ಶಾಲಾ ಗೋಡೆಗೆ ಚಿತ್ರ ಬಿಡಿಸಿದ ಶಿಕ್ಷಕರು!
Team Udayavani, Mar 21, 2020, 6:35 PM IST
ಮುದಗಲ್ಲ: ಕೊರೊನಾ ರಜೆ ಬಳಸಿಕೊಂಡ ಸಮೀಪದ ತಲೇಖಾನ್ ಪ್ರೌಢ ಶಾಲೆಯ ಶಿಕ್ಷಕರು ಶಾಲೆಯ ಅಂದಚಂದ ಹೆಚ್ಚಿಸುವ ಕಾಯಕಕ್ಕೆ ಕೈಹಾಕಿರುವ ಶಿಕ್ಷಕರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ದೈನಂದಿನ ಶಾಲಾ ಸಮಯದಲ್ಲಿ ದಾಖಲಾತಿ ನಿರ್ವಹಿಸಿದ ಬಳಿಕ ಬಿಡುವಿನ ಸಮಯ ಬಳಸಿಕೊಂಡ ಶಾಲೆಯ ಮುಖ್ಯಶಿಕ್ಷಕ ನಾಗರಾಜ ನೇತೃತ್ವದಲ್ಲಿ ಸಹ ಶಿಕ್ಷಕರು ಶಾಲೆಯ ಒಳಗೋಡೆ ಮತ್ತು ಹೊರ ಗೋಡೆಗಳಿಗೆ ಬಣ್ಣ ಬಳಿಸಿದ ಬಳಿಕ ಬಣ್ಣಬಣ್ಣದ ವಾರ್ಲೆ ಚಿತ್ತಾರ ಬಿಡಿಸಿರುವುದು ನೋಡುಗರ ಗಮನ ಸೆಳೆಯುತ್ತಿವೆ. ಶಾಲೆಯಲ್ಲಿ ಮಿತ ಬಳಕೆ ಖರ್ಚಿನಿಂದ ಉಳಿದ ಅನುದಾನ ಬಳಸಿಕೊಂಡು ಬಣ್ಣ ಖರೀದಿಸಲಾಗಿದೆ.
ಚಿತ್ರಕಲೆ ಶಿಕ್ಷಕ ಶಿವಲಿಂಗಯ್ಯ ಚಂದ್ರಗಿರಿಮಠ ಮಾರ್ಗದರ್ಶನದಲ್ಲಿ ಎಲ್ಲ ಶಿಕ್ಷಕರು ಚಿತ್ರ ಬಿಡಿಸಲು ಸಹಕಾರ ನೀಡಿದಲ್ಲದೇ ತಾವೇ ಬಣ್ಣ ಬಳಿಯುವ ಮೂಲಕ ಚಿತ್ರಕಲೆಗೆ ಜೀವ ತುಂಬಿದರು. ಕೇವಲ ಗೋಡೆ ಬರಹ, ಚಿತ್ರಬಿಡಿಸುವ ಕಾರ್ಯ ಮಾತ್ರವಲ್ಲದೇ, ಬಗೆಬಗೆಯ ಗಿಡಗಳನ್ನು ಬೆಳೆಸುವ ಮೂಲಕ ಶಾಲಾ ಆವರಣದಲ್ಲಿ ಪರಿಸರ ಕಾಳಜಿ ತೋರಿಸಿದ್ದಾರೆ.
ಗಣಕಯಂತ್ರ ಕೊಠಡಿ, ವಿದ್ಯಾರ್ಥಿಗಳ ತರಗತಿ ಕೊಠಡಿಯಲ್ಲಿಯೂ ಸಹ ವಾರ್ಲೆ ಚಿತ್ರಗಳನ್ನು ಬಿಡಿಸುವ ಮೂಲಕ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಭೌತಿಕ ಜ್ಞಾನದ ಜೊತೆ ಮಕ್ಕಳಿಗೆ ಸಂಸ್ಕಾರ ನೀಡುತ್ತಿದ್ದಾರೆ.
ಗ್ರಾಮೀಣ ಭಾಗದ ಮಕ್ಕಳಲ್ಲಿ ಚಿತ್ರಕಲೆಯ ಆಶಕ್ತಿ ಹೆಚ್ಚಿಸುವಂತೆ ಮಾಡುತ್ತಿರುವ ಶಿಕ್ಷಕರ ಕಾರ್ಯ ಶ್ಲಾಘನಿಯವಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಅಂಬಣ್ಣ ಕರಡಕಲ್ಲ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.