ಕೋವಿಡ್ 19; ಚೀನಾ, ಇಟಲಿಯನ್ನು ಮೀರಿಸಿದ ಅಮೆರಿಕ; 82 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ದೃಢ
ಅಮೆರಿಕದಲ್ಲಿ ಸಾವಿರಾರು ಮಂದಿ ಪರೀಕ್ಷೆಗೊಳಗಾಗುತ್ತಿದ್ದಾರೆ. ಅಷ್ಟೇ ಕ್ಷಿಪ್ರವಾಗಿ ಕೋವಿಡ್ 19 ಸೋಂಕು ದೃಢಪಡಿಸುತ್ತಿದ್ದಾರೆ.
Team Udayavani, Mar 27, 2020, 9:05 AM IST
Representative Image
ವಾಷಿಂಗ್ಟನ್: ಜಾಗತಿಕವಾಗಿ ಅತೀ ಹೆಚ್ಚು ಕೋವಿಡ್ 19 ಮಾರಣಾಂತಿಕ ವೈರಸ್ ದೃಢಪಟ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನಕ್ಕೇರಿದೆ. ಇದರೊಂದಿಗೆ ಚೀನಾ ಮತ್ತು ಇಟಲಿಯನ್ನು ಹಿಂದಿಕ್ಕಿದೆ. ಡೆಡ್ಲಿ ಕೋವಿಡ್ ವೈರಸ್ ನಿಂದಾಗಿ ಅಮೆರಿಕದ ಜನಜೀವನದ ಮೇಲೆ ಅಪಾರ ಹೊಡೆತ ಬಿದ್ದಿರುವುದಾಗಿ ಯುಎಸ್ ಎ ಟುಡೇ ವರದಿ ಮಾಡಿದೆ.
ಅಮೆರಿಕದ ಜಾನ್ಸ್ ಹಾಪ್ ಕಿನ್ಸ್ ಯೂನಿರ್ವಸಿಟಿ ಡ್ಯಾಶ್ ಬೋರ್ಡ್ ಅಂಕಿ ಅಂಶದ ಪ್ರಕಾರ, ಗುರುವಾರ ರಾತ್ರಿ 6ಗಂಟೆವರೆಗೆ ಅಮೆರಿಕದಲ್ಲಿ ಕೋವಿಡ್ 19 ದೃಢಪಟ್ಟವರ ಸಂಖ್ಯೆ 82,404 ಮಂದಿ! ಇಟಲಿಯಲ್ಲಿ 80,589 ಜನರು ಸೋಂಕು ಪೀಡಿತರಾಗಿದ್ದು, ಚೀನಾದಲ್ಲಿ 81,782 ಮಂದಿಗೆ ಕೋವಿಡ್ 19 ತಗುಲಿತ್ತು. ಅಲ್ಲದೇ ಅಮೆರಿಕದಲ್ಲಿ ಕೋವಿಡ್ 19 ವೈರಸ್ ಗೆ ಸಾವನ್ನಪ್ಪಿದ್ದವರ ಸಂಖ್ಯೆ 1,100.
ಅಮೆರಿಕದಲ್ಲಿ ಸಾವಿರಾರು ಮಂದಿ ಪರೀಕ್ಷೆಗೊಳಗಾಗುತ್ತಿದ್ದಾರೆ. ಅಷ್ಟೇ ಕ್ಷಿಪ್ರವಾಗಿ ಕೋವಿಡ್ 19 ಸೋಂಕು ದೃಢಪಡಿಸುತ್ತಿದ್ದಾರೆ. ಇದರಿಂದಾಗಿ ಅಮೆರಿಕ ಇದೀಗ ಕಂಗಾಲಾಗಿದೆ ಎಂದು ವರದಿ ವಿವರಿಸಿದೆ. ಶಟ್ ಡೌನ್ ನಿಂದಾಗಿ ಅಮೆರಿಕದ ಆರ್ಥಿಕ ಸ್ಥಿತಿ ಕುಸಿಯತೊಡಗಿದೆ.
ಅಮೆರಿಕದಲ್ಲಿನ ರೆಸ್ಟೋರೆಂಟ್ಸ್, ಶಾಪ್, ಸಿನಿಮಾ ಥಿಯೇಟರ್ಸ್ಸ್ ಸೇರಿದಂತೆ ಬಹುತೇಕ ಎಲ್ಲವೂ ಅಮೆರಿಕದಲ್ಲಿ ಸ್ತಬ್ಧವಾಗಿದೆ. ಅಲ್ಲದೇ ಹಲವಾರು ಮಂದಿಯನ್ನು ದೊಡ್ಡ, ದೊಡ್ಡ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡತೊಡಗಿದೆ ಎಂದು ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.