2 ವರ್ಷ, 8 ತಿಂಗಳು, 19 ದಿನಗಳ ನಂತರ ಕೋಮಾದಿಂದ ಹೊರಬಂದ ಫುಟ್ಬಾಲಿಗ
Team Udayavani, Mar 28, 2020, 8:52 AM IST
ಆ್ಯಮ್‌ಸ್ಟರ್‌ಡಾಮ್ (ನೆದರ್ಲೆಂಡ್): ಎಲ್ಲ ಕಡೆ ಕೊರೊನಾ ವೈರಸ್ ದಾಳಿಯ ಸುದ್ದಿಗಳೇ ಕೇಳಿ ಬರುತ್ತಿವೆ. ಸತತ ಸಾವಿನ ಸುದ್ದಿಗಳ ನಡುವೆ ಅತ್ಯಂತ ಭರವಸೆಯ, ಸಂತಸದ ಸುದ್ದಿಯೊಂದು ಸಿಕ್ಕಿದೆ. 2 ವರ್ಷ 8 ತಿಂಗಳು, 19 ದಿನಗಳ ಹಿಂದೆ ಕೋಮಾಕ್ಕೆ ಜಾರಿದ್ದ ನೆದರ್ಲೆಂಡ್‌ನ ಫುಟ್‌ಬಾಲಿಗ ಅಬ್ಧೆಲ್‌ಹಾಕ್ ನೌರಿ ಚೇತರಿಸಿಕೊಂಡಿದ್ದಾರೆ.
ಅವರು ಬಾಹ್ಯ ಜಗತ್ತಿಗೆ ಸ್ಪಂದಿಸುತ್ತಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅವರಿನ್ನು ಗಾಲಿಕುರ್ಚಿಯಲ್ಲಿ ಚಲಿಸಲಿದ್ದಾರೆ. ಸದ್ಯದ ಮಟ್ಟಿಗೆ ಇದನ್ನೊಂದು ಪವಾಡವೆಂದೇ ಹೇಳಬೇಕು. ಅಂತಹ ದುರ್ಘಟನೆಗೆ ನೌರಿ ಒಳಗಾಗಿದ್ದರು.
ಘಟನೆ ಏನು?:
ನೆದರ್ಲೆಂಡ್‌ನ ಅಜಾಕ್ಸ್ ಕ್ಲಬ್ ತಂಡದ ತಾರಾ ಆಟಗಾರರಾಗಿದ್ದ ನೌರಿ, ತಮ್ಮ 20ನೇ ವಯಸ್ಸಿನಲ್ಲಿ ಮೈದಾನದಲ್ಲೇ ಹೃದಯಘಾತಕ್ಕೊಳಗಾಗಿದ್ದರು. 2017, ಜು.8ರಂದು ಜರ್ಮನಿಯ ವೆರ್ಡರ್ ಬ್ರೆಮನ್ ಕ್ಲಬ್ ವಿರುದ್ಧ ಆಸ್ಟ್ರಿಯದಲ್ಲಿ ನಡೆದ ಪಂದ್ಯದಲ್ಲಿ ದಿಢೀರನೆ ಅವರು ಕುಸಿದುಬಿದ್ದಿದ್ದರು. ಆ ವೇಳೆ ಮೈದಾನದಲ್ಲಿದ್ದ ವೈದ್ಯರು ಸೂಕ್ತ ಚಿಕಿತ್ಸೆ ನೀಡಲಿಲ್ಲ ಎಂದು ಅವರನ್ನು ಪದಚ್ಯುತಿ ಮಾಡಲಾಗಿತ್ತು. ತಕ್ಷಣ ವಿಮಾನದಲ್ಲಿ ಒಯ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಶಾಶ್ವತವಾಗಿ ಮೆದುಳಿನ ಆಘಾತಕ್ಕೆ ಒಳಗಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.