ಕೋವಿಡ್ 19 ಮಹಾಮಾರಿ ಗೆದ್ದ ಬಗ್ಗೆ ಸ್ಟೋರಿ ಮಾಡಿ; ಪ್ರಧಾನಿ ಹೇಳಿದ ಎರಡು ಪ್ರಸಂಗ ಓದಿ
ಕೋವಿಡ್ 19 ಮಹಾಮಾರಿ ಗೆದ್ದ ಸ್ಟೋರಿಯನ್ನು ವೈರಲ್ ಮಾಡುವಂತೆ ಕೇಳಿಕೊಂಡಿರುವುದಾಗಿ ಭಾನುವಾರದ ಮನ್ ಕೀ ಬಾತ್ ನಲ್ಲಿ ತಿಳಿಸಿದ್ದಾರೆ.
Team Udayavani, Mar 29, 2020, 2:39 PM IST
ನವದೆಹಲಿ:ಕೋವಿಡ್ 19 ಮಾರಣಾಂತಿಕ ಸೋಂಕು ಕ್ಷಿಪ್ರವಾಗಿ ಜಗತ್ತಿನಾದ್ಯಂತ ಹರಡುತ್ತಿದ್ದು, ಈ ಹಿನ್ನೆಲೆಯಲ್ಲಿ ಜನರು ಭಯಭೀತರಾಗದಂತೆ ಇರುವ ನಿಟ್ಟಿನಲ್ಲಿ ಕೋವಿಡ್ 19 ಮಹಾಮಾರಿ ಗೆದ್ದು ಬಂದ ಇಬ್ಬರಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದು,ಕೋವಿಡ್ 19 ಮಹಾಮಾರಿ ಗೆದ್ದ ಸ್ಟೋರಿಯನ್ನು ವೈರಲ್ ಮಾಡುವಂತೆ ಕೇಳಿಕೊಂಡಿರುವುದಾಗಿ ಭಾನುವಾರದ ಮನ್ ಕೀ ಬಾತ್ ನಲ್ಲಿ ತಿಳಿಸಿದ್ದಾರೆ.
ರಾಮಗಾಂಪಾ ತೇಜಾ ಹೈದರಾಬಾದ್ ಮೂಲದ ಐಟಿ ಉದ್ಯೋಗಿಯೊಬ್ಬ ಕೋವಿಡ್ 19 ಮಹಾವೈರಸ್ ನಿಂದ ಗುಣಮುಖ ಹೊಂದಿದ ವಿಷಯವನ್ನು ಮನ್ ಕೀ ಬಾತ್ ನಲ್ಲಿ ಹಂಚಿಕೊಂಡಿದ್ದರು. ತೇಜಾ ಮೊದಲು ಪರೀಕ್ಷೆಗೊಳಗಾದಾಗ ಕೋವಿಡ್ 19 ಸೋಂಕು ಪಾಸಿಟಿವ್
ವರದಿ ಬಂದಿತ್ತು. ಆದರೆ ಆತ ಅದನ್ನು ನಂಬಿರಲಿಲ್ಲವಾಗಿತ್ತು. ಕೂಡಲೇ ಆತ ಆಸ್ಪತ್ರೆಗೆ ದಾಖಲಾಗಿದ್ದ. ಈತ ಕಚೇರಿ ಕೆಲಸದ ಮೇಲೆ ದುಬೈಗೆ ಭೇಟಿ ನೀಡಿ ವಾಪಸ್ ಬಂದಾಗ ಕೋವಿಡ್ 19 ಸೋಂಕು ತಗುಲಿರುವುದು ಪತ್ತೆಯಾಗಿತ್ತು.
ತೇಜಾ ಆಸ್ಪತ್ರೆಯಲ್ಲಿದ್ದ ಆರಂಭದ ಕೆಲವು ದಿನಗಳಲ್ಲಿ, ಕೋವಿಡ್ 19 ಪ್ರಕರಣ ಒಂದೊಂದಾಗಿ ವರದಿಯಾಗುತ್ತಿತ್ತು. ಆದರೆ ವೈದ್ಯರು ಮತ್ತು ನರ್ಸ್ ಧೈರ್ಯ ತುಂಬಿರುವುದಾಗಿ ತಿಳಿಸಿದ್ದ. ಇದರಿಂದಾಗಿ ನಾನು ಕೂಡಲೇ ಗುಣಮುಖನಾಗುವ ವಿಶ್ವಾಸ ಹೊಂದಿದ್ದೆ ಎಂದು ಹೇಳಿದ್ದ.
ಕೋವಿಡ್ ವೈರಸ್ ಸೋಂಕು ತಗುಲಿದ ನಂತರ ಕುಟುಂಬ ವರ್ಗದವರ ಪ್ರತಿಕ್ರಿಯೆ ಹೇಗಿತ್ತು ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದು, ಮನೆಯವರೆಲ್ಲಾ ತುಂಬಾ ಒತ್ತಡಕ್ಕೆ ಒಳಗಾಗಿದ್ದು, ಭಯಭೀತರಾಗಿದ್ದರಂತೆ. ಆದರೆ ಅವರನ್ನೆಲ್ಲಾ ಪರೀಕ್ಷಿಸಿದ್ದು ವರದಿ ನೆಗೆಟೀವ್ ಎಂದು ಬಂದಿತ್ತು. ಇದರಿಂದ ದೊಡ್ಡ ನಿರಾಳತೆ ಸಿಕ್ಕಂತಾಗಿತ್ತು ಎಂದು ತೇಜಾ ವಿವರಿಸಿದ್ದ.
ಕೋವಿಡ್ 19 ಸೋಂಕಿನಿಂದ ಗುಣಮುಖ ಹೊಂದಿದ ಮೇಲೂ , ಕ್ವಾರಂಟೈನ್ ಮಗಿದ ನಂತರ ಕೂಡಾ ತೇಜಾ ಪ್ರತಿಯೊಂದು ಸುರಕ್ಷತಾ ಕ್ರಮವನ್ನು ಅನುಸರಿಸಿದ್ದಾರೆ. ಸ್ವಯಂ ಐಸೋಲೇಶನ್ ಸೇರಿದಂತೆ ಕೈ ತೊಳೆಯುವುದನ್ನು ಮುಂದುವರಿಸಿದ್ದರು ಎಂದು ತಿಳಿಸಿದ್ದಾರೆ.
ನೀವೊಬ್ಬ ಐಟಿ ಉದ್ಯೋಗಿ. ನಿಮ್ಮ ಸ್ಟೋರಿಯನ್ನು ಆಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ವೈರಲ್ ಮಾಡಿ. ಇದರಿಂದಾಗಿ ಜನರು ಭಯಭೀತರಾಗುವುದಿಲ್ಲ. ಅಲ್ಲದೇ ಕೋವಿಡ್ ವೈರಸ್ ಅನ್ನು ಹೇಗೆ ಎದುರಿಸಬಹುದು ಎಂಬ ಬಗ್ಗೆ ಮನವರಿಕೆಯಾಗಲಿದೆ ಎಂದು ಮೋದಿ ತೇಜಾ ಅವರಿಗೆ ಸಲಹೆ ನೀಡಿದ್ದರು.
ಮೋದಿ ಹೇಳಿದ ಎರಡನೇ ಪ್ರಸಂಗ:
ಕೋವಿಡ್ 19 ಮಹಾಮಾರಿ ಸೋಂಕಿನಿಂದ ಗುಣಮುಖರಾದ ಆಗ್ರಾದ ಅಶೋಕ್ ಕಪೂರ್ ಎಂಬ ವ್ಯಕ್ತಿಗೂ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿದ್ದರು. ಕಪೂರ್ ಹಾಗೂ ಆತನ ಇಡೀ ಕುಟುಂಬಕ್ಕೆ ಕೋವಿಡ್ 19 ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ವರದಿ ಬಂದಿತ್ತು.
ಕಪೂರ್ ಹಾಗೂ ಆತನ ಇಬ್ಬರು ಮಕ್ಕಳು, ಅಳಿಯ ಶೂ ಮೇಳಕ್ಕಾಗಿ ಇಟಲಿಗೆ ತೆರಳಿದ್ದರು. ಅಲ್ಲಿಂದ ವಾಪಸ್ ಆಗ್ರಾಕ್ಕೆ ಬಂದ ಮೇಲೆ ಅಳಿಯ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ಹೋಗಿದ್ದ. ಆತ ನನ್ನ ಇಬ್ಬರು ಮಕ್ಕಳಿಗೂ ಪರೀಕ್ಷಿಸಿಕೊಳ್ಳುವಂತೆ ಸೂಚಿಸಿದ್ದ. ನಂತರ ಆಗ್ರಾ ಆಸ್ಪತ್ರೆಗೆ ಹೋದಾಗ ವೈದ್ಯರು ಹೇಳಿದರು, ಇಡೀ ಕುಟುಂಬ ಸದಸ್ಯರು ಪರೀಕ್ಷೆಗೆ ಒಳಗಾಗಬೇಕು ಎಂದು ಸೂಚಿಸಿದ್ದರು. ಅದರಂತೆ ಕಪೂರ್ 73ವರ್ಷ, ಪತ್ನಿ, ಆತನ ಇಬ್ಬರು ಮಕ್ಕಳು, ಸೊಸೆ, ಮೊಮ್ಮಕ್ಕಳನ್ನು ಪರೀಕ್ಷಿಸಿದಾಗ ಇಡೀ ಕುಟುಂಬದ ವರದಿ ಪಾಸಿಟಿವ್ ಎಂದು ಬಂದಿತ್ತು!
ನಂತರ ಎರಡು ಆ್ಯಂಬುಲೆನ್ಸ್ ನಲ್ಲಿ ಇಡೀ ಕುಟುಂಬ ಸದಸ್ಯರು ದೆಹಲಿಯ ಸಪ್ಧರ್ ಜಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ನಾನು ಆರೋಗ್ಯವಾಗಿದ್ದೇನೆ. ಈ ವೇಳೆ ಮೊಣಕಾಲು ಶಸ್ತ್ರಚಿಕಿತ್ಸೆಯನ್ನು ಮಾಡಿಕೊಂಡಿರುವುದಾಗಿ ಕಪೂರ್ ಪ್ರಧಾನಿಗೆ ತಿಳಿಸಿದ್ದರು. ಕೋವಿಡ್ 19 ಮಹಾಮಾರಿ ಹರಡುವುದನ್ನು ತಡೆಗಟ್ಟಲು ಪ್ರಧಾನಿ ಮೋದಿ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಿದ್ದು, ಐದು ದಿನದ ಬಳಿಕ ಭಾನುವಾರ ದೇಶದ ಜನತೆಯನ್ನು ಉದ್ದೇಶಿಸಿ ಮನ್ ಕೀ ಬಾತ್ ನಲ್ಲಿ ಮಾತನಾಡುತ್ತಿ ಈ ಎರಡು ಸ್ಪೂರ್ತಿದಾಯಕ ಪ್ರಸಂಗಗಳನ್ನು ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ರಾಜ್ಯಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ “ಸೆಂಗೋಲ್’ ಸಮರ!
BJP: ವಿಪ್ ನೀಡಿದ್ರೂ ಕಲಾಪಕ್ಕೆ ಗೈರಾದ 20 ಸಂಸದರಿಗೆ ಬಿಜೆಪಿ ನೋಟಿಸ್ ಸಾಧ್ಯತೆ
ವಂಚನೆಗೀಡಾಗಿ ಪಾಕ್ ಸೇರಿದ್ದ ಭಾರತದ ಮಹಿಳೆ 22 ವರ್ಷ ಬಳಿಕ ಸ್ವದೇಶಕ್ಕೆ
PM Modi: ಕಾಂಗ್ರೆಸ್ ರೈತರಿಗೆ ತಾನೂ ಒಳಿತು ಮಾಡದು ಬೇರೆ ಅವರಿಗೂ ಬಿಡದು
Coimbatore ಸರಣಿ ಸ್ಫೋಟದ ರೂವಾರಿ ಎಸ್.ಎ.ಬಾಷಾ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.