ಸೋಂಕು ಹರಡುವವರ ವಿರುದ್ಧ ಕಾನೂನಾಸ್ತ್ರ; ಈ ಸೆಕ್ಷನ್‌ಗಳು ಏನು ಹೇಳುತ್ತವೆ?
Team Udayavani, Mar 30, 2020, 7:40 AM IST
ದೂರದ ದುಬಾೖಯಿಂದ ಹಿಮಾಚಲ ಪ್ರದೇಶದ ಕಾಂಗ್ರಾಕ್ಕೆ ಆಗಮಿಸಿದ್ದ ಮಹಿಳೆಯೊಬ್ಬರಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿತ್ತು. ಆದರೆ ಟ್ರಾವೆಲ್ ಹಿಸ್ಟರಿಯನ್ನು ವಿವರಿಸದ ಕಾರಣ, ಅವರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 270ರ ಅನ್ವಯ ಪ್ರಕರಣ ದಾಖಲಿಸಲಾಯಿತು. ಇನ್ನು, ಸೋಂಕಿಗೊಳಗಾಗಿದ್ದ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ವಿರುದ್ಧ ಐಪಿಸಿ ಸೆಕ್ಷನ್ 269, 188ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಈ ಸೆಕ್ಷನ್‌ಗಳು ಏನು ಹೇಳುತ್ತವೆ, ಇದನ್ನು ಯಾವಾಗ, ಹೇಗೆ ಬಳಸಲಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ:
ಸೆಕ್ಷನ್ 269, 270 ನಡುವಿನ ವ್ಯತ್ಯಾಸ
ಮಾರಣಾಂತಿಕ ಕಾಯಿಲೆ ಅಥವಾ ಸೋಂಕನ್ನು ಇತರರಿಗೆ ಹರಡದಂತೆ ಎಚ್ಚರಿಕೆ ವಹಿಸದೆ, ಬೇಜವಾಬ್ದಾರಿ ವಹಿಸುವವರ ಮೇಲೆ ಐಪಿಸಿಯ 269ನೇ ವಿಧಿಯನ್ನು ಪ್ರಯೋಗಿಸಲಾಗುತ್ತದೆ.
ಇನ್ನು, ಐಪಿಸಿ 270ನೇ ವಿಧಿಯು ಪ್ರಜಾದ್ರೋಹಕ್ಕೆ ಸಂಬಂಧಿಸಿದ್ದಾಗಿದೆ. ತನಗೆ ಮಾರಣಾಂತಿಕ ಕಾಯಿಲೆ ಇರುವುದು ತಿಳಿದಿದ್ದರೂ ಉಳಿದ ಪ್ರಜೆಗಳಿಗೆ ಹರಡುವಂಥ ನಡೆಯನ್ನು ಅನುಸರಿಸಿದ್ದಕ್ಕಾಗಿ ಇದರನ್ವಯ ಪ್ರಯೋಗ ದಾಖಲಿಸಬಹುದಾಗಿದೆ.
ಸೆಕ್ಷನ್ 188 ಎಂಬ ಮತ್ತೂಂದು ಅಸ್ತ್ರ
ಸೋಂಕು ಹರಡುವವರ ವಿರುದ್ಧ ಬಳಸಲಾಗುವ ಸೆಕ್ಷನ್ 269, 270 ಹೊರತಾಗಿ ಸೆಕ್ಷನ್ 188 ಅನ್ನೂ ದಾಖಲಿಸಬಹುದಾಗಿದೆ. ಸರಕಾರದ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಇದನ್ನು ಬಳಸಲಾಗುತ್ತದೆ. ಉದಾಹರಣೆಗೆ, ಈಗ ದೇಶದೆಲ್ಲೆಡೆ ಲಾಕ್‌ಡೌನ್ ಪರಿಸ್ಥಿತಿ ಇದ್ದು ಈ ನಿಬಂಧನೆಯನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಸೆಕ್ಷನ್ 188 ಬಳಸಬಹುದು.
ಶಿಕ್ಷೆಯ ಪ್ರಮಾಣ ಹೇಗೆ?
ಐಪಿಸಿ 269ನೇ ವಿಧಿಯನ್ವಯ ಅಪರಾಧಿಗಳಿಗೆ 6 ತಿಂಗಳು ಜೈಲು ಅಥವಾ ದಂಡ ವಿಧಿಸಬಹುದು. ವಿಶೇಷ ಸಂದರ್ಭ ಗಳಲ್ಲಿ ಇವೆರಡನ್ನೂ ವಿಧಿಸಬಹುದು.
ಐಪಿಸಿ 270ನೇ ವಿಧಿಯನ್ವಯ ಎರಡು ವರ್ಷ ಜೈಲು ಅಥವಾ ದಂಡ ವಿಧಿಸಬಹುದು. ಕೆಲವೊಮ್ಮೆ ಇವೆರಡನ್ನೂ ಸೇರಿಸಿ ಶಿಕ್ಷೆ ಪ್ರಕಟಿಸಬಹುದು.
ಹಿಂದಿನ ಪ್ರಕರಣಗಳು
1886ರಲ್ಲಿ ವ್ಯಕ್ತಿಯೊಬ್ಬ ತನಗೆ ಕಾಲರಾ ಇದ್ದರೂ ರೈಲಿನಲ್ಲಿ ಪ್ರಯಾಣಿಸಿದ್ದಕ್ಕೆ ಆತನ ವಿರುದ್ಧ ಸೆಕ್ಷನ್ 269ರ ಅನ್ವಯ ಮದ್ರಾಸ್ ಹೈಕೋರ್ಟ್ ಶಿಕ್ಷೆ ಜಾರಿಗೊಳಿಸಿತ್ತು.
2015ರಲ್ಲಿ ಮ್ಯಾಗಿ ನೂಡಲ್ಸ್ ಬಗ್ಗೆ ಜಾಹೀರಾತು ನೀಡಿದ್ದಕ್ಕೆ ಬಾಲಿವುಡ್ ನಟ ನಟಿಯರಾದ ಅಮಿತಾಭ್ ಬಚ್ಚನ್, ಮಾಧುರಿ ದೀಕ್ಷಿತ್, ಪ್ರೀತಿ ಝಿಂಟಾ ಹಾಗೂ ನೆಸ್ಲೆ ಕಂಪನಿಯ ಇಬ್ಬರು ಅಧಿಕಾರಿಗಳ ವಿರುದ್ಧ ಸೆಕ್ಷನ್ 270, 273 (ಅಪಾಯಕಾರಿ ತಿನಿಸು ಮಾರಾಟಕ್ಕೆ ಸಹಕಾರ) ಮತ್ತು 420 (ಮೋಸ) ಪ್ರಕಾರ ಕೇಸ್ ದಾಖಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.