ವರುಣನೇ ನಿರ್ಧರಿಸಬೇಕಿದೆ ಚಾರ್ಮಾಡಿ ಸಂಚಾರ ಭವಿಷ್ಯ
2.8 ಕೋ.ರೂ. ವೆಚ್ಚದಲ್ಲಿ ತಡೆಗೋಡೆ ಕಾಮಗಾರಿ ಪ್ರಗತಿ ; ಡಾಮರೀಕರಣಕ್ಕೆ 8 ಕೋ.ರೂ.
Team Udayavani, Mar 23, 2020, 6:30 AM IST
ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ 73ರ ಮಂಗಳೂರು- ಮಿಲ್ಲುಪುರಂ ರಸ್ತೆಯ ಚಾರ್ಮಾಡಿ ಘಾಟ್‌ಗೆ ಕಳೆದ ಆಗಸ್ಟ್‌ನಲ್ಲಿ ತಟ್ಟಿದ ಪ್ರವಾಹದ ಹೊಡೆತ ಈ ಮಳೆಗಾಲದಲ್ಲೂ ಮುಂದುವರಿಯುವ ಆತಂಕದಿಂದ ಘಾಟ್ ರಸ್ತೆಯ ಭವಿಷ್ಯ ನಿರ್ಧರಿತವಾಗಿದೆ.
ಹೆದ್ದಾರಿ ಇಲಾಖೆಯಿಂದ ಘಾಟ್ ರಸ್ತೆ ಸಂಪೂರ್ಣ ಅಭಿವೃದ್ಧಿ ಕಾಮಗಾರಿಯ ಪ್ರಸ್ತಾವನೆ ಕಡತ 7 ತಿಂಗಳಿಂದ ಧೂಳು ಹಿಡಿಯುತ್ತಿರುವುದರಿಂದ ಎರಡನೇ ಹಂತದ ಕಾಮಗಾರಿ ವಿಳಂಬವಾಗಿದೆ. ಪರಿಣಾಮ ಚಿಕ್ಕಮಗಳೂರು- ಮಂಗಳೂರು ಸಂಪರ್ಕದ ಭವಿಷ್ಯ ಪ್ರಸಕ್ತ ಮುಂಗಾರಿನ ಪ್ರಭಾವವನ್ನು ಎದುರುನೋಡಿ ನಿರ್ಧರಿಸಬೇಕಿದೆ. ಈ ಕುರಿತು ಸಂಸದೆಯೊಬ್ಬರೂ ಕೂಡ ಇದೇ ಕಾದುನೋಡುವ ಮಾತನ್ನೇ ಆಡಿದ್ದಾರೆ.
ಚಿಕ್ಕಮಗಳೂರು ವ್ಯಾಪ್ತಿಯ ಮಿಲ್ಲಪುರ -ಮಂಗಳೂರು 89 ಕಿಮೀ.ನಿಂದ ಮಲಯ ಮಾರುತವರೆಗೆ 2.8ಕೋಟಿ ರೂ. ವೆಚ್ಚದಲ್ಲಿ 6 ಮೀಟರ್ ಒಳಗಿನ ತಡೆಗೋಡೆ ನಿರ್ಮಾಣ ಕಾಮಗಾರಿ ಮಾತ್ರ ಭರದಿಂದ ಸಾಗುತ್ತಿದೆ.
ಈಗಾಗಲೆ ಮಲಯ ಮಾರುತದಿಂದ 2ನೇ ತಿರುವು ಬಾಳೆಬರೆ ಘಾಟ್ ಅರಣ್ಯ ಪ್ರದೇಶದ ರಸ್ತೆಯ 10 ಅಡಿ ಆಳವಿರುವ 6ಮೀ. ಉದ್ದದ ತಡೆಗೋಡೆ, 3ನೇ ತಿರುವು 4ನೇ ತಿರುವುಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.
6 ಮೀಟರ್‌ಗಿಂತ ಹೆಚ್ಚಿರುವ ತಡೆಗೋಡೆ ಹಾಗೂ ಸೇತುವೆ ನಿರ್ಮಾಣಕ್ಕೆ ಈಗಾಗಲೆ 19.8 ಕೋ.ರೂ. ಮೊತ್ತದಲ್ಲಿ ಟೆಂಡರ್ ಕರೆಯಲಾಗಿದ್ದು ಅಲೆಕ್ಕಾನ್ ಹಳ್ಳದಿಂದ ಮುಂದಕ್ಕೆ ಸಾಗಿದಾಗ ಸುಮಾರು 250 ಮೀಟರ್ ಉದ್ದದ ತಡೆಗೋಡೆ ಫೆಬ್ರವರಿಯಲ್ಲಿ ಆರಂಭಿಸಿದ್ದು ಮುಕ್ತಾಯದ ಹಂತದಲ್ಲಿದೆ.
ಅಲೆಕ್ಕಾನ್‌ಗೆàಟ್ ಬಳಿ ಅಲೆಕ್ಕಾನ್‌ಹಳ್ಳ ಎರಡು ಕಡೆಗಳಲ್ಲಿ ಜರಿದಿದ್ದು, ಇಲ್ಲಿ ರಸ್ತೆ ವಿಸ್ತಾರ ಆಗಲೇಬೇಕಾದ ಅನಿವಾರ್ಯತೆ ಇದೆ. ಸುಮಾರು 50 ಅಡಿಗಳಿಗಿಂತಲೂ ತಳಭಾಗದಿಂದ ಪಿಲ್ಲರ್ ನಿರ್ಮಾಣ ಅನಿವಾರ್ಯವಾಗಿದ್ದು, ಈ ಮಳೆಗಾಲದ ಮುನ್ನವಂತೂ ಕಾಮಗಾರಿ ಅಸಾಧ್ಯದ ಮಾತಾಗಿದೆ. ಬಿದುರ್ತಳ ಸಮೀಪ ರಸ್ತೆ ಸಂಪೂರ್ಣ ಹಾಳಾಗಿದೆ.
8 ಕೋ.ರೂ.ಡಾಮರೀಕರಣ
ಬೆಳ್ತಂಗಡಿ ವ್ಯಾಪ್ತಿಗೊಳಪಟ್ಟಂತೆ ಚಾರ್ಮಾಡಿ ಘಾಟ್ ಆರಂಭದಿಂದ ಕೊಟ್ಟಿಗೆ ಹಾರವರೆಗೆ 8 ಕೋ.ರೂ. ವೆಚ್ಚದಲ್ಲಿ 10 ಕಿ.ಮೀ. ಡಾಮರೀಕರಣ ನಡೆಯುತ್ತಿದೆ. ಈಗಾಗಲೆ ಬೆಳ್ತಂಗಡಿ ವ್ಯಾಪ್ತಿಯ 10 ಕಿ.ಮೀ. ಮತ್ತು ಕೊಟ್ಟಿಗೆಹಾರದಿಂದ 13 ಕಿ.ಮೀ. ಡಾಮರು ಪ್ರಕ್ರಿಯೆ ಸಾಗಿದೆ.
ಸೊರಗಿದ ಜಲಪಾತ
ಸೋಮನಕಾಡು ಜಲಪಾತ ಸಂಪೂರ್ಣ ಬತ್ತಿಹೋಗಿದೆ. ಬೇಸಿಗೆಯಲ್ಲಿ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 30 ಡಿಗ್ರಿ ಸೆಲ್ಸಿಯಸ್‌ಗೆ ತಲುಪುತ್ತಿದ್ದ ಉಷ್ಣಾಂಶ ಪ್ರಸಕ 38 ಡಿಗ್ರಿವರೆಗೂ ತಲುಪಿದೆ. ಪರಿಣಾಮ ಬೇಸಗೆಯಲ್ಲಿ ಅಲ್ಪಸ್ವಲ್ಪ ಕಾಣಸಿಗುತ್ತಿದ್ದ ನೀರಿನ ಝರಿ ಸಂಪೂರ್ಣ ಬತ್ತಿಹೋಗಿದೆ.
ಸಾಗಾಟ ವೆಚ್ಚ ದುಪ್ಪಟ್ಟು
ಮಂಗಳೂರಿಂದ ಚಿಕ್ಕಮಗಳೂರು ಕಡೆಗೆ ಗೃಹನಿರ್ಮಾಣ ಸಾಮಗ್ರಿ ಸೇರಿದಂತೆ, ಸಿಮೆಂಟ್, ಮರಳು, ಜಲ್ಲಿ ಸಾಗಾಟ ವೆಚ್ಚ ದುಪ್ಪಟ್ಟಾಗಿದೆ. ಇಟ್ಟಿಗೆ ಬೆಲೆ ಸಾಗಾಟ ವೆಚ್ಚ ಸೇರಿ 38 ರೂ. ಇದ್ದ ಬೆಲೆ 45 ರೂ.ಗೇರಿದೆ. ಮರಳು ಲಾರಿ ಸಾಗಾಟಕ್ಕೂ ದುಪ್ಪಟ್ಟು ಬೆಲೆ ತೆರಬೇಕಾಗಿದೆ.
ಚಾರ್ಮಾಡಿ ಘಾಟ್ ರಸ್ತೆ ಸಂಪೂರ್ಣ ಅಭಿವೃದ್ಧಿಗೆ ನೂತನ ಸುಧಾರಿತ ತಂತ್ರಜ್ಞಾನ ಪ್ರಯೋಗಿಸುವ ಕುರಿತು ಈಗಾಗಲೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸಕ್ತ 8 ಕೋ.ರೂ. ಮೊತ್ತದಲ್ಲಿ ಡಾಮರೀಕರಣವಾಗುತ್ತಿದೆ.
– ಸುಬ್ಬರಾಮ ಹೊಳ್ಳ, ಕಾರ್ಯಪಾಲಕ ಎಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಇಲಾಖೆ
-ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.