ಕೋವಿಡ್-19 ನಿರ್ಲಕ್ಷ್ಯ:ಗಾಯಕಿ ವಿರುದ್ಧ ಎಫ್ಐಆರ್, ಸ್ವಯಂ ನಿರ್ಬಂಧಕ್ಕೊಳಗಾದ ರಾಜಕೀಯ ನಾಯಕರು
Team Udayavani, Mar 21, 2020, 8:56 AM IST
ಲಕ್ನೋ: ಬಾಲಿವುಡ್ ಖ್ಯಾತ ಗಾಯಕಿ ಕನಿಕಾ ಕಪೂರ್ ವಿರುದ್ಧ ‘ನಿರ್ಲಕ್ಷ್ಯ ಮತ್ತು ಅಸಹಕಾರ’ ಐಪಿಸಿ ಸೆಕ್ಷನ್ 269, 270, 188 ರ ಅಡಿಯಲ್ಲಿ ಸರೋಜಿನಿ ನಗರ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಇತ್ತೀಚಿಗಷ್ಟೆ ಯುಕೆಯಿಂದ ಮರಳಿದ್ದ ಈ ಗಾಯಕಿಗೆ ಶುಕ್ರವಾರ ಕೋವಿಡ್ 19 ಪಾಸಿಟಿವ್ ಎಂದು ವರದಿ ಬಂದಿತ್ತು.
ಈ ಕಾರಣದಿದಂದ ಗಾಯಕಿ ಕನಿಕಾ ಕಫೂರ್ ಆರೋಗ್ಯ ಸಮಸ್ಯೆ ಮಾತ್ರವಲ್ಲದೆ, ಇದೀಗ ಕಾನೂನಾತ್ಮಕ ತೊಡಕನ್ನು ಎದುರಿಸುವಂತಾಗಿದೆ. ದೂರಿನಲ್ಲಿರುವಂತೆ ಮಾರ್ಚ್ 14 ರಂದು ಕನ್ನಿಕಾ ಅವರು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಸೊಂಕಿಗೆ ಒಳಗಾಗಿದ್ದರು. ಆದರೆ ಸ್ವಯಂ ಪ್ರತ್ಯೇಕತೆಗೆ ಒಳಗೊಳ್ಳದೆ ಅನೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಕನಿಕಾ ಅವರು ತಂಗುತ್ತಿದ್ದ ತಾಜ್ ಹೊಟೇಲ್ ರೂಮ್ ಒಂದನ್ನು ಎರಡು ದಿನಗಳವರೆಗೂ ಮುಚ್ಚಲಾಗಿದೆ.
ಬಹುಜನ ಸಮಾಜವಾದಿ ಪಕ್ಷದ ಸಂಸದ ಅಕ್ಬರ್ ಅಹಮ್ಮದ್ ಡಂಪಿ ಅವರ ಸೋದರ ಸಂಬಂಧಿಯಾಗಿರುವ ಅದಿಲ್ ಅಹಮ್ಮದ್ ಅವರ ಮನೆಯಲ್ಲಿ ಔತಣ ಕೂಟ ಏರ್ಪಟ್ಟಿತ್ತು. ಈ ಪಾರ್ಟಿಯಲ್ಲಿ ಕನ್ನಿಕಾ ಸೇರಿ ವಿವಿಧ ಪಕ್ಷಗಳ ರಾಜಕೀಯ ನಾಯಕರು ಭಾಗವಹಿಸಿದ್ದರು
ರಾಜಸ್ಥಾನದ ಮಾಜೀ ಮುಖ್ಯಮಂತ್ರಿ ವಸುಂಧರಾ ರಾಜೇ, ಅವರ ಪುತ್ರ ಹಾಗೂ ಸಂಸದರಾಗಿರುವ ದುಷ್ಯಂತ್ ಸಿಂಗ್ ಅವರ ಪತ್ನಿ ನಿಹಾರಿಕಾ, ಉತ್ತರಪ್ರದೇಶದ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ಅವರ ಪತ್ನಿ ಬಸುಂದರಾ ಕುಮಾರಿ, ರಿತು ಸಿಂಗ್ ಸೇರಿದಂಥೆ ಹಲವಾರು ರಾಜಕೀಯ ಮತ್ತು ಸಿನಿ ಕ್ಷೇತ್ರದ ಗಣ್ಯರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು.
ಕನಿಕಾ ಅವರ ತಂದೆ ರಾಜೀವ್ ಕಪೂರ್ ಅವರು ಹೇಳುವಂತೆ ಲಕ್ನೋಗೆ ಬಂದ ನಂತರ ಕನಿಕಾ ಒಟ್ಟು ಮೂರು ಪಾರ್ಟಿಗಳಲ್ಲಿ ಭಾಗವಹಿಸಿದ್ದಾಳೆ. ಈ ಮೂರು ವಿವಿಧ ಪಾರ್ಟಿಗಳಲ್ಲಿ ಕನಿಕಾ ಏನಿಲ್ಲವೆಂದರೂ ಸುಮಾರು 400 ಜನರನ್ನು ಭೇಟಿಯಾಗಿರುವ ಸಾಧ್ಯತೆಗಳಿವೆ ಎಂಬುದು ಆಕೆಯ ತಂದೆಯ ಅಂದಾಜು. ಆದರೆ ತಂದೆಯ ಮಾತನ್ನು ಅಲ್ಲಗಳೆದಿರುವ ಕನಿಕಾ, ತಾನು ಒಂದು ಪಾರ್ಟಿಯಲ್ಲ ಮಾತ್ರವೇ ಭಾಗವಹಿಸಿರುವುದಾಗಿ ಹೇಳಿಕೊಂಡಿದ್ದಾಳೆ.
ತನ್ನಲ್ಲಿ ಕೋವಿಡ್ 19 ವೈರಸ್ ಲಕ್ಷಣಗಳು ಪಾಸಿಟಿವ್ ಇರುವುದು ಪತ್ತೆಯಾದ ಬಳಿಕ ಇದೀಗ ಕನಿಕಾಳನ್ನು ಲಕ್ನೋದಲ್ಲಿರುವ ಸಂಜಯ್ ಗಾಂಧಿ ಪೋಸ್ಟ್ ಗ್ರ್ಯಾಜ್ಯುವೇಟ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈಕೆಯ ಸಂಪರ್ಕಕ್ಕೆ ಬಂದಿರುವವರ ಪೈಕಿ ವಸುಂಧರಾ ರಾಜೆ ಸಿಂಧಿಯಾ, ದುಷ್ಯಂತ್ ಸಿಂಗ್ ಮೊದಲಾದವರು ಇದೀಗ ಸ್ವಯಂ ನಿರ್ಬಂಧ ವಿಧಿಸಿಕೊಂಡು ಪ್ರತ್ಯೇಕವಾಗಿ ಇರಲು ನಿರ್ಧರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi; ಎಂಜಿಎಂ ಅಮೃತೋತ್ಸವ: ಕಣ್ಮನ ಸೆಳೆದ ವಸ್ತು ಪ್ರದರ್ಶನ
Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.