ಕೋವಿಡ್‌ 19 ಭೀತಿ: ಬೆಲೆ ಕಳೆದುಕೊಂಡ ಅನಾನಸು

ಸಂತೆ, ಮಾರುಕಟ್ಟೆ ರದ್ದಾಗಿರುವ ಕಾರಣ;  ರೈತ ಹೈರಾಣ

Team Udayavani, Mar 23, 2020, 5:49 AM IST

ಕೋವಿಡ್‌ 19 ಭೀತಿ: ಬೆಲೆ ಕಳೆದುಕೊಂಡ ಅನಾನಸು

ಬೈಂದೂರು: ಕೋವಿಡ್‌ 19 ಭೀತಿ ಗ್ರಾಮೀಣ ಭಾಗಗಳಿಗೂ ಬಿಸಿ ಮುಟ್ಟಿಸಿದೆ. ಬೇಸಗೆ ನಿರೀಕ್ಷೆಯಲ್ಲಿ ಬೆಳೆಸಿದ ತರಕಾರಿ, ಸೌತೆಕಾಯಿ, ಸೊಪ್ಪುಗಳನ್ನು ತೋಟಕ್ಕೆ ಸುರಿಯಬೇಕಾದ ಪರಿಸ್ಥಿತಿ ಬಂದಿದೆ.ಅದರಲ್ಲೂ ಲಕ್ಷಾಂತರ ವ್ಯಯಮಾಡಿ ಅನಾನಸು ಬೆಳೆದ ಕೃಷಿಕರು ಫಲ ಬರುವ ಹೊತ್ತಿಗೆ ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಮಾರುಕಟ್ಟೆಯಲ್ಲಿ ಉಚಿತವಾಗಿ ಕೊಟ್ಟರು ಅನಾನಸು ಕೇಳುವವರಿಲ್ಲದ ಪರಿಸ್ಥಿತಿ ಬಂದಿದೆ. ಒಟ್ಟಾರೆ ಯಾಗಿ ತರಕಾರಿ ಹಣ್ಣು ಹಂಪಲು ಬೆಳೆದ ರೈತರಿಗೆ ಬೇಸಗೆ ಬಿಸಿಲಿಗಿಂತ ಕೋವಿಡ್‌ 19 ಬಿಸಿ ಅಧಿಕವಾಗಿದೆ.

ಸಾಮಾನ್ಯವಾಗಿ ಅನಾನಸು, ಕುಂಬಳಕಾಯಿ, ಸೌತೆಕಾಯಿ, ಕಲ್ಲಂಗಡಿ ಮುಂತಾದವುಗಳು ಬೇಸಗೆಯಲ್ಲಿ ಉತ್ತಮ ಬೇಡಿಕೆ ಇರುತ್ತದೆ. ಅನಾನಸು ಒಂದು ವರ್ಷದ ಬೆಳೆಯಾಗಿದೆ. ಬೈಂದೂರು ತಾಲೂಕಿನಲ್ಲಿ ಹಲವು ಎಕರೆ ಅನಾನಸು ಬೆಳೆ ಬೆಳೆಯಲಾಗುತ್ತಿದೆ. ಈ ಹಣ್ಣುಗಳನ್ನು ಕೇರಳ, ದೆಹಲಿ ಹಾಗೂ ಮುಂಬಯಿಗೆ ಕಳುಹಿಸಲಾಗುತ್ತದೆ. ಆದರೆ ಈ ವರ್ಷ ಹಣ್ಣು ಮಾರುವ ಸಮಯದಲ್ಲಿ ಕೋವಿಡ್‌ 19  ಭೀತಿ ಮೂಡಿಸಿದೆ. ಹೀಗಾಗಿ ಬಹುತೇಕ ಮಾರುಕಟ್ಟೆ ಬಂದ್‌ ಆಗಿದೆ. ಸ್ಥಳೀಯವಾಗಿ ಸಂತೆ, ಮಾರ್ಕೆಟ್‌ ಕೂಡ ತಟಸ್ಥವಾಗಿದೆ.

ಹೀಗಾಗಿ 30 ರೂ.ಗೆ ದೊರೆಯುತ್ತಿದ್ದ ಅನಾನಸು ಬೆಳೆ ಹತ್ತು ರೂಪಾಯಿಗೂ ಕೇಳುವವರಿಲ್ಲವಾಗಿದೆ. ಸರಾಸರಿ 1 ಕೆ.ಜಿ ಅನಾನಸು ಬೆಳೆಯಲು 15ರಿಂದ 18 ರೂ. ಖರ್ಚು ಇದೆ. ಕಳೆದ ವರ್ಷ ಕೂಡ ನಿಫಾ ವೈರಸ್‌ ನಿಂದ ಬಹುತೇಕ ಬೆಳೆಗಾರರು ಪೆಟ್ಟು ತಿಂದಿದ್ದರು. ಈ ವರ್ಷ ಕೂಡ ಕೋವಿಡ್‌ 19 ರೈತರನ್ನು ಕಂಗೆಡಿಸಿದೆ.

ಎಪ್ರಿಲ್‌, ಮೇ ತಿಂಗಳಲ್ಲಿ ದೇವಸ್ಥಾನ, ವಾರ್ಷಿಕೋತ್ಸವ, ಜಾತ್ರೆ, ಹಬ್ಬ, ಮದುವೆ, ಪೂಜೆ ಮುಂತಾದ ಕಾರ್ಯಕ್ರಮಗಳಾಗುತ್ತವೆ. ಈ ಸಮಯದಲ್ಲಿ ಬಾಳೆಎಲೆ, ತರಕಾರಿ, ಸೌತೆಕಾಯಿಗೆ ಉತ್ತಮ ಬೇಡಿಕೆ ಇರುತ್ತಿತ್ತು. ಈಗ ಪೇಟೆಗೆ ಜನ ಬರುವಂತಿಲ್ಲ. ಸಂತೆ ನಡೆಯುತ್ತಿಲ್ಲ ಹೀಗಾಗಿ ಹರಿವೆ, ಬಸಳೆ, ತೊಂಡೆ, ನುಗ್ಗೆ, ಬೆಂಡೆ, ಬದನೆ ಬೆಳೆಯುವ ರೈತರು ಕೂಡ ನಷ್ಟ ಅನುಭವಿಸಿದ್ದಾರೆ. ಬಹುತೇಕ ಬೆಳೆಗಳು ಕಟಾವು ಮಾಡಲಾಗಿದೆ. ಒಂದೆಡೆ ಮತ್ಸÂಕ್ಷಾಮ ಇನ್ನೊಂದೆಡೆ ಕೋಳಿ ಮಾಂಸದ ಬೇಡಿಕೆ ಇಲ್ಲದಿರುವುದು ಇದರ ನಡುವೆ ತರಕಾರಿ ಕೂಡ ಬೇಡಿಕೆ ಇಲ್ಲದೆ ಸಣ್ಣ ಪುಟ್ಟ ರೈತರು ಹೈರಾಣಾಗಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಮುಂದುವರಿಯಲು ಆತಂಕ
ಬಹುನಿರೀಕ್ಷೆಯಿಂದ ಕೃಷಿಕರು ಬೆಳೆದ ಅನಾನಸು ಬೆಳೆಯಿಂದ ಕಳೆದೆರಡು ವರ್ಷಗಳಿಂದ ಕೈ ಸುಟ್ಟುಕೊಳ್ಳುವಂತಾಗಿದೆ. ಕಳೆದ ವರ್ಷ ನಿಫಾ ವೈರಸ್‌ ಬಂದರೆ ಈ ವರ್ಷ ಕೋವಿಡ್‌ 19 ಆತಂಕವಾಗಿದೆ. ವರ್ಷಕ್ಕೊಮ್ಮೆ ಬೆಳೆಯುವ ಈ ಬೆಳೆಗೆ ಈ ರೀತಿಯಾದರೆ ಕೃಷಿ ಕ್ಷೇತ್ರದಲ್ಲಿ ಮುಂದುವರಿಯಲು ಯುವಜನತೆ ಆತಂಕಪಡುವಂತಾಗಿದೆ.
-ಜೋಜಿ, ಅನಾನಸು ಬೆಳೆಗಾರರು ಆಲಂದೂರು.

-ಅರುಣ ಕುಮಾರ್‌ ಶಿರೂರು

ಟಾಪ್ ನ್ಯೂಸ್

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.