ಹೊಳಲ್ಕೆರೆ ಪೊಲೀಸ್ ಸಿಬ್ಬಂದಿಗೂ ಕೊರೊನಾ ಜಾಗೃತಿ
Team Udayavani, Mar 21, 2020, 5:29 PM IST
ಹೊಳಲ್ಕೆರೆ: ಕೋವೀಡ್ 19 ವೈರಸ್ ಸೋಂಕು ಜಿಲ್ಲೆಯಲ್ಲಿ ಇನ್ನು ಕಂಡು ಬಂದಿಲ್ಲವಾದ್ದರಿಂದ ಪ್ರತಿಯೊಬ್ಬರು ಸ್ವಚ್ಛತೆ ಮೂಲಕ ವೈರಸ್ ಹರಡುವಿಕೆ ತಡೆಗಟ್ಟಬೇಕಿದ್ದು, ಈ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿ ಶ್ರಮಿಸಬೇಕು ಎಂದು ಜಿಲ್ಲಾ ಎಎಸ್‌ಪಿ ನಂವಿಗಾವಿ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಕೊರೊನಾ ವೈರಸ್ ಕುರಿತು ಏರ್ಪಡಿಸಿದ್ದ ಜಾಗೃತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮವಹಿಸುವ ಉದ್ದೇಶದಿಂದ ಎಲ್ಲೆಡೆ ವೈರಸ್ ಕುರಿತು ಜಾಗೃತಿ ಮೂಡಿಸುತ್ತಿದ್ದರೂ, ಪೊಲೀಸ್ ಇಲಾಖೆ ಸಿಬ್ಬಂದಿ ಸಾರ್ವಜನಿರೊಂದಿಗೆ ಸಂಪರ್ಕಿಸುವ ಸಮಯದಲ್ಲಿ ಎಚ್ಚರಿಗೆ ವಹಿಸಬೇಕಿದೆ. ಬಂದೋಬಸ್ತ್ ಮಾಡುವಾಗ, ಆರೋಪಿ ಪತ್ತೆ ಮಾಡುವಾಗ, ಠಾಣೆಗೆ ಬರುವಂತಹ ದೂರುದಾರರು ಮತ್ತಿತರ ಕೆಲಸಗಳನ್ನು ನಿರ್ವಹಣೆ ಮಾಡುವ ಸಮಯದಲ್ಲಿ ವೈರಸ್ ಸೋಂಕಿತರು ಕಂಡು ಬಂದಲ್ಲಿ ತಕ್ಷಣ ಸಮೀಪದ ಆರೋಗ್ಯಾಲಯಕ್ಕೆ ಮಾಹಿತಿ ನೀಡಬೇಕು. ವಿದೇಶಗಳಿಂದ ಬರುವಂತ ವ್ಯಕ್ತಿಗಳ ಕುರಿತು ಮಾಹಿತಿ ಸಂಗ್ರಹಿಸಿ ವೈರಸ್ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಪೊಲೀಸರು ತಮ್ಮ ಆರೋಗ್ಯ ರಕ್ಷಣೆ ಜತೆ ಸಾರ್ವಜನಿಕರ ಆರೋಗ್ಯ ರಕ್ಷಣೆ ಮಾಡುವುದು ಮತ್ತು ಸೂಕ್ತ ಕಾನೂನು ರಕ್ಷಣೆ ನೀಡಬೇಕು ಎಂದು ತಿಳಿಸಿದರು.
ಕೊರೊನಾ ವೈರಸ್ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಆರೋಗ್ಯ ಶಿಕ್ಷಣಾ ಧಿಕಾರಿ ಡಾ.ಚಿದಾನಂದ್ ಮಾತನಾಡಿ, ವೈರಸ್ ಸೋಂಕಿತರಿಂದ ಕೆಮ್ಮು, ಸೀನುಗಳಿಂದ ಹೊರಹೊಮ್ಮುವ ನೀರಿನಂತಂಹ ಹನಿಗಳಲ್ಲಿರುವ ಕೊರೊನಾ ವೈರಸ್ ಸುಮಾರು 8 ಗಂಟೆಗಳ ಕಾಲ ನಮ್ಮ ಸುತ್ತಮುಲ್ಲಿರುವ ವಸ್ತುಗಳ ಮೇಲೆ ಜೀವಂತವಾಗಿರುತ್ತದೆ. ಅಂತಹ ಸಮಯದಲ್ಲಿ ವೈರಸ್ ನಾವುಗಳು ಮುಟ್ಟಿ ದೇಹದ ಕಣ್ಣು, ಮೂಗು, ಬಾಯಿ ಸೇರಿದಂತೆ ವಿವಿಧ ಭಾಗದಲ್ಲಿ ಸ್ವರ್ಶಿಸಿದಾಗ ದೇಹ ಸೇರಿಕೊಳ್ಳುವ ಸಾಧ್ಯತೆ ಇದೆ.
ಹಾಗಾಗಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು ಎಂದರು. ಡಾ.ದಿವ್ಯಾ ಕೈಗಳನ್ನು ಸ್ವತ್ಛಗೊಳಿಸುವ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಡಿವೈಎಸ್‌ಪಿ ಪಾಂಡುರಂಗ, ಸಿಪಿಐ ರವೀಶ್, ಪಿಎಸ್ ಸ್ವಾತಿ, ಚಿಕ್ಕಜಾಜೂರು ಪಿಎಸ್ ಮೋಹನ್, ತಾ.ಪಂಇಒ ತಾರಕನಾಥ, ಮುಖ್ಯಾಧಿಕಾರಿ ಎ.ವಾಸೀಂ, ಡಾ.ಆನಂದ, ಆರೋಗ್ಯಾಧಿಕಾರಿ ಚಂದ್ರಶೇಖರ್, ಎಲ್ಲಾ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ಹೊಸ ಸೇರ್ಪಡೆ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.