ಈ ವಿರಾಮ ಆತ್ಮಾವಲೋಕನಕ್ಕೆ ಸೂಕ್ತ ಸಮಯ: ಪೊಲಾರ್ಡ್
Team Udayavani, Mar 23, 2020, 5:19 AM IST
ಪೋರ್ಟ್ ಆಫ್ ಸ್ಪೇನ್: ಕೋವಿಡ್ 19 ಸಾಂಕ್ರಾಮಿಕ ರೋಗ ತಮಗೆ ದೊಡ್ಡದೊಂದು ವಿರಾಮ ನೀಡಿದೆ. ಇದು ತಮ್ಮ ವೃತ್ತಿಜೀವನದ ಬಗ್ಗೆ “ಆತ್ಮಾವಲೋಕನ’ ಮಾಡಲು ಉತ್ತಮ ಸಮಯ ಎಂದು ವೆಸ್ಟ್ ಇಂಡೀಸ್‌ನ ಸೀಮಿತ ಓವರ್ ಕ್ರಿಕೆಟ್ ತಂಡಗಳ ನಾಯಕ ಕೈರಾನ್ ಪೊಲಾರ್ಡ್ ಅಭಿಪ್ರಾಯಪಟ್ಟಿದ್ದಾರೆ. ಆಟಗಾರರು “ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಲು’ ಈ ಸಮಯವನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
“ಆತ್ಮಾವಲೋಕನ ಮಾಡಿಕೊಳ್ಳಲು ಇದು ಉತ್ತಮ ಸಮಯ. ನಿಮ್ಮ ವೃತ್ತಿಜೀವನದಲ್ಲಿ ಒಬ್ಬ ವ್ಯಕ್ತಿಯಾಗಿ ನೀವು ಎಲ್ಲಿದ್ದೀರಿ ಮತ್ತು ಮುಂದಿನ ಗುರಿ ಸಾಧನೆಗಾಗಿ ನಿಮಗೆ ಯಾವುದರ ಅಗತ್ಯವಿದೆ ಎಂಬುದನ್ನು ನಿರ್ಧರಿಸಲು ಇದಕ್ಕಿಂತ ಉತ್ತಮ ಸಮಯ ಸಿಗದು’ ಎಂದು ಪೊಲಾರ್ಡ್ ಅಭಿಪ್ರಾಯಪಟ್ಟಿದ್ದಾರೆ.
ವೈಯಕ್ತಿಕ ತಯಾರಿ ಮಾಡಿಕೊಳ್ಳಿ…
“ಯಾವಾಗ ಪರಿಸ್ಥಿತಿ ಸರಿಯಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಆದರೆ, ಈಗ ಸಿಕ್ಕಿರುವ ವಿರಾಮವನ್ನು ಪ್ರತಿಯೊಬ್ಬ ಆಟಗಾರರೂ ಸದುಪಯೋಗಪಡಿಸಿಕೊಳ್ಳಬೇಕು. ಫಿಟ್‌ನೆಸ್ ಉತ್ತಮಪಡಿಸಿಕೊಳ್ಳುವ ಮೂಲಕ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗುವತ್ತ ಗಮನ ಹರಿಸಬೇಕು. ಕೋವಿಡ್ 19 ವೈರಸ್ ನಿಯಂತ್ರಣಕ್ಕೆ ಬಂದ ಕೂಡಲೇ ನಮ್ಮ ಪ್ರವಾಸ ಆರಂಭವಾಗಲಿದೆ. ಇದಕ್ಕೆ ಪೂರ್ವ ತಯಾರಿ ನಡೆಸಲು ಸಮಯದ ಅಭಾವ ಉಂಟಾಗಲಿದೆ. ಹಾಗಾಗಿ, ಉತ್ತಮ ಪ್ರದರ್ಶನ ತೋರುವ ಸಲುವಾಗಿ ಎಲ್ಲ ಆಟಗಾರರು ಈ ವೇಳೆ ವೈಯಕ್ತಿಕವಾಗಿ ತಯಾರಿ ನಡೆಸಬೇಕು’ ಎಂದು ಪೊಲಾರ್ಡ್ ಸಹ ಆಟಗಾರರಿಗೆ ಸಲಹೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.