ಗೃಹಬಂಧನದಲ್ಲಿ ಕೆಎಸ್ಸಾರ್ಟಿಸಿ ಚಾಲನ ಸಿಬಂದಿ
Team Udayavani, Mar 29, 2020, 5:58 AM IST
ಬೆಂಗಳೂರು: ಅರಿವಿಲ್ಲದೆ ಆರೆಂಟು ಗಂಟೆಗಳ ಕಾಲ ಕೋವಿಡ್ 19 ವೈರಸ್ ಸೋಂಕಿತರೊಂದಿಗೆ ಪ್ರಯಾಣ ಬೆಳೆಸಿದ ಸುಮಾರು 22 ಚಾಲನ ಸಿಬಂದಿ ಗೃಹ ಬಂಧನಕ್ಕೆ ಗುರಿಯಾಗಿದ್ದಾರೆ. ಬೆನ್ನಲ್ಲೇ ಅವರೊಂದಿಗೆ ಆಕಸ್ಮಿಕವಾಗಿ ಸಂಪರ್ಕ ಹೊಂದಿದ್ದ ನೂರಾರು ಮಂದಿ ಈಗ ಬೆಂಕಿ ಮೇಲೆ ನಿಂತಂತೆ ಚಡಪಡಿಸುತ್ತಿದ್ದಾರೆ.
ಕೆಎಸ್‌ಆರ್‌ಟಿಸಿ 18 ಮತ್ತು ಬಿಎಂಟಿಸಿಯ 4 ಚಾಲನ ಸಿಬಂದಿ ದಾರಿಯುದ್ದಕ್ಕೂ ನಿಲ್ದಾಣ ಮತ್ತು ವಿಭಾಗೀಯ ನಿಯಂತ್ರಕರು, ಸಹೋದ್ಯೋಗಿ ಚಾಲಕ ಮತ್ತ ನಿರ್ವಾಹಕರ ಕೈಕುಲುಕಿದ್ದಾರೆ. ದಾರಿ ಮಧ್ಯೆ ಬಸ್ ನಿಲ್ಲಿಸಿ, ಚಹಾ-ಕಾಫಿ ಹೀರಿದ್ದಾರೆ. ಹೀಗೆ ಆಕಸ್ಮಿಕವಾಗಿ ಸಂಪರ್ಕಕ್ಕೆ ಬಂದವರು ನೂರಾರು ಮಂದಿ ಇದ್ದಾರೆ. ಅವರೆಲ್ಲರ ಭವಿಷ್ಯವನ್ನು “ಗೃಹ ಬಂಧನ’ದಲ್ಲಿರುವ ಈ 22 ಚಾಲನ ಸಿಬಂದಿಯ ಆರೋಗ್ಯ ನಿರ್ಧರಿಸಲಿದೆ.
ಇಲ್ಲಿ ಸಾಮಾನ್ಯವಾಗಿ ಚಾಲಕನಿಗಿಂತ ನಿರ್ವಾಹಕರು ಪ್ರಯಾಣಿಕರೊಂದಿಗೆ ಹೆಚ್ಚು ಸಂಪರ್ಕದಲ್ಲಿ ಇರುತ್ತಾರೆ. ನಿಯಂತ್ರಕರ ಬಳಿ ಎಂಟ್ರಿ ಮಾಡಿಸಿಕೊಳ್ಳಲು ಮತ್ತಿತರ ಕಾರಣಗಳಿಗೆ ಹೋಗುವವರೂ ಇದೇ ಸಿಬಂದಿ. ಈ ಹಿನ್ನೆಲೆಯಲ್ಲಿ ಸೋಂಕಿನ ಸಾಧ್ಯತೆ ನಿರ್ವಾಹಕರಿಂದ ಹೆಚ್ಚಿರುತ್ತದೆ. ಆದರೆ ಸೋಂಕಿತ ವ್ಯಕ್ತಿ ಪ್ರಯಾಣ ಮಾಡಿದ ವಾರದ ಅನಂತರ ಇದು ಗೊತ್ತಾಗಿದೆ. ಹಾಗೊಂದು ವೇಳೆ ಸೋಂಕು ಲಕ್ಷಣಗಳು ಕಂಡುಬಂದರೆ ಉಳಿದವರ ಪತ್ತೆ ಸವಾಲಾಗಲಿದೆ. ಆದ್ದರಿಂದ ಸ್ವಯಂ ಜಾಗೃತಿ ಹೆಚ್ಚು ಸೂಕ್ತ ಎಂದು ಅಧಿಕಾರಿಗಳು ತಿಳಿಸುತ್ತಾರೆ.
ಸದ್ಯಕ್ಕೆ ನಿರಾಳ
ಇನ್ನು ಈಗಾಗಲೇ 22 ಕುಟುಂಬಗಳ ಪೈಕಿ ಬಹುತೇಕರು ಎಂಟು-ಹತ್ತು ದಿನ ಕ್ವಾರಂಟೈನ್‌ನಲ್ಲಿ ಕಳೆದಿದ್ದು, ನಿಗಮ ಹಾಗೂ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಗಳ ಪ್ರಕಾರ ಯಾವುದೇ ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಹಾಗಾಗಿ ಸದ್ಯಕ್ಕೆ ಉಳಿದವರೂ ನಿರಾಳ.
ಅಂದಹಾಗೆ ಬೆಂಗಳೂರಿನಿಂದ ಮಡಿಕೇರಿ, ಉಪ್ಪಿನಂಗಡಿ, ಶಿರಾ, ದಾವಣಗೆರೆ, ಗೋವಾ- ಬೆಟಗೇರಿ (ಗದಗ ಜಿಲ್ಲೆ), ಮೈಸೂರು- ನಂಜನಗೂಡು ಮಧ್ಯೆ ಸಂಚರಿಸುವ ನಾಲ್ಕು ಬಸ್‌ಗಳು, ಬಿಎಂಟಿಸಿಯ ಎರಡು ಬಸ್‌ಗಳ 22 ಚಾಲನ ಸಿಬಂದಿ ಮೇಲೆ ನಿಗಾ ಇಡಲಾಗಿದೆ.
ಪ್ರಾಥಮಿಕ ತಪಾಸಣೆಯಲ್ಲೇ ಈ ಚಾಲನ ಸಿಬಂದಿಗೆ ಯಾವುದೇ ಸಮಸ್ಯೆ ಇಲ್ಲದಿರು
ವುದು ದೃಢಪಟ್ಟಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ್ ಮಾಡಲಾಗಿದೆ. ಇನ್ನೊಂದು ವಾರದಲ್ಲಿ ಎಲ್ಲರೂ ಉಳಿದವರಂತೆ ಓಡಾಡಲಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮ
ಎಲ್ಲ ಚಾಲನ ಸಿಬಂದಿ ಆರೋಗ್ಯವಾಗಿದ್ದಾರೆ. ಹಾಗಾಗಿ ಉಳಿದವರು ಆತಂಕಪಡುವ ಅಗತ್ಯವಿಲ್ಲ. ಆದಾಗ್ಯೂ ಅವರು ಭೇಟಿಯಾದ ನಿಯಂತ್ರಕರಿಗೆ ಈಗಾಗಲೇ ಸ್ವಯಂಪ್ರೇರಿತವಾಗಿ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
– ಶಿವಯೋಗಿ ಕಳಸದ, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್‌ಆರ್‌ಟಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.