ನೆಲಕಚ್ಚಿದ ಜವಳಿ ವ್ಯಾಪಾರ


Team Udayavani, Mar 22, 2020, 1:00 PM IST

ನೆಲಕಚ್ಚಿದ ಜವಳಿ ವ್ಯಾಪಾರ

ಬೆಂಗಳೂರು: ಕೋವಿಡ್ 19  ವೈರಸ್‌ ಭೀತಿ ಹಲವು ಉದ್ಯಮಗಳ ಮೇಲೆ ಕರಿನೆರಳು ಬೀರಿದೆ. ದಕ್ಷಿಣ ಭಾರತದ ಹೋಲ್‌ಸೇಲ್‌ ಬಟ್ಟೆಗಳ ಮಾರಾಟ ಕೇಂದ್ರ ಎನಿಸಿಕೊಂಡಿರುವ ಚಿಕ್ಕಪೇಟೆಯ ಟೆಕ್ಸ್‌ಟೈಲ್ಸ್‌ ಉದ್ಯ ಮದ ಮೇಲೂ ದೊಡ್ಡ ಹೊಡೆತ ಬಿದ್ದಿದೆ.

ಬೆಂಗಳೂರಿನಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಹೋಲ್‌ಸೇಲ್‌ ಬಟ್ಟೆ ಅಂಗಳಿವೆ. ಅವುಗಳೆಲ್ಲವೂ ದಿನಕ್ಕೆ ಕೋಟ್ಯಂತರ ರೂ.ವ್ಯಾಪಾರ ವಹಿವಾಟು ನಡೆಸುತ್ತಿದ್ದವು. ಕಳೆದ ಹದಿನೈದು ದಿನಗಳಲ್ಲಿ ಹೋಲ್‌ ಸೇಲ್‌ ಬಟ್ಟೆ ವ್ಯಾಪಾರ ಶೇ.50- 60 ರಷ್ಟು ಕುಸಿತ ಕಂಡಿದ್ದು,

ಕೋವಿಡ್ 19 ವೈರಸ್‌ ಆತಂಕದ ಹಿನ್ನೆಲೆಯಲ್ಲಿ ವಹಿವಾಟು ಸ್ಥಗಿತಗೊಂಡಿದೆ ಎಂದು ಚಿಕ್ಕಪೇಟೆಯ ಹೋಲ್‌ಸೇಲ್‌ ಬಟ್ಟೆ ಡೀಲರ್‌ಗಳು ಹೇಳಿದ್ದಾರೆ. ಕಳೆದ ಎರಡು-ಮೂರು ತಿಂಗಳಲ್ಲಿ ಹೇಳಿಕೊಳ್ಳುವಂತಹ ಬಟ್ಟೆ ವ್ಯಾಪಾರ ಆಗುತ್ತಿರಲಿಲ್ಲ. ಯುಗಾದಿ ಹಬ್ಬದ ವೇಳೆಯಲ್ಲಾದರೂ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿ ಚಿಕ್ಕಪೇಟೆಯ ಬಟ್ಟೆ ವ್ಯಾಪಾರಸ್ಥರರಿದ್ದರು. ಅದರೆ, ದಿಢೀರ್‌ ಕಾಣಿಸಿಕೊಂಡ ಕೊರೊನಾ ವ್ಯಾಪಾರಕ್ಕೆ ತಣ್ಣೀರೆರಚಿದೆ.

ಇಡೀ ದಕ್ಷಿಣ ಭಾರತಕ್ಕೆ ಮಾರಾಟ: ಚಿಕ್ಕಪೇಟೆಯಿಂದಲೇ ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ಭಿನ್ನ ಶೈಲಿಯ ಶೂಟ್ಸ್‌, ಶರ್ಟ್‌, ಸ್ಕರ್ಟ್ಸ್ ಸೇರಿದಂತೆ ಇನ್ನಿತರ ಬಟ್ಟೆಗಳು ಸರಬರಾಜು ಆಗುತ್ತದೆ. ನೆರೆಯ ತಮಿಳು ನಾಡು, ಆಂಧ್ರಪ್ರದೇಶ, ಹೈದ್ರಾಬಾದ್‌, ಕೇರಳದಿಂದ ಹೋಲ್‌ಸೇಲ್‌ ಡೀಲರ್‌ಗಳು ಬಟ್ಟೆಗಳ ಖರೀದಿಗಾಗಿ ಚಿಕ್ಕಪೇಟೆಗೆ ಬರುತ್ತಾರೆ. ಶೇ.50 ರಷ್ಟು ಬಟ್ಟೆ ಉತ್ಪನ್ನಗಳು ಚಿಕ್ಕಪೇಟೆಯಿಂದ ದಕ್ಷಿಣ ಭಾರದ ಎಲ್ಲ ರಾಜ್ಯಗಳಿಗೂ ರವಾನೆ ಆಗುತ್ತವೆ ಎಂದು ಡೀಲರ್‌ಗಳು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಚಿಕ್ಕಪೇಟೆಯಿಂದಲೇ ಬಟ್ಟೆಗಳು ರವಾನೆ ಆಗುತ್ತವೆ. ಕೋಟ್ಯಂತರ ರೂ.ವಹಿವಾಟು ಪ್ರತಿದಿನ ನಡೆಯುತ್ತದೆ ಎಂದರು.

25 ಸಾವಿರಕ್ಕೂ ಹೆಚ್ಚು ಉದ್ಯೋಗಗಳು: ಚಿಕ್ಕಪೇಟೆಯ ಟೆಕ್ಸ್‌ಟೆಲ್ಸ್‌ ಉದ್ಯಮದಲ್ಲಿ 25 ಸಾವಿರಕ್ಕೂ ಅಧಿಕ ಜನರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಡೀಲರ್‌ಗಳು ಬಟ್ಟೆ ಅಂಗಡಿ ಸೇರಿದಂತೆ ಹಲವು ವೈಹಿವಾಟುಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ವ್ಯಾಪಾರ ಇಲ್ಲದ ಹಿನ್ನೆಲೆಯಲ್ಲಿ ಉದ್ಯೋಗಿಗಳಿಗೆ ಸಂಬಳ ನೀಡುವುದು ಹೇಗೆ ಎಂಬ ದುಗಡ ಮಾಲೀಕರದ್ದು. ಪ್ರತಿ ವರ್ಷ ಯುಗಾದಿ ವೇಳೆ ಎಲ್ಲಾ ಬಟ್ಟೆ ಅಂಗಡಿ ಗಳು ಜನರಿಂದ ತುಂಬಿರುತ್ತಿದ್ದವು. ಆದರೆ, ಈ ವರ್ಷ ಆ ಪರಿಸ್ಥಿತಿಯಿಲ್ಲ. ಈಗಲೇ ಭವಿಷ್ಯತ್ತಿನ ಬಗ್ಗೆ ಚಿಂತೆ ಕಾಡಲಾರಂಭಿಸಿದೆ ಎಂದು ಚಿಕ್ಕಪೇಟೆ ಬಟ್ಟೆ ವ್ಯಾಪಾರಿ ರಾಮ್‌ಸೇಠ್ ಹೇಳಿದರು.

ಇಂದಿನಿಂದ ಸ್ಥಗಿತ:  ಕೋವಿಡ್ 19 ವೈರಸ್‌ ಭೀತಿಯ ಹಿನ್ನೆಲೆಯಲ್ಲಿ ದಿ ಬೆಂಗಳೂರು ಹೋಲ್‌ಸೇಲ್‌ ಕ್ಲಾಥ್‌ ಮರ್ಚೆಂಟ್‌ ಅಸೋಸಿಯೇಷನ್‌ ಮಾ.22-25ರ ವರೆಗೆ ವ್ಯಾಪಾರವನ್ನು ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡಿದೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗ್ರಾಹಕರು ಮತ್ತು ವ್ಯಾಪಾರಿಗಳು ರೈಲ್‌ ಮತ್ತು ಬಸ್‌ನಲ್ಲಿ ಬರುತ್ತಾರೆ.ಆ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಾ.25 ನಂತರ ವ್ಯಾಪಾರವನ್ನು ಆರಂಭಿಸಬೇಕೆ-ಬೇಡವೆ ನಿರ್ಧರಿಸಲಾಗುವುದು ಎಂದು ಅಸೋಸಿಯೇಷನ್‌ ಅಧ್ಯಕ್ಷ ಪ್ರಕಾಶ್‌ ಪಿರ್ಗಲ್‌ ಮಾಹಿತಿ ನೀಡಿದ್ದಾರೆ.

ಕೋವಿಡ್ 19 ವೈರಸ್‌ ಭೀತಿಯ ಹಿನ್ನೆಲೆಯಲ್ಲಿ ಮಾ.22- 25ರ ವರೆಗೆ ವ್ಯಾಪರವನ್ನು ಬಂದ್‌ ಮಾಡಲು ತೀರ್ಮಾನಿಸಲಾಗಿದೆ. ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಯೋಗೇಶ್‌ ವಿ.ಸೇಠ್, ದಿ ಬೆಂಗಳೂರು ಹೋಲ್ಸ್‌ಸೇಲ್‌ ಕ್ಲಾಥ್‌ ಮರ್ಚೆಂಟ್‌ ಅಸೋಸಿಯೇಷನ್‌ ಕಾರ್ಯದರ್ಶಿ

 

ದೇವೇಶ ಸೂರಗುಪ್ಪ

ಟಾಪ್ ನ್ಯೂಸ್

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

9-bng

Bengaluru: ಹನಿಟ್ರ್ಯಾಪ್‌: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ

6-bng

Bengaluru: ಬಸ್‌ಗಳಲ್ಲಿ ಮೊಬೈಲ್‌ ಕಳ್ಳತನ: ಇಬ್ಬರು ಆರೋಪಿಗಳ ಸೆರೆ‌, 60 ಫೋನ್‌ ಜಪ್ತಿ

5-bng

Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ

4-bng

Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Modi-Tour

Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

16

Pro Kabaddi: ಗುಜರಾತ್‌ಗೆ ರೋಚಕ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.