ಭಾರತದಲ್ಲಿ ಪ್ರಕಟವಾದ ಮೊದಲ ಕೋವಿಡ್ 19 ವೈರಸ್ ಚಿತ್ರ
Team Udayavani, Mar 28, 2020, 2:43 AM IST
ಭಾರತದಲ್ಲಿ ಪತ್ತೆಯಾದ ಮೊಟ್ಟಮೊದಲ ಕೋವಿಡ್ 19 ವೈರಸ್ ಚಿತ್ರವನ್ನು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ ಪತ್ರಿಕೆ ಪ್ರಕಟಿಸಿದೆ. ಪುಣೆಯಲ್ಲಿನ ವಿಜ್ಞಾನಿಗಳು ಟ್ರಾನ್ಸ್‌ಮಿಷನ್ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಇಮೇಜಿಂಗ್ ಬಳಸಿ ಇದನ್ನು ಸೆರೆಹಿಡಿದಿದ್ದಾರೆ.
ಸಾರ್ಸ್- ಕೋವ್- 2 ಕುಟುಂಬಕ್ಕೆ ಸೇರಿದ ಈ ವೈರಸ್ ಅನ್ನು, 2020ರ ಜನವರಿ 30ರಂದು, ರೋಗಿಯ ಗಂಟಲು ದ್ರವದ ಪರೀಕ್ಷೆ ಮೂಲಕ ಪತ್ತೆಹಚ್ಚಲಾಗಿತ್ತು. ಚೀನಾದ ವುಹಾನ್‌ನಲ್ಲಿ ಮೆಡಿಸಿನ್ ಅಭ್ಯಾಸ ಮಾಡುತ್ತಿದ್ದ ಒಬ್ಬಳು ಮಹಿಳೆ, ಮೂವರು ವಿದ್ಯಾರ್ಥಿಗಳು, ಭಾರತಕ್ಕೆ ಮರಳಿ, ಕೋವಿಡ್ 19 ವೈರಸ್ ಕುರಿತ ಸಂಶೋಧನೆಗಿಳಿದಿದ್ದರು. ಆ ಹೊತ್ತಿನಲ್ಲಿ ಅದಾಗಲೇ ವುಹಾನ್‌ನಲ್ಲಿ ಕೋವಿಡ್ 19 ವೈರಸ್ ಅಟ್ಟಹಾಸ ಮೆರೆದು, ತಿಂಗಳುಗಳೇ ಕಳೆದಿದ್ದವು.
ಕೇರಳದ ಸೋಂಕಿತನಿಂದ ಸಂಗ್ರಹಿಸಲಾದ ಕೋವಿಡ್ 19 ವೈರಸ್ ಚಿತ್ರವು, ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್‌ಗೆ ಕಾರಣವಾದ ಮೆರ್ಸ್- ಕೋವ್ ವೈರಸ್ ಅನ್ನು ಹೋಲುವಂತಿದೆ. 70-80 ಎನ್‌ಎಂ ಗಾತ್ರವನ್ನು ಹೊಂದಿದೆ. ಕೊರೊನಾವು ಪ್ರಾಣಿಗಳಿಂದ ಮನುಷ್ಯರಿಗೆ ಹಬ್ಬಿದಾಗ, ಹೇಗೆಲ್ಲ ಮಾರ್ಪಾಡು ಹೊಂದುತ್ತದೆ ಎಂಬುದನ್ನು ತಿಳಿಯಲು ಈ ಚಿತ್ರ ವಿಜ್ಞಾನಿಗಳಿಗೆ ಸಹಕಾರಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.