ಹಾಡು ಹಾಡಿ ಹುಡುಗನ್ನ ಗೆದ್ದೆ…


Team Udayavani, Mar 23, 2020, 7:13 PM IST

singing

ತಾನು ಹಾಕಿದ ಗೆರೆ ದಾಟದ ಮಗ ಪ್ರೀತಿಸಿ ಮದುವೆಯಾದ ಅಂದರೆ, ಸರೀಕರಲ್ಲಿ ತಮ್ಮ ಗೌರವ ಏನಾದೀತೋ ಅಂತ ಹುಡುಗನ ಅಮ್ಮನಿಗೆ ಇರಿಸುಮುರುಸು. ಹಾಗಾಗಿ ಹೆಣ್ಣು ನೋಡಲು ಬರುವ ಶಾಸ್ತ್ರ ಏರ್ಪಾಡಾಯ್ತು. “ನಂದೊಂದೆರಡು ಪರೀಕ್ಷೆಯಲ್ಲಿ ಅವಳು ಪಾಸಾದ ಮೇಲೆಯೇ ನಾವು ಒಪ್ಪಿಗೆ ಕೊಡೋದು…’ ಎಂದರು ಅಮ್ಮ.

ಬರೋಬ್ಬರಿ 46 ವರ್ಷಗಳ ಹಿಂದಿನ ಮಾತು. ಒಂದೇ ಊರಿನವರಾದರೂ, ಪರಿಚಯದ ಮನೆಯೇ ಆದರೂ, ಆ “ಹುಡುಗ’ನನ್ನು ನಾನು ಮೊದಲ ಬಾರಿಗೆ ನೋಡಿದ್ದು ಕಾಲೇಜಿನಲ್ಲಿದ್ದಾಗಲೇ. ನನ್ನ ನೆರೆಯ ಮನೆಯವನು ಆ ಹುಡುಗನ ಆಪ್ತ ಮಿತ್ರ. ಅವನ ಮದುವೆಗೆ ಹಾಜರಾಗಲು ಈ ಹುಡುಗ ಹುಟ್ಟೂರಿಗೆ ಬಂದ.

ಮದುವೆಯ ಹಿಂದಿನ ಸಂಜೆ, ಊರಿನಿಂದ ಬಂದಿದ್ದ ನನ್ನಕ್ಕನನ್ನು ಮಾತನಾಡಿಸಲು ನಮ್ಮ ಮನೆಗೆ ಬಂದಿದ್ದ. ಅದೇ ಸಮಯಕ್ಕೆ ಬೇರೆ ಊರಿನಲ್ಲಿ ಕಾಲೇಜು ಓದುತ್ತಿದ್ದ ನಾನೂ ರಜೆಯೆಂದು ಮನೆಗೆ ಬಂದಿದ್ದೆ. ಅಕ್ಕ ಹುಡುಗನನ್ನು ಪರಿಚಯಿಸಿದಳು. ನಾನು “ನಮಸ್ಕಾರ’ ಎಂದೆ. ಅವನು ಒಂಚೂರು ಮಾತನಾಡಿಸಿದ. “ಮನೆಗೆ ಬಂದ ಊರಿನ ಪರಿಚಯಸ್ಥ, ಭಾವನಿಗೆ ನೆಂಟ ಕೂಡ, ಹಾಗೇ ಕಳಿಸಲಾಗಲ್ಲ’ ಅಂತ ಅಮ್ಮ ಒತ್ತಾಯ ಮಾಡಿ ಕಾಫಿ ಮಾಡಿಕೊಟ್ಟಳು. ಅವನ ಮುಂದೆ ಲೋಟ ಹಿಡಿದೆ. ಕುಡಿದುಬಿಟ್ಟ. ಮುಂದೆ ಗೊತ್ತಾಗಿದ್ದು ಹುಡುಗನಿಗೆ ಕಾಫಿ ಕುಡಿವ ಅಭ್ಯಾಸವಿಲ್ಲ. ಆದರೆ, ಕಾಫಿ ಕೊಟ್ಟವಳು ಮೊದಲ ನೋಟಕ್ಕೇ ಮನಸ್ಸಿಗಿಳಿದಿರುವಾಗ, ಕಾಫಿ ಕುಡಿಯಲ್ಲ ಅಂತ ಹೇಳಲೂ ಆಗಿರಲಿಲ್ಲ.

ನಾನೇನು ಆ ಹುಡುಗನ ಮುಂದೆ ಕೂದಲು ಹಾರಾಡಿಸಿಕೊಂಡು ಸುಳಿಯದಿದ್ದರೂ, ಅಂವ ಮೊದಲ ನೋಟಕ್ಕೇ ನನ್ನ ಪ್ರೀತಿಸಿಬಿಟ್ಟ. ನನ್ನನ್ನೂ ತನ್ನ ಪರಿಧಿಗೆ ಬೀಳಿಸಿಕೊಂಡ. ಅದು ಮೊದಲ ಅಧ್ಯಾಯವಾಗಿತ್ತು!

ನಂತರ, ಪ್ರೇಮಪತ್ರಗಳು ಅಲ್ಲಿಂದಿಲ್ಲಿ ಓಡಾಡಿ ನಮ್ಮ ಸಂಬಂಧ ಮದುವೆಯ ಹಂತಕ್ಕೆ ತಲುಪಿತು. ಇಬ್ಬರದ್ದೂ ಸುಸಂಸ್ಕೃತ ಕುಟುಂಬವಾದ್ದರಿಂದ ಮದುವೆಗೆ ಅಡ್ಡಿ ಎನ್ನುವಂಥದ್ದೇನೂ ಇರಲಿಲ್ಲ. ಆಗ ಒಂದು ತಳಮಳ ಹತ್ತಿದ್ದು ಹುಡುಗನ ತಾಯಿಗೆ. ಆ ಕಾಲದಲ್ಲಿ, ತಾನು ಹಾಕಿದ ಗೆರೆ ದಾಟದ ಮಗ ಪ್ರೀತಿಸಿ ಮದುವೆಯಾದ ಅಂದರೆ, ಸರೀಕರಲ್ಲಿ ತಮ್ಮ ಗೌರವ ಏನಾದೀತೋ ಅಂತ ಅವರಿಗೆ ಚೂರು ಇರಿಸುಮುರುಸು ಶುರುವಾಯ್ತು. ಹಾಗಾಗಿ ಹೆಣ್ಣು ನೋಡಲು ಬರುವ ಶಾಸ್ತ್ರ ಏರ್ಪಾಡಾಯ್ತು. ಮಗನಿಗೆ ಲಕ್ಷ್ಮಣರೇಖೆಯೊಂದನ್ನು ಬರೆದರು ಅಮ್ಮ.

“ನೋಡೋ, ಹುಡುಗಿ ನಮ್ಮೂರು, ನಮ್ಮ ಜನ, ಎಲ್ಲಾ ಸರಿ. ಆದ್ರೆ, ನಂದೊಂದೆರಡು ಪರೀಕ್ಷೆ ನಾ ಮಾಡಿಯೇ ಮಾಡ್ತೀನಿ. ಅವಳು ಅದ್ರಲ್ಲಿ ಪಾಸಾದ ಮೇಲೆಯೇ ನಾವು ಒಪ್ಪಿಗೆ ಕೊಡೋದು…’ ಎಂದರು ಅಮ್ಮ. ಹುಡುಗನಿಂದ ಹೀಗೊಂದು ಪತ್ರ ಬಂದಿತು ನನಗೆ- “ನೀನು ಇಂತಿಂಥ ಪರೀಕ್ಷೆಗಳಲ್ಲಿ ಪಾಸಾಗಲೇಬೇಕು, ಪ್ಲೀಸ್‌ ತಯಾರಾಗು…’ ಆಗಿನ ಮಕ್ಕಳು ಹೆತ್ತವರು ಮಾತನ್ನು ಮೀರುತ್ತಿರಲಿಲ್ಲವಾದ್ದರಿಂದ ಹುಡುಗನಿಗೆ ಭಯ. ಕೊನೆಗೆ ಅಮ್ಮ ಈ ಹುಡುಗಿ ಬೇಡ ಅಂದಿºಟ್ರೆ ಅಂತ.

ಅಮ್ಮ ನಡೆಸಿದ ಪರೀಕ್ಷೆಗಳು ಎರಡು – ಹುಡುಗಿ ಹಾಡು ಹೇಳಲೇಬೇಕು, ಸಣ್ಣ ಸೂಜಿಯಲ್ಲೂ ದಾರ ಪೋಣಿಸಬೇಕು…ಇವೆರಡೇ! ವಧುಪರೀಕ್ಷೆಗೆ ಒಂದು ವಾರವಿದ್ದಾಗ, ದಿನದಲ್ಲಿ ಹತ್ತಾರು ಬಾರಿ ಹಿತ್ತಲಂಗಳಕ್ಕೆ ಓಡಲಾರಂಭಿಸಿದೆ. ಎರಡು ಹಾಡುಗಳನ್ನು ಕಂಠಪಾಠ ಮಾಡಲು. ಅಪ್ಪನಿಗೆ ಗಾಬರಿ, ಪದೇಪದೆ ನಾನು ಹಿತ್ತಲಿಗೋಡುವುದ ಕಂಡು. ಸರಾಗವಾಗಿ ಪೋಣಿಸುವಷ್ಟು ಕಣ್ಣು ಪರ್ಫೆಕ್ಟ್ ಇತ್ತಾದರೂ ಹಾಳು ಆತಂಕ. ಮೂರೊತ್ತೂ ಕೈಯ್ಯಲ್ಲಿ ಸೂಜಿದಾರ, ಪೋಣಿಸೋದು ತೆಗ್ಯೋದು…ಇವೆಲ್ಲ ಗೊತ್ತಿಲ್ಲದ ಅಪ್ಪ-ಅಮ್ಮಂಗೆ ಆತಂಕ, “ಏನಾಗಿದೆ ಇವ್ಳಿಗೆ’ ಅಂತ! ವಧುಪರೀಕ್ಷೆ, ಎರಡು ಹಾಡಿನ ಪರೀಕ್ಷೆಯೊಂದಿಗೆ ಸಂಪನ್ನವಾಯ್ತು. ಗಾಬರಿಗೆ ಸಾಲುಗಳೆಲ್ಲಾ ಕೈಕೊಟ್ಟು. ಕಣ್ಣಿನ ಪರೀಕ್ಷೆಯೇನೂ ನಡೀಲಿಲ್ಲ, ಅವ್ರಿಗೂ ಗೊತ್ತಿತ್ತು; ಆ ವಯಸ್ಸಲ್ಲಿ ಕಣ್ಣೂ ಚೆನ್ನಾಗಿರುತ್ತೆ ಅಂತ. ಮುಂದೆ ಎಲ್ಲವೂ ಸುಖಾಂತವೇ!

(ಹೆಣ್ಣು ನೋಡಲು ಗಂಡಿನ ಕಡೆಯವರು ಬರುತ್ತಾರೆಂದರೆ, ಮನೆಮಂದಿಗೆಲ್ಲಾ ಖುಷಿ, ಗಡಿಬಿಡಿ, ಆತಂಕ, ನಿರೀಕ್ಷೆಗಳೆಲ್ಲವೂ ಒಟ್ಟೊಟ್ಟಿಗೇ ಆಗುವ ಸಂದರ್ಭ. ಭಾಮೆಯನ್ನು ನೋಡಲು ಬಂದಾಗ ಮನೆಯಲ್ಲಿ ಏನೇನಾಗಿತ್ತು ಅಂತ 250 ಪದಗಳಲ್ಲಿ [email protected]ಗೆ ಬರೆದು ಕಳಿಸಿ.)

-ಎಸ್‌.ಪಿ.ವಿಜಯಲಕ್ಷ್ಮೀ

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.