ಲಾಕ್‌ಡೌನ್‌ಗೆ ಜಿಲ್ಲಾದ್ಯಂತ ಮೌನ
Team Udayavani, Mar 25, 2020, 4:36 PM IST
ಹಾವೇರಿ: ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿರುವ ಕೋವಿಡ್ 19 ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ಹೊರಡಿಸಿರುವ ಲಾಕ್‌ಡೌನ್ ಆದೇಶಕ್ಕೆ ಜಿಲ್ಲೆಯ ಜನ ಸಂಪೂರ್ಣವಾಗಿ ಸ್ಪಂದಿಸಿದ್ದರಿಂದ ಮಂಗಳವಾರ ಇಡೀ ಜಿಲ್ಲೆಯಲ್ಲಿ ನೀರವಮೌನ ಆವರಿಸಿತ್ತು.
ಜನರು ಮನೆಯೊಳಗೇ ಇರುವ ಮೂಲಕ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಲಾಕ್‌ಡೌನ್‌ಗೆ ಸ್ಪಂದಿಸಿದರು. ಎಲ್ಲ ರಸ್ತೆಗಳಲ್ಲಿ ವಾಹನ ಸಂಚಾರ, ಜನ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಅಗತ್ಯ ಕೆಲಸಗಳಿಗಾಗಿ ಕೆಲ ಬೆರಳೆಣಿಕೆಯ ಜನರು ಹಾಗೂ ಕರ್ತವ್ಯಕ್ಕಾಗಿ ಪೊಲೀಸ್ ವಾಹನ ಹೊರತುಪಡಿಸಿದರೆ ಉಳಿದ ವಾಹನ ಹಾಗೂ ಜನಸಂಚಾರ ಸಂಪೂರ್ಣ ಬಂದ್ ಆಗಿತ್ತು.
ಸಾರಿಗೆ ಬಸ್ ಹಾಗೂ ರೈಲು ಸಂಚಾರ ಬಂದ್ ಆಗಿದ್ದರಿಂದ ಬಸ್‌ನಿಲ್ದಾಣ, ರೇಲ್ವೆ ನಿಲ್ದಾಣಗಳು ಜನರಿಲ್ಲದೇ ಬಿಕೋ ಎಂದವು. ಆಟೋ, ಟ್ಯಾಕ್ಸಿ ಸೇರಿದಂತೆ ಖಾಸಗಿ ವಾಹನಗಳ ಸಂಚಾರವೂ ಸಂಪೂರ್ಣ ಬಂದ್ ಆಗಿತ್ತು. ಹೊರ ಜಿಲ್ಲೆಯಿಂದ ಬರುವವರನ್ನು ಜಿಲ್ಲೆ ಹಾಗೂ ನಗರದ ಹೊರಪ್ರದೇಶದಲ್ಲಿಯೇ ಪೊಲೀಸರು ವಿಚಾರಣೆ ಮಾಡಿದರು. ಹೊರ ಜಿಲ್ಲೆಯಿಂದ ಬಂದವರನ್ನು ಜಿಲ್ಲಾಸ್ಪತ್ರೆ ಸೇರಿದಂತೆ ಇತರ ತಪಾಸಣಾ ಘಟಕದಲ್ಲಿ ಅವರನ್ನು ಥರ್ಮಲ್ ಸ್ಕ್ರಿನಿಂಗ್ ಮಾಡಿಯೇ ಅವರಿಗೆ ಬಿಡಲಾಯಿತು.
ಗೂಡಂಗಡಿಯಿಂದ ಹಿಡಿದು ಎಲ್ಲ ತರಹದ ಅಂಗಡಿಗಳು ಬಂದ್ ಆಗಿದ್ದವು. ಹೋಟೆಲ್‌ಗಳಲ್ಲಿ ಪಾರ್ಸಲ್ ವ್ಯವಸ್ಥೆಗೆ ಅವಕಾಶ ಕೊಡಲಾಗಿದ್ದರೂ ಬಹುತೇಕ ಎಲ್ಲ ಹೋಟೆಲ್ ಗಳು ಬಂದ್ ಆಗಿದ್ದವು. ಇನ್ನು ಪೆಟ್ರೋಲ್ ಬಂಕ್‌ಗಳಲ್ಲಿ ಜನದಟ್ಟಣೆ ಹೆಚ್ಚಾಗಿರುವುದನ್ನು ಅರಿತ ಪೊಲೀಸರು ಪೆಟ್ರೋಲ್ ಬಂಕ್‌ಗಳನ್ನೂ 11ಗಂಟೆ ಹೊತ್ತಿಗೆ ಬಂದ್ ಮಾಡಿಸಿದರು. ಔಷಧಿ ಅಂಗಡಿ, ಆಸ್ಪತ್ರೆ ಎಂದಿನಂತೆ ತೆರೆದುಕೊಂಡಿದ್ದವು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.