ಮನೆಯ ಮೆರಗು ಅಡಿಕೆ ಮರದ ಪೀಠೊಪಕರಣ
Team Udayavani, Mar 21, 2020, 4:16 AM IST
ಬಹುಪಯೋಗಿಯಾದ ಅಡಿಕೆ ಮರವು ಇಂದು ಅನೇಕ ರೈತರಿಗೆ, ಕುಶಲ ಕರ್ಮಿಗಳಿಗೆ ವರದಾನವಾಗಿದೆ. ಅಡಿಕೆಯನ್ನು ಬೆಳೆದ ರೈತನಿಗೆ ವರದಾನವಾದರೆ, ಇನ್ನೂ ಅಡಿಕೆ ಮರ, ಎಲೆ ಹಾಗೂ ಅದರ ದಿಂಬುಗಳಿಂದ ಮನೆಯ ಪಿಠೊಪಕರಣಗಳನ್ನು ತಯಾರಿಸುವ ಮೂಲಕ ಅಡಿಕೆ ಕುಶಲ ಕರ್ಮಿಗಳಿಗೆ ವರದಾನವಾಗಿದೆ.
ಅಡಿಕೆಯನ್ನು ಕೇವಲ ಪಾನ್‌ಗಳಲ್ಲಿ ಮಾತ್ರ ಬಳಸಬಹುದು ಎಂಬ ಕಲ್ಪನೆ ತಪ್ಪು, ಅಡಿಕೆಯ ಮರದಿಂದ ಬಿದ್ದ ಎಲೆಗಳು, ದಿಂಬುಗಳಿಂದ ಪೀಠೊಪಕರಣಗಳನ್ನು ತಯಾರಿಸಲಾಗುತ್ತದೆ.
ಅಡಿಕೆ ಮರದ ಉರುವಲಿಗಾಗಿ, ಅಟ್ಟ ಕಟ್ಟಲು ಬಳಸ್ಪಲ್ಪಟ್ಟರೆ, ಪೂಜೆಗೆ ಕೂಡ ಅಡಿಕೆ ಸಿಂಗಾರ ಬಹು ಶ್ರೇಷ್ಠವಾದುದು.
ಅಡಿಕೆ ಮರದಿಂದ ಮನೆಯ ಪೀಠೊಪಕರಣಗಳ ಬಳಕೆಯಿಂದ ಮನೆಯ ಆಂತರಿಕ ಸೌಂದರ್ಯ ಹಾಗೂ ಮನೆಗೆ ಶ್ರೀಮಂತಿಕೆ ಕಳೆಯ ಜತೆಗೆ ಪರಿಸರ ಸ್ನೇಹಿಯಾದ ವಾತಾವರಣವನ್ನು ನಿರ್ಮಿಸಿಬಹುದಾಗಿದೆ.
ಏನೆಲ್ಲಾ ತಯಾರಿಸಬಹುದು
ಅಡಿಕೆ ಮರದಿಂದ ಮನೆಯ ಹೊರಾಂಗಣ ಗೇಟ್ ನಿರ್ಮಾಣ, ಮನೆಯ ಅಟ್ಟ ಕಟ್ಟಲು , ಟೇಬಲ್, ಕಬೋರ್ಡ್, ಮಂಚ ಹಾಗೂ ದೇವರ ಮನೆಯ ದೇವರ ಸ್ಥಾನ ಜತೆ ಜತೆಗೆ ಮುಂತಾದ ರೀತಿಯಾಗಿ ಉಪಕರಣಗಳನ್ನು ತಯಾರಿಸಬಹುದು. ಇದು ಕೂಡ ಮನೆಯ ಆರೋಗ್ಯಕ್ಕೆ ಒಳ್ಳೆಯದು.
ಇನ್ನು ಅಡಿಕೆ ಮರದಿಂದ ತಯಾರಿಸಲಾಗುವ ಪೀಠೊಪಕರಣಗಳ ಬಳಕೆ ಮನೆಯ ಪರಿಸರಕ್ಕೆ ಒಳ್ಳೆಯದು ಏಕೆಂದರೆ, ಮರದ ದಿಂಬುವಿನ ಪಿಠೊಪಕರಣಗಳಿಂದ ಮನೆಯ ಪರಿಸರವನ್ನು ಸುವ್ಯವಸ್ಥಿತವಾಗಿಡಬಹುದು.
ಬಾಳಿಕೆ
ಅಡಿಕೆ ಮರದ ಪಿಠೊಪಕರಣಗಳ ಬಳಕೆಯೂ, ಮನೆಯ ಪರಿಸರಕ್ಕೆ ಒಳ್ಳೆಯದು ಜತೆ ಜತೆಗೆ ಅತಿ ಹೆಚ್ಚು ದಿನಗಳು ಬಾಳಿಕೆ ಬರುತ್ತದೆ ಎಂದು ಕುಶಲ ಕರ್ಮಿಗಳು ಅಭಿಪ್ರಾಯಪಡುತ್ತಾರೆ. ಇನ್ನು ಅಡಿಕೆ ಮರದ ಪೀಠೊಪಕರಣಗಳನ್ನು ಸರಿಯಾಗಿ ಮೊದಲ ಮೂರು ವರ್ಷ ಚೆನ್ನಾಗಿ ನೋಡಿಕೊಂಡರೆ, ಸರಿ ಸುಮಾರು 20 ವರ್ಷಗಳ ಬಾಳಿಕೆ ಬರುತ್ತವೆ.
ಸಾಂಪ್ರಾದಾಯಿಕ ಸೌಂದರ್ಯ
ಮನೆಗಳಲ್ಲಿ ಲೋಹಗಳಿಂದ ತಯಾರಿಸಿದ ಪೀಠೊಪಕರಣಗಳ ಬಳಕೆಗಿಂತ ಮರದಿಂದ ತಯಾರಿಸಿದ ಪಿಠೊಪಕರಣಗಳು ಮನೆಯ ಸಾಂಪ್ರದಾಯಿಕ ಸೌಂದರ್ಯವನ್ನು ಹೆಚ್ಚಿಸುತ್ತದೆ ಹಾಗೂ ಮನೆಯಲ್ಲಿ ಒಂದು ನೆಮ್ಮದಿಯ ವಾತಾವರಣವನ್ನು ತಂದು ಕೊಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.