ಅಂದು ವಿಶ್ವಕಪ್ ಹೀರೋ, ಇಂದು ರಿಯಲ್ ಹೀರೋ: ಜೋಗಿಂದರ್ ಶರ್ಮಾರನ್ನು ಹೊಗಳಿದ ಐಸಿಸಿ
Team Udayavani, Mar 29, 2020, 12:20 PM IST
ಚಂಡೀಗಢ: 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಭಾರತ ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲಲು ಕಾರಣವಾಗಿದ್ದು ಆಲ್ ರೌಂಡರ್ ಜೋಗಿಂದರ್ ಶರ್ಮಾ. ಈ ವಿಶ್ವಕಪ್ ನಂತರ ಕ್ರಿಕೆಟ್ ನಿಂದ ದೂರವಾಗಿದ್ದ ಜೋಗಿಂದರ್ ಶರ್ಮಾರನ್ನು ಈಗ ಐಸಿಸಿ ( ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ) ಹೊಗಳಿ ಟ್ವೀಟ್ ಮಾಡಿದೆ. ಕಾರಣ ಕೋವಿಡ್-19.
ಹೌದು. ಸದ್ಯ ಕ್ರಿಕೆಟ್ ನಿಂದ ದೂರವಾಗಿರುವ ಜೋಗಿಂದರ್ ಶರ್ಮಾ ಹರ್ಯಾಣದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದಾರೆ. ಉಪ ವರಿಷ್ಠಾಧಿಕಾರಿಯಾಗಿರುವ ಶರ್ಮಾ ಸದ್ಯ ಕೋವಿಡ್-19 ಲಾಕ್ ಡೌನ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಜೋಗಿಂದರ್ ಶರ್ಮಾರ ಈ ಫೋಟೊವನ್ನು ತನ್ನ ಟ್ವೀಟರ್ ನಲ್ಲಿ ಅಪ್ಲೋಡ್ ಮಾಡಿರುವ ಐಸಿಸಿ, 2007ರ ವಿಶ್ವಕಪ್ ಹೀರೋ ಈಗ ರಿಯಲ್ ವಿಶ್ವದ ಹೀರೋ. ಈ ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಭಾರತದ ಪೊಲೀಸ್ ಜೋಗಿಂದರ್ ಶರ್ಮಾ ಸೇವೆ ಮಾಡುತ್ತಿದ್ಧಾರೆ ಎಂದು ಬರೆದುಕೊಂಡಿದೆ.
2007: #T20WorldCup hero ?
2020: Real world hero ?In his post-cricket career as a policeman, India’s Joginder Sharma is among those doing their bit amid a global health crisis.
[? Joginder Sharma] pic.twitter.com/2IAAyjX3Se
— ICC (@ICC) March 28, 2020
2007ರ ವಿಶ್ವಕಪ್ ಫೈನಲ್ ನಲ್ಲಿ ನಿರ್ಣಾಯಕ ಅಂತಿಮ ಓವರ್ ಬಾಲ್ ಹಾಕಿದ್ದ ಶರ್ಮಾ ಮಿಸ್ಭಾ ಉಲ್ ಹಕ್ ವಿಕೆಟ್ ಪಡೆದು ಭಾರತ ಕಪ್ ಗೆಲ್ಲಲು ಕಾರಣವಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
ಕೊಹ್ಲಿ-ರೋಹಿತ್ ಬಳಿಕ ಜಡೇಜಾ ಸ್ಥಾನಕ್ಕೂ ಕುತ್ತು: ಕಠಿಣ ನಿರ್ಧಾರ ಕೈಗೊಂಡ ಬಿಸಿಸಿಐ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
BPL;ಅಂತಿಮ ಓವರಿನಲ್ಲಿ 30 ರನ್ ಸಿಡಿಸಿದ ನುರುಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.