ಸೋಂಕಿತರ ಪತ್ತೆಗೆ ಸಿದ್ಧವಾಗುತ್ತಿದೆ ಶ್ವಾನಪಡೆ!
Team Udayavani, Mar 29, 2020, 12:15 PM IST
ಲಂಡನ್: ವಾಸನೆ ಗ್ರಹಿಸಿ ಕಳ್ಳರನ್ನು ಹಿಡಿ ಯುವ ಶ್ವಾನಗಳು ತಮ್ಮ ಈ ವಿಶೇಷ ಸಾಮರ್ಥ್ಯದಿಂದ ಕೋವಿಡ್ ವೈರಸ್ ಸೋಂಕಿತರನ್ನು ಪತ್ತೆ ಹಚ್ಚ ಬಲ್ಲವೇ? ಇಂಥದೊಂದು ಪ್ರಶ್ನೆಗೆ ಇಂಗ್ಲೆಂಡ್ ವಿಜ್ಞಾನಿಗಳು ಉತ್ತರ ಹುಡುಕುತ್ತಿದ್ದಾರೆ.
ಮೆಡಿಕಲ್ ಡಿಟೆಕ್ಷನ್ ಡಾಗ್ಸ್ (ಎಂಡಿಡಿ), ಲಂಡನ್ ಸ್ಕೂಲ್ ಆಫ್ ಹೈಜೀನ್ ಆಂಡ್ ಟ್ರಾಪಿಕಲ್ ಮೆಡಿಸಿನ್ ಮತ್ತು ಡುರ್ಹಾಮ್ ವಿ.ವಿ. ಸಹಯೋಗದಲ್ಲಿ ಇಂಥದೊಂದು ಪ್ರಯತ್ನಕ್ಕೆ ಮುಂದಾಗಿದೆ. ಶ್ವಾನಗಳು ತಮ್ಮ ವಾಸನೆ ಗ್ರಹಿಕೆ ಸಾಮರ್ಥ್ಯದ ಮೂಲಕ ಮಲೇರಿಯಾ ರೋಗ ಪತ್ತೆ ಮಾಡಬಲ್ಲವೇ ಎಂಬ ಕುರಿತು ಈ ಹಿಂದೆ ಸಂಶೋಧನೆ ನಡೆದಿತ್ತು. ಇದರ ಆಧಾರದಲ್ಲೇ ಇದೀಗ ಕೊರೊನಾ ವೈರಸ್ ಸೋಂಕಿತರ ಪತ್ತೆಗೆ ಶ್ವಾನ ಪಡೆ ನೆರವಾಗಬಲ್ಲದೇ ಎಂಬ ಕುರಿತು ಪರೀಕ್ಷೆ ನಡೆಸಲಾಗುತ್ತಿದೆ.
ಶ್ವಾನಗಳಿಗೆ ಆರು ವಾರಗಳ ಕಾಲ ತರಬೇತಿ ನೀಡುವ ಆಲೋಚನೆಯಿದ್ದು, ಈ ಸಂಬಂಧ ಅಗತ್ಯ ಸಿದ್ಧತೆ ನಡೆಯುತ್ತಿದೆ. ಈ ಪ್ರಯೋಗ ಯಶಸ್ವಿಯಾದರೆ, ತ್ವರಿತ ರೋಗ ಪತ್ತೆ ಸಾಧ್ಯವಾಗಲಿದೆ. ಈ ಹಿಂದೆ ಕ್ಯಾನ್ಸರ್, ಪಾರ್ಕಿನ್ಸನ್ ರೋಗಿಗಳ ಪತ್ತೆಗೆ ಶ್ವಾನಗಳನ್ನು ಯಶಸ್ವಿಯಾಗಿ ತರಬೇತುಗೊಳಿಸಿರುವ ದತ್ತಿ ಸಂಸ್ಥೆಯೇ ಕೊರೊನಾ ವೈರಸ್ ಸೋಂಕಿತರ ಪತ್ತೆ ಕಾರ್ಯದಲ್ಲಿ ತೊಡಗಲಿರುವ ಶ್ವಾನಗಳಿಗೂ ತರಬೇತಿ ನೀಡಲಿದೆ ಎಂದು ಎಂಡಿಡಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.