ವ್ಯಾಪಕವಾಗಿ ಹೆಚ್ಚುತ್ತಿದೆ ಮಂಗನ ಕಾಯಿಲೆ
Team Udayavani, Mar 24, 2020, 6:55 PM IST
ಸಿದ್ದಾಪುರ: ಕೋವಿಡ್ 19 ಎಲ್ಲೆಡೆಗೂ ವ್ಯಾಪಿಸುತ್ತಿರುವ ಆತಂಕದ ನಡುವೆ ತಾಲೂಕಿನಲ್ಲಿ ಮಂಗನ ಕಾಯಿಲೆ(ಕೆಎಫ್‌ಡಿ) ಉಲ್ಬಣಗೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ತಾಲೂಕಾಡಳಿತ, ಆರೋಗ್ಯ ಇಲಾಖೆ ಕಾಯಿಲೆ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ತೆಗೆದುಕೊಂಡಿದ್ದರೂ ನಿಯಂತ್ರಣಕ್ಕೆ ಬರದ ವಾಸ್ತವಿಕತೆ ಈಗಿನದು.
ತಾಲೂಕಿನಲ್ಲಿ ಈವರೆಗೆ 64 ಜನರಿಗೆ ರೋಗ ಬಂದಿದ್ದು 7 ಜನ ಮೃತಪಟ್ಟಿದ್ದಾರೆ. ಈ ವರ್ಷ ಇಟಗಿ ಸಮೀಪದ ಮಳಗುಳಿಯ ಭಾಸ್ಕರ ಹೆಗಡೆ ಮೃತಪಟ್ಟಿದ್ದು 15 ಜನರಿಗೆ ಕಾಯಿಲೆ ಕಾಣಿಸಿಕೊಂಡಿದೆ. ಶನಿವಾರ ಮಾದ್ಲಮನೆಯಲ್ಲಿ ಒಬ್ಬಳು ಮಹಿಳೆ ಹಾಗೂ ಇಟಗಿ ಭಾಗದಲ್ಲಿ ಇಬ್ಬರು ಮಹಿಳೆಯರಿಗೆ ಕೆಎಫ್‌ಡಿ ಸೋಂಕು ಕಾಣಿಸಿಕೊಂಡಿದ್ದು ಮೂವರನ್ನೂ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ ಎಂಟು ಜನರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ನಾಲ್ವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಖ್ಯವಾಗಿ ದೊಡ್ಮನೆ ಜಿಪಂನ ಕೆಲವು ನಿರ್ದಿಷ್ಟ ಪ್ರದೇಶದಲ್ಲಿ ಮಂಗಗಳು ಸಾಯುತ್ತಿವೆ. ಇದರಿಂದ ಆ ಭಾಗದ ಜನ ಭಯಪಡುತ್ತಿದ್ದಾರೆ.
ಕಳೆದ ವರ್ಷ ತಾಲೂಕಿನ ಬಾಳಗೋಡ, ವಾಜಗೋಡ ಭಾಗದಲ್ಲಿ ಮಂಗನ ಕಾಯಿಲೆ ವ್ಯಾಪಕವಾಗಿ 23 ಜನ ಬಲಿಯಾಗಿದ್ದಾರೆ ಎಂದು ಅಧಿಕೃತ ದಾಖಲೆ ಹೇಳುತ್ತದೆ. ಈ ವರ್ಷ ಆ ಭಾಗದಲ್ಲಿ ಮಾತ್ರವಲ್ಲದೇ ತ್ಯಾಗಲಿ ಗ್ರಾಪಂ ವ್ಯಾಪ್ತಿಯ ಕಲ್ಗದ್ದೆಯಲ್ಲಿ ಕೂಡ ಮಂಗನ ಕಾಯಿಲೆ ಕಂಡುಬಂದಿದೆ. ರೋಗ ಪೀಡಿತರು ಚಿಕಿತ್ಸೆಯಿಂದ ಗುಣಮುಖರಾಗಿದ್ದರೂ ದೈಹಿಕವಾಗಿ ಅವರು ಮೊದಲಿನಂತೆ ಸಶಕ್ತರಾಗಲು ಸಾಧ್ಯವಾಗಿಲ್ಲ. ಈ ಕಾಯಿಲೆಯಿಂದ ಮೃತಪಟ್ಟವರು ಬಹುತೇಕರು ಯಾವ ಆಸ್ತಿ, ಪಾಸ್ತಿಯಿಲ್ಲದೇ ಕೇವಲ ಕೂಲಿಯಿಂದ ಜೀವನ ಸಾಗಿಸುತ್ತಿದ್ದವರು. ಕಾಯಿಲೆ ಪೀಡಿತರಲ್ಲೂ ಹಲವರು ಹೆಚ್ಚಿನ ಆದಾಯ ತರುವ ಜಮೀನು ಹೊಂದಿರದೇ ಇದ್ದವರು. ಚಿಕಿತ್ಸಾ ವೆಚ್ಚವನ್ನು ಭರಿಸಲಾಗದೆ ಅವರಿಗೆ ಜಿಲ್ಲಾಡಳಿತ, ವಿಶೇಷವಾಗಿ ಜಿಲ್ಲಾಧಿಕಾರಿ ಡಾ|ಹರೀಶಕುಮಾರ್, ಜಿಪಂ ಸಿಇಒ ಎಂ.ರೋಶನ್, ಶಿರಸಿ ಸಹಾಯಕ ಕಮೀಷನರ್ ಡಾ| ಈಶ್ವರ್ ಉಳ್ಳಾಗಡ್ಡಿ ಸರಕಾರದಿಂದ ಅದಕ್ಕೆ ವಿನಾಯಿತಿ ಕೊಡಿಸಲು ಶ್ರಮಿಸಿದ್ದಾರೆ.
ಪಕ್ಕದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲೂ ಮಂಗನಕಾಯಿಲೆ ಮಿತಿಮೀರಿ ವ್ಯಾಪಿಸಿ ಹಲವರನ್ನು ಬಲಿ ತೆಗೆದುಕೊಂಡಿತ್ತು. ಅಲ್ಲಿನ ಶಾಸಕ ಎಚ್. ಹಾಲಪ್ಪ ಕಾಯಿಲೆಯಿಂದ ಮೃತಪಟ್ಟವರಿಗೆ ಸರಕಾರದಿಂದ ಪರಿಹಾರ ಒದಗಿಸುವಲ್ಲಿ ಶ್ರಮಪಟ್ಟು ಯಶಸ್ವಿಯಾಗಿದ್ದರು. ಆದರೆ ಈ ತಾಲೂಕಿನಲ್ಲಿ ಆ ಕುರಿತಾದ ಯಾವ ಸ್ಪಂದನೆಯೂ ಇರಲಿಲ್ಲ. ಇತ್ತೀಚೆಗೆ ರಾಜ್ಯ ವಿಧಾನ ಸಭೆಯಲ್ಲಿ ಶಾಸಕ ಎಚ್. ಹಾಲಪ್ಪ ಈ ಕಾಯಿಲೆ ಕುರಿತು ಆರೋಗ್ಯ ಸಚಿವರನ್ನು ತರಾಟೆಗೆ ತೆಗೆದುಕೊಂಡು ಅಂಕಿ ಅಂಶಗಳೊಂದಿಗೆ ಮಾತನಾಡಿ ಸರ್ಕಾರಕ್ಕೆ ಬಿಸಿಮುಟ್ಟಿಸಿದ ನಂತರದಲ್ಲಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಈ ತಾಲೂಕಿನಲ್ಲಿ ಮಂಗನಕಾಯಿಲೆಯಿಂದ ಮೃತಪಟ್ಟವರಿಗೆ ಸಮರ್ಪಕ ಆರ್ಥಿಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಸರಕಾರದಿಂದ ಬಂದ ಆದೇಶದ ಪ್ರಕಾರ ಜಿಲ್ಲಾಧಿಕಾರಿಗಳು ಈಗಾಗಲೇ ಆ ಕುರಿತ ಮಾಹಿತಿಗಳನ್ನು ಒದಗಿಸಿದ್ದಾರೆ ಎನ್ನಲಾಗುತ್ತಿದೆ.
ಅದರಿಂದಾಗಿ ಈ ತಾಲೂಕಿನ ಬಾಧಿತರಿಗೂ ಪರಿಹಾರ ದೊರೆಯುವ ಆಶಾ ಭಾವನೆ ಕಂಡುಬರುತ್ತಿದೆ. ಮಂಗನಕಾಯಿಲೆ ದೃಢಪಟ್ಟವರನ್ನು ಮಣಿಪಾಲ್ ಆಸ್ಪತ್ರೆಗೆ ಶೀಘ್ರವಾಗಿ ಕರೆದೊಯ್ಯಲು ಜಿಲ್ಲಾಡಳಿತ ಈಗಾಗಲೇ ಪ್ರತ್ಯೇಕ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದರೂ ಅದಕ್ಕೆ ವೆಂಟಿಲೇಶನ್ ವ್ಯವಸ್ಥೆ ಇಲ್ಲದಿರುವ ಕಾರಣ, ಸಾಕಷ್ಟು ದೂರದ ಮಣಿಪಾಲಕ್ಕೆ ರೋಗಿಗಳನ್ನು ಕರೆದೊಯ್ಯುವಷ್ಟರಲ್ಲಿ ಅವರು ತೊಂದರೆ ಅನುಭವಿಸಬೇಕಾಗುತ್ತಿದೆ ಎನ್ನುವ ಅಭಿಪ್ರಾಯ ಸಾರ್ವಜನಿಕರದ್ದು. ಪಕ್ಕದ ಶಿವಮೊಗ್ಗ ಜಿಲ್ಲೆಗೆ ಒದಗಿಸಿದ ಸಮರ್ಪಕ ಆ್ಯಂಬುಲೆನ್ಸ್ ಇಲ್ಲಿಗೂ ಒದಗಿಸಬೇಕೆನ್ನುವುದು ಅವರ ಆಗ್ರಹವಾಗಿದೆ.
-ಗಂಗಾಧರ ಕೊಳಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.