ಬನ್ನಿ ಕೈ ತೊಳೆದುಕೊಳ್ಳೋಣ…
Team Udayavani, Mar 29, 2020, 5:30 AM IST
ಕೋವಿಡ್ 19 ವೈರಸ್‌ನಿಂದ ದುರಂತದ ಸರಮಾಲೆಯೇ ಘಟಿಸುತ್ತಿರುವುದನ್ನು ನೋಡುತ್ತಿದ್ದೇವೆ. ಈ ಬಗ್ಗೆ ಸರಕಾರ ಹಾಗೂ ವೈದ್ಯರು ಸಮರೋಪಾದಿಯಲ್ಲಿ ಕಾರ್ಯ ಮಾಡುತ್ತಿದ್ದಾರೆ. ವೈರಸ್ ತಡೆಗೆ ಕೈ ಶುಚಿತ್ವವೂ ಕೂಡ ಬಹುಮುಖ್ಯ.
ಕೈ ಸುರಕ್ಷತೆ ಹಾಗೂ ಕೈ ತೊಳೆಯುವುದರಿಂದ ಆಗುವ ವೈದ್ಯಕೀಯ ಅನುಕೂಲಗಳನ್ನು ಮೊದಲು ಜಗತ್ತಿಗೆ ತಿಳಿಸಿದವರು 1847ರ ಹೊತ್ತಿಗೆ ಹಂಗೇರಿಯ ವೈದ್ಯರಾಗಿದ್ದ ಇಗ್ನಾಝ್ ಸೆಮ್ಮೆಲ…. ಇವರು ವಿಯೆನ್ನಾದ ಜನರಲ್ ಆಸ್ವತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡಿದವರು. ಆ ಕಾಲದಲ್ಲಿಯೇ ಅವರು ವೈಜ್ಞಾನಿಕವಾಗಿ ಕೈ ತೊಳೆದುಕೊಳ್ಳುವ ಬಗ್ಗೆ ಜನರಿಗೆ ಮನವರಿಕೆ ಮಾಡಿ ಜಾಗೃತಿ ಉಂಟುಮಾಡಿ¨ªಾರೆ.
ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಕೈ ಕಾಲು ತೊಳೆಯುವ ಪರಿಪಾಠ ಸಾಮಾನ್ಯವಾಗಿತ್ತು. ಶುಚಿತ್ವದ ಕಲ್ಪನೆ ಬಹಳ ಕಾಲದಿಂದಲೂ ನಮ್ಮಲ್ಲಿ ರೂಢಿಯಲ್ಲಿತ್ತು. ಮನೆಗಳನ್ನು ಪ್ರವೇಶಿಸುವಾಗ ಸಾಮಾನ್ಯವಾಗಿ ಕೈ ಕಾಲು ತೊಳೆದುಕೊಂಡು ಹೋಗುವುದು ನಮ್ಮಲ್ಲಿ ಸಾಮಾನ್ಯ ವಿಚಾರ. ಮಕ್ಕಳು ಮನೆಯಲ್ಲಿ ಆಹಾರ ಸ್ವೀಕರಿಸಲು ತೊಡಗಿದರೆ ಕೈ ತೊಳೆದು ತಿನ್ನಿ ಅನ್ನುವುದು ಮಾಮೂಲು. ಅತಿಥಿಗಳು ಬಂದಾಗ ಕೈ ಕಾಲು ತೊಳೆಯಲು ನೀರು ಕೊಡುವುದು ಈಗಲೂ ನಡೆಯುತ್ತಿರುವ ಪದ್ಧತಿ. ಇನ್ನು ಧಾರ್ಮಿಕ ಕಾರ್ಯಗಳಲ್ಲಿ ಸ್ನಾನ ಮಾಡಿ ಶುಚಿಯಾಗಿ ಇರುವುದು ನಮ್ಮ ಪರಂಪರೆಯೇ ಆಗಿದೆ. ಇದು ಶುಚಿತ್ವದ ಮೊದಲ ಪಾಠವೆಂದು ಹೇಳ ಬಹುದು. ಇದು ಭಾರತೀಯ ಸಂಸ್ಕೃತಿಯಲ್ಲಿ ಸಹಸ್ರಾರು ವರ್ಷಗಳಿಂದ ಬಂದ ಪದ್ಧತಿಯೇ ಆಗಿದೆ. ಇನ್ನು ಮಡಿ, ಮುಸುರೆ ಎಂಬ ಹೆಸರಿನಲ್ಲಿ ನಮ್ಮ ಕೈ ಶುಚಿತ್ವವನ್ನು ಯಾವಾಗಲೂ ಕಾಪಾಡಿಕೊಂಡು ಬಂದಿರುವುದು ಭಾರತದ ಭವ್ಯ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತದೆ.
ಕೈ ತೊಳೆಯದೆ ಆಹಾರ ಸ್ವೀಕರಿಸುವುದರಿಂದ ಅನೇಕ ವೈರಸ್ ಹಾಗೂ ಬ್ಯಾಕ್ಟೀರಿಯಾಗಳು ನಮಗೆ ಗೊತ್ತಿಲ್ಲದಂತೆ ಬಾಯಿಯ ಮೂಲಕ ಹೊಟ್ಟೆಗೆ ಸೇರುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಇತ್ತೀಚೆಗಿನ ವರದಿಯ ಪ್ರಕಾರ ಕೈಯ ಅಸುರಕ್ಷತೆಯಿಂದ ಪ್ರತಿವರ್ಷ ಸುಮಾರು 3.5 ಮಿಲಿಯನ್ ಮಕ್ಕಳು ಸಾಯುತ್ತಿ¨ªಾರೆ. ಡಯೇರಿಯ ಹಾಗೂ ನ್ಯೂಮೇನಿಯದಂತಹ ಕಾಯಿಲೆಗಳು ಕೈ ತೊಳೆಯದೆ ಆಹಾರ ಸ್ವೀಕಾರ ಮಾಡುವುದರಿಂದ ಬರುತ್ತದೆ. ಈಗ ಕೋವಿಡ್ 19 ವೈರಸ್ ಕೂಡ ಹೊಸದಾಗಿ ಸೇರ್ಪಡೆಯಾಗಿದೆ. ಸಾವಿರಾರು ಜನರನ್ನು ಇದೀಗ ಬಲಿ ಪಡೆಯುತ್ತಿದೆ.
ಕೈಯ ಅಸುರಕ್ಷತೆ ಬಗ್ಗೆ ಕಳವಳಗೊಂಡ ವಿಶ್ವಸಂಸ್ಥೆ 2008ರ ಅಕ್ಟೋಬರ್ 15ರಂದು ಸಭೆ ಸೇರಿ ಮಹತ್ವದ ನಿರ್ಧಾರಕ್ಕೆ ಬಂದಿತು. ಅಕ್ಟೋಬರ್ 15ನ್ನು ಅಧಿಕೃತವಾಗಿ ವಿಶ್ವ ಕೈ ತೊಳೆಯುವ ದಿನವನ್ನಾಗಿ ಘೋಷಿಸಲಾಯಿತು. ಆಗ ಸುಮಾರು 70 ದೇಶಗಳು ವಿಶ್ವ ಆರೋಗ್ಯ ಸಂಸ್ಥೆ ವತಿಯಿಂದ ಆ ವರ್ಷದಿಂದಲೇ ಕೈ ಶುಚಿತ್ವದ ಬಗ್ಗೆ ಕಾರ್ಯಕ್ರಮ ಹಾಗೂ ಮಾಹಿತಿ ನೀಡಲು ಆರಂಭಿಸಿದವು. ಈಗ ಬಹುತೇಕ ರಾಷ್ಟ್ರಗಳಲ್ಲಿ ಪ್ರತಿ ವರ್ಷ ಅಕ್ಟೋಬರ್ 15ರಂದು ವಿಶ್ವ ಕೈ ತೊಳೆಯುವ ದಿನಾಚರಣೆ ಮಾಡಲಾಗುತ್ತಿದೆ. ಭಾರತದ ಅನೇಕ ಶಾಲೆಗಳಲ್ಲಿ , ಆಸ್ಪತ್ರೆಗಳಲ್ಲಿ ಅನೇಕ ಕಾರ್ಯಕ್ರಗಳನ್ನು ಮಾಡಲಾಗುತ್ತಿದೆ.
ಅಡುಗೆ ಮಾಡುವ ಮೊದಲು ಹಾಗೂ ಅನಂತರ, ಆಹಾರ ಸ್ವೀಕರಿಸುವ ಮೊದಲು ಹಾಗೂ ಅನಂತರ, ಪ್ರಾಣಿಗಳನ್ನು ಮುಟ್ಟಿದ ಆನಂತರ, ಕಸಗಳನ್ನು ಮುಟ್ಟಿದಾಗ, ಕಾರ್ಖಾನೆ ಇತ್ಯಾದಿಗಳಲ್ಲಿ ಕೆಲಸ ಮಾಡಿದ ಆನಂತರ ಇದಕ್ಕಿಂತಲೂ ಹೆಚ್ಚಾಗಿ ಶೌಚ ಹಾಗೂ ಮೂತ್ರ ವಿಸರ್ಜನೆ ಮಾಡುವ ಮೊದಲು ಹಾಗೂ ಅನಂತರ ಕಡ್ಡಾಯವಾಗಿ ಸೋಪು ಬಳಸಿ ಕೈ ತೊಳೆದುಕೊಳ್ಳಬೇಕು. ವರದಿಯೊಂದರ ಪ್ರಕಾರ ಶೇ. 15 ಪುರುಷರು, ಶೇ. 7 ಮಹಿಳೆಯರು ಶೌಚಾಲಯ ಬಳಸಿದ ಅನಂತರ ಸೋಪ್ ಬಳಸಿ ಕೈ ತೊಳೆದುಕೊಳ್ಳುವುದಿಲ್ಲ ಎಂದು ಹೇಳಿದೆ. ಎಲ್ಲರೂ ಕಡ್ಡಾಯವಾಗಿ ಸೋಪ್ ಬಳಸಿ ಕೈ ತೊಳೆದು ಆರೋಗ್ಯ ಕಾಪಾಡಿಕೊಳ್ಳಬೇಕು. ವಿಶ್ವ ಆರೋಗ್ಯ ಸಂಸ್ಥೆಯು ವೈಜ್ಞಾನಿಕವಾಗಿ ಕೈ ತೊಳೆದುಕೊಳ್ಳುವ ವಿವಿಧ ಹಂತಗಳನ್ನು ತಿಳಿಸಿದೆ. ವೈದ್ಯ ಲೋಕವು ಇದನ್ನೇ ಒಪ್ಪಿ ನಡೆಯುತ್ತಿದೆ. ಇದರ ಬಗ್ಗೆ ಮಾಹಿತಿ ನೀಡುವ ಕಾರ್ಯ ಆಗುತ್ತಲೇ ಇದೆ.
ಕೈತೊಳೆಯುವ ಸರಿಯಾದ ವಿಧಾನ
-ಮೊದಲ ಹಂತದಲ್ಲಿ ಮೊದಲಿಗೆ ಎರಡೂ ಕೈಗಳನ್ನೂ ಸುಮಾರು ಅರ್ಧ ಮೊಣಕೈ ವರೆಗೂ ನೀರನ್ನು ತೋಯಿಸಿಕೊಂಡು ಸೋಪು ಅಥವಾ ಸೋಪಿನ ದ್ರಾವಣವನ್ನು ಹಾಕಿಕೊಂಡು ಎರಡೂ ಹಸ್ತಗಳಿಂದ ಚೆನ್ನಾಗಿ ಉಜ್ಜಿ ನೊರೆ ಬರುವಂತೆ ಮಾಡಬೇಕು.
-ಎರಡನೆಯ ಹಂತದಲ್ಲಿ ಬಲ ಹಸ್ತದ ಮುಂಭಾಗದಿಂದ ಎಡ ಹಸ್ತದ ಹಿಂಭಾಗಕ್ಕೆ , ಎಡ ಹಸ್ತ ಮುಂಭಾಗದಿಂದ ಬಳ ಹಸ್ತದ ಹಿಂಭಾಗಕ್ಕೆ ನೊರೆ ಹಚ್ಚಬೇಕು. ಹಾಗೆಯೇ ಬೆರಳುಗಳನ್ನು ಕೆಳಗಿನ ಹಸ್ತದ ಬೆರಳುಗಳ ನಡುವೆ ಓಡಾಡಿಸಿ ಸಂದುಗಳಲ್ಲಿಯೂ ನೊರೆ ತುಂಬಿಕೊಳ್ಳುವ ಹಾಗೆ ಮಾಡಬೇಕು.
-ಮೂರನೆಯ ಹಂತದಲ್ಲಿ ಎರಡೂ ಹಸ್ತಗಳನ್ನು ಒಂದಕ್ಕೊಂದು ತಾಗಿಸಿ ಬೆರಳುಗಳನ್ನು ಒಂದರ ಒಳಗೊಂದು ಬರುವಂತೆ ಸ್ವಲ್ಪ ಒತ್ತಡದಿಂದ ಉಜ್ಜಿಕೊಳ್ಳಬೇಕು.
-ನಾಲ್ಕನೆಯ ಹಂತದಲ್ಲಿ ಎರಡೂ ಹಸ್ತದ ಬೆರಳುಗಳನ್ನು ಕೊಕ್ಕೆಯಂತೆ ಅರ್ಧ ಮಡಚಿ ಒಂದಕ್ಕೊಂದು ಸಿಕ್ಕಿಸಿರುವಂತೆ ಎರಡೂ ಹಸ್ತಗಳನ್ನು ಅಡ್ಡಲಾಗಿ ಉಜ್ಜಿಕೊಳ್ಳಬೇಕು.
-ಐದನೆಯ ಹಂತದಲ್ಲಿ ಎಡ ಹೆಬ್ಬರಳುಗಳನ್ನು ಬಲಗೈಯ ಉಳಿದ ನಾಲ್ಕೂ ಬೆರಳುಗಳು ಸುತ್ತುವರಿಯುವಂತೆ ಹಿಡಿದು ಎಡಮುಖ ಹಾಗೂ ಬಲಮುಖವಾಗಿ ತಿರುಗಿಸಬೇಕು.
-ಆರನೆಯ ಹಂತದಲ್ಲಿ ಐದು ಬೆರಳುಗಳ ತುದಿ ಒಂದೆಡೆ ಬರುವಂತೆ ಮುಚ್ಚಿ ಈ ತುದಿಗಳಿಂದ ಎಡ ಹಸ್ತದ ನಡುಭಾಗದಲ್ಲಿ ಸ್ವಲ್ಪವೇ ಒತ್ತಡದಿಂದ ವೃತ್ತಾಕಾರದಲ್ಲಿ ತಿರುಗಿಸಬೇಕು. ಹಾಗೆಯೇ ಬಲ ಹಸ್ತಕ್ಕೆ ಅನ್ವಯಿಸಿ ಕೊಳ್ಳಬೇಕು. ಎರಡೂ ಕೈಗಳ ಮಣಿ ಕಟ್ಟುಗಳನ್ನು ಉಜ್ಜಿಕೊಳ್ಳಬೇಕು.ಕೊನೆಯದಾಗಿ ಎರಡೂ ಕೈಗಳಿಗೆ ನೀರನ್ನು ಹಾಕಿ ತೊಳೆದುಕೊಳ್ಳಬೇಕು.
ಈ ರೀತಿ ಮಾಡುವುದರಿಂದ ಕೈಯಲ್ಲಿನ ಭಾಗಗಳಿಗೂ ನೀರು ಹಾಗೂ ಸೋಪು ಹೋಗಿ ಕೈ ಶುದ್ಧವಾಗುತ್ತದೆ. ಕೊಳೆ, ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳು ಇಲ್ಲದಾಗುತ್ತವೆ.
ಪ್ರಸ್ತುತ ಕೊರೊನಾ ವೈರಸ್ ಕೂಡ ಒಬ್ಬರ ಕೈಯಿಂದ ಮತ್ತೂಬ್ಬರ ಕೈಗೆ ಸರಾಗವಾಗಿ ಹೋಗುತ್ತದೆ. ಆದ್ದರಿಂದ ಇನ್ನೊಬ್ಬರ ಕೈ ಕುಲುಕಲು ಹೋಗಬಾರದು. ಹಾಗೆಯೇ ಕೈ ತೊಳೆಯದೆ ಆಹಾರ ಸ್ವೀಕಾರ ಮಾಡುವುದರಿಂದ ವೈರಸ್ ಬರುತ್ತಿದೆ. ಇದಕ್ಕಾಗಿ ಕೈಯನ್ನು ಸೋಪಿನಿಂದ ತೊಳೆಯೋಣ. ಕೊರೊನಾ ವೈರಸ್ ಬರದಂತೆ ಜಾಗ್ರತೆ ವಹಿಸಿರಿ. ಬನ್ನಿ ಕೈ ತೊಳೆದುಕೊಳ್ಳೋಣ.
-ಡಾ| ಪ್ರಸನ್ನಕುಮಾರ ಐತಾಳ್, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.