ಕಾಸರಗೋಡು ಜಿಲ್ಲೆ : ರವಿವಾರ ಒಂದೇ ದಿನ 5 ಪಾಸಿಟಿವ್ ಪತ್ತೆ
ಜಿಲ್ಲೆಯಲ್ಲಿ 762 ಮಂದಿ ನಿಗಾದಲ್ಲಿ
Team Udayavani, Mar 23, 2020, 7:00 AM IST
ಕಾಸರಗೋಡು: ಜಿಲ್ಲೆಯಲ್ಲಿ ರವಿವಾರ ಮತ್ತೆ ಐವರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 19 ಆಗಿದೆ.
ಕೇರಳ ರಾಜ್ಯದಲ್ಲಿ ರವಿವಾರ 15 ಪ್ರಕರಣ ದೃಢವಾಗಿದ್ದು, ರಾಜ್ಯದಲ್ಲಿ ಈ ವರೆಗೆ ಒಟ್ಟು 67 ಮಂದಿಯಲ್ಲಿ ಸೋಂಕು ದೃಢವಾಗಿದೆ.
ರಾಜ್ಯದಲ್ಲಿ ಕೋವಿಡ್ 19 ಸೋಂಕಿನಿಂದ ನಿಗಾದಲ್ಲಿರುವವರ ಸಂಖ್ಯೆ 762ಕ್ಕೆ ಏರಿದೆ. ಆಸ್ಪತ್ರೆಗಳಲ್ಲಿ 41 ಮಂದಿ ನಿಗಾದಲ್ಲಿದ್ದು, ಇನ್ನುಳಿದವರು ಮನೆಗಳಲ್ಲಿದ್ದಾರೆ.
ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ನೇತೃತ್ವದಲ್ಲಿ ಐಸೊಲೇಶನ್ ಸೌಲಭ್ಯ ಏರ್ಪಡಿಸಲಾಗಿದೆ. ಪೆರಿಯ, ಪೂಡಂಗಲ್ಲು ಪ್ರದೇಶಗಳಲ್ಲಿ ಐಸೊಲೇಶನ್ ಸೆಂಟರ್ ಆರಂಭಿಸ ಲಾಗಿದೆ. ಕೇರ್‌ವೆಲ್ ಆಸ್ಪತ್ರೆ, ಜನರಲ್ ಆಸ್ಪತ್ರೆಗಳಲ್ಲಿ ಐಸೊಲೇಶನ್ ಸೌಲಭ್ಯ ಆರಂಭಿಸಲಾಗಿದೆ. ಜಿಲ್ಲಾ ಆಸ್ಪತ್ರೆಗೆ ಐಸೊಲೇಶನ್ ಸೌಲಭ್ಯವನ್ನು ವಿಸ್ತರಿಸಲಾಗಿದೆ.
ಕೋವಿಡ್ 19 ಪ್ರಕರಣಗಳ ಸಂಖ್ಯೆ ದಿನನಿತ್ಯ ಏರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅತೀವ ಜಾಗರೂಕತೆ ಪಾಲಿಸಬೇಕು, ಆರೋಗ್ಯ ಕಾರ್ಯಕರ್ತರು ಸೂಚಿಸುವ ಕ್ರಮ ಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ.
ವಿದೇಶಗಳಿಂದ ಊರಿಗೆ ಮರಳುವವರು ಮತ್ತು ಅವರೊಂದಿಗೆ ಸಂಪರ್ಕ ಹೊಂದಿದವರು ಕಡ್ಡಾಯವಾಗಿ ಮನೆಗಳಲ್ಲಿ ನಿಗಾದಲ್ಲಿ ಇರಬೇಕು, ಕೋವಿಡ್ 19 ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬೇಕು. ಕೊರೊನಾ ವೈರಸ್ ಸಾಮಾಜಿಕವಾಗಿ ಹರಡುವುದರಿಂದ ಜನಸಂಪರ್ಕ ನಡೆಸಕೂಡದು ಎಂದಿದ್ದಾರೆ.
ಕಾಸರಗೋಡಿನಲ್ಲಿ 144 ಸೆಕ್ಷನ್ ಜಾರಿ
ಕಾಸರಗೋಡು: ಕೋವಿಡ್ 19 ವೈರಸ್ ಹರಡುತ್ತಿರುವ ಹಿನ್ನೆಲೆ ಯಲ್ಲಿ ಕಾಸರಗೊಂಡು ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಆದೇಶ ಹೊರಡಿಸಿದ್ದಾರೆ.
ರವಿವಾರ ರಾತ್ರಿ 9ರಿಂದ ಜಾರಿಗೆ ಬಂದಿದ್ದು ಮುಂದಿನ ಆದೇಶ ಬರುವ ತನಕ ಸೆಕ್ಷನ್ ಜಾರಿಯಲ್ಲಿರುವುದು. ವ್ಯಾಪಾರ ಸಂಸ್ಥೆಗಳು, ಬಾರ್ಬರ್ ಅಂಗಡಿಗಳು, ಬ್ಯೂಟಿ ಪಾರ್ಲರ್‌ಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರಬಾರದು. ಅನಗತ್ಯ ಪ್ರಯಾಣ ಮಾಡಬಾರದು ಎಂದು ಸೂಚಿಸಲಾಗಿದೆ.
ಬೆಳಗ್ಗೆ 11ರಿಂದ ಸಂಜೆ 5 ಗಂಟೆಯ ವರೆಗೆ ಹಾಲು, ಪೆಟ್ರೋಲ್ ಬಂಕ್, ಮೆಡಿಕಲ್ ಅಂಗಡಿಗಳು, ರೇಶನ್ ಅಂಗಡಿಗಳ ಸಹಿತ ಅಗತ್ಯ ವಸ್ತುಗಳ ಅಂಗಡಿಗಳು ಕಾರ್ಯಾಚರಿಸಲಿವೆ.
5 ಸಹಾಯವಾಣಿ
ಕಾಸರಗೋಡು ಜಿಲ್ಲೆಯಲ್ಲಿ ನೂತನವಾಗಿ 5 ಹೆಲ್ಪ್ಲೈನ್ 24 ತಾಸು ಲಭ್ಯವಾಗಲಿವೆ. ಕೋವಿಡ್ 19 ಸೋಂಕು ಸಂಬಂಧ ಎಲ್ಲ ಸಹಾಯಗಳಿಗೆ ಇವನ್ನು ಸಂಪರ್ಕಿಸಬಹುದು. ರೋಗಬಾಧೆಯ ಶಂಕೆಯಿದ್ದಲ್ಲಿ ಆಸ್ಪತ್ರೆಗೆ ನೇರವಾಗಿ ಭೇಟಿ ನೀಡುವ ಬದಲು ಸಹಾಯ ಕೇಂದ್ರಕ್ಕೆ ಕರೆ ಮಾಡಿ ಸಲಹೆ ಪಡೆಯಬಹುದು. ದೂರವಾಣಿ ಸಂಖ್ಯೆಗಳು: 046 72209901, 046 72209902, 046 72209903, 046 72209904, 046 72209906
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.