೆ ತಾಪಮಾನ ಕಡಿಮೆಯಾಗಲಿದೆ. ಮೂಲಗಳ ಪ್ರಕಾರ ಇನ್ನು 2 ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ.
ನಗರದಲ್ಲಿ ಶುಕ್ರವಾರ ಮಧ್ಯಾಹ್ನ 35.2 ಗರಿಷ್ಠ ತಾಪಮಾನ ದಾಖಲಾಗಿದ್ದು, ಸಂಜೆ 4 ಗಂಟೆಯ ನಂತರ ತಂಪಾದ ವಾತಾವರಣ ಕಂಡುಬಂದಿತು. ನಗರದ ಕೆಂಗೇರಿ, ಮೆಜೆಸ್ಟಿಕ್, ಮಲ್ಲೇಶ್ವರ, ಜಯನಗರ, ಹಂಪಿನಗರ, ಹಲಸೂರು, ಶಿವಾಜಿನಗರ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಕೋವಿಡ್ 19 ಹಿನ್ನೆಲೆ ಜನರ ಓಡಾಟ ಕಡಿಮೆಯಾಗಿತ್ತು.
ಮಂತ್ರಿಮಾಲ್ ಮುಂಭಾಗ, ನಾಯಂಡಹಳ್ಳಿ ಸಿಗ್ನಲ್ ಸೇರಿದಂತೆ ಕೆಳಸೇತುವೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರಿಗೆ ತೊಂದರೆ ಉಂಟಾಯಿತು. ಪಾಲಿಕೆ ಸಿಬ್ಬಂದಿ ತಗ್ಗು ಪ್ರದೇಶದಲ್ಲಿ ನಿಂತ ನೀರನ್ನು ತೆರವುಗೊಳಿಸಿದರು.
ಎಲ್ಲೆಲ್ಲಿ ಎಷ್ಟು ಮಳೆ?
ಬಿದರಹಳ್ಳಿ 44.5ಮಿ.ಮೀ., ಕೆಂಗೇರಿ 20.5 ಮಿ.ಮೀ, ಚಿಕ್ಕ ಬಾಣಾವರ 18 ಮಿ.ಮೀ, ಸಂಪಂಗಿ ರಾಮನಗರ 13 ಮಿ.ಮೀ, ರಾಜರಾಜೇಶ್ವರಿ ನಗರ 12 ಮಿ.ಮೀ, ವಿದ್ಯಾರಣ್ಯಪುರ 12 ಮಿ.ಮೀ, ಚಾಮರಾಜಪೇಟೆ 12 ಮಿ.ಮೀ, ಬಸವನಗುಡಿ 9 ಮಿ.ಮೀ, ಬಿಟಿಎಂ ಲೇಔಟ್ 9.5 ಮಿ.ಮೀ ಮಳೆಯಾಗಿರುವುದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.