ನಿರ್ಗತಿಕರಿಗೆ, ಕಾರ್ಮಿಕರಿಗೆ ಎ ದರ್ಜೆ ದೇವಸ್ಥಾನಗಳಿಂದ ಉಪಹಾರ ಸರಬರಾಜು: ಸಚಿವ ಕೋಟ ಸೂಚನೆ
Team Udayavani, Mar 28, 2020, 1:32 PM IST
ಮಂಗಳೂರು: ಕೋವಿಡ್-19 ಸೋಂಕು ಹರಡದಂತೆ ದೇಶದಾದ್ಯಂತ ಲಾಕ್ ಡೌನ್ ವಿಧಿಸಿದ್ದು ಬಹಳಷ್ಟು ನಿರ್ಗತಿಕರು, ಕೂಲಿ ಕಾರ್ಮಿಕರು ಊಟವಿಲ್ಲದೇ ಪರದಾಡುತ್ತಿದ್ದಾರೆ. ಇವರಿಗೆ ಸಹಾಯವಾಗುವಂತೆ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಆಯ್ದ ಎ ದರ್ಜೆ ದೇವಸ್ಥಾನಗಳಿಂದ ಊಟ ಉಪಹಾರ ಸರಬರಾಜು ಮಾಡುವಂತೆ ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಯಾವ ಪ್ರದೇಶದಲ್ಲಿ ಇಂತಹ ಸಂಕಷ್ಟಕ್ಕೆ ಒಳಗಾದವರು ಇದ್ದಾರೋ ಅವರಿಗೆ ಉಪಹಾರ ಮತ್ತು ಊಟವನ್ನು ಸಿದ್ದಪಡಿಸಿ , ಪ್ರಾದೇಶಿಕವಾರು ಸಂದರ್ಭಕ್ಕನುಗುಣವಾಗಿ ಪ್ಯಾಕೇಟ್ ಗಳ ಮೂಲಕ ಅಥವಾ ಸ್ಥಳೀಯ ಜಿಲ್ಲಾಡಳಿತ ನಿರ್ಧರಿಸಿದಂತೆ ಆಹಾರ ವಿತರಿಸಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.