ಆರೋಗ್ಯ ಯೋಧರು: ಮಗನನ್ನು ಆಲಿಂಗಿಸಿಕೊಳ್ಳಲು ಆಗದೇ ಕಣ್ಣೀರು ಹಾಕುವ ವೈದ್ಯ
Team Udayavani, Mar 29, 2020, 8:11 AM IST
ಕೋವಿಡ್ 19 ವೈರಸ್ ಗೆ ಹೆದರಿ ಎಲ್ಲರೂ ಮನೆಯ 4 ಗೋಡೆಗಳಿಗೆ ಸೀಮಿತವಾಗಿರುವ ಈ ಸಂದರ್ಭದಲ್ಲಿ ವೈದ್ಯರೊಬ್ಬರ ಮನೆಯಲ್ಲಿ ನಡೆದ ಘಟನೆಯ ಭಾವನಾತ್ಮಕ ವಿಡಿಯೋವೊಂದು ಎಲ್ಲರ ಕಣ್ಣನ್ನು ಮಂಜಾಗಿಸಿದೆ.
ಸೌದಿ ಅರೇಬಿಯಾದಲ್ಲಿ ಕೋವಿಡ್ 19 ವೈರಸ್ ಪೀಡಿತರಿಗೆ ಚಿಕಿತ್ಸೆ ನೀಡಿದ ವೈದ್ಯರೊಬ್ಬರು ಆಸ್ಪತ್ರೆಯಿಂದ ಮನೆಗೆ ವಾಪಸಾಗುತ್ತಾರೆ. ಮನೆಯ ಬಾಗಿಲು ತೆಗೆದು ಒಳಪ್ರವೇಶಿಸುತ್ತಿದ್ದಂತೆ, ಅಪ್ಪನನ್ನು ಕಂಡು ಸಂತೋಷಗೊಂಡ ಮಗು ಅಪ್ಪನನ್ನು ಆಲಿಂಗಿಸಿಕೊಳ್ಳಲೆಂದು ಧಾವಿಸಿ ಬರುತ್ತದೆ.
ವೈದ್ಯಕೀಯ ಸುರಕ್ಷಾ ಉಡುಪನ್ನು ಧರಿಸಿದ್ದ ವೈದ್ಯ ತಂದೆ, ತಕ್ಷಣ ದೂರದಿಂದಲೇ ಮಗುವನ್ನು ನಿಲ್ಲುವಂತೆ ತಡೆದು, ಹಿಂದಕ್ಕೆ ಹೋಗು ಎಂದು ಸೂಚಿಸುತ್ತಾರೆ. ಆಗ ಮಗುವಿನ ಮುಖದಲ್ಲಾದ ದುಗುಡ ನೋಡಿ ಮರುಗುವ ತಂದೆ, ಅಲ್ಲೇ ಕುಳಿತು ಕಣ್ಣೀರು ಹಾಕುವ ದೃಶ್ಯ ಮನಕಲಕುವಂತಿದೆ.
A Saudi doctor returns home from the hospital, tells his son to keep his distance, then breaks down from the strain. pic.twitter.com/0ER9rYktdT
— Mike (@Doranimated) March 26, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.