ಹಾಸಿಗೆಗಿಂತ ಕಡಿಮೆ ಕಾಲು ಚಾಚಿ


Team Udayavani, Mar 30, 2020, 3:17 PM IST

ಹಾಸಿಗೆಗಿಂತ ಕಡಿಮೆ ಕಾಲು ಚಾಚಿ

ಅವನು ಸರ್ಕಾರಿ ನೌಕರನಾಗಿರಬಹುದು, ಇಲ್ಲವೇ ಫ್ಯಾಕ್ಟರಿ ಕಾರ್ಮಿಕನಾಗಿರಬಹುದು. ಅಷ್ಟೇ ಯಾಕೆ? ತರಕಾರಿ ಮಾರಾಟಗಾರ, ಪೆಟ್ಟಿಗೆ ಅಂಗಡಿಯ ಮಾಲೀಕ, ಹೋಟೆಲ್‌ ಉದ್ಯಮಿ ಅಥವಾ ಕೃಷಿಕ- ಈ ಯಾರೇ ಆಗಿರಬಹುದು. ಎಲ್ಲರಿಗೂ ಇರುವ ಬಹು ದೊಡ್ಡ ಆಸೆಯೆಂದರೆ, ಒಂದಷ್ಟು ಕಾಸು ಮಾಡಬೇಕು ಎನ್ನುವುದು. ಕಾಸಿದ್ದ ಕಡೆಯಲ್ಲಿ ಖುಷಿ ಇರುವುದಿಲ್ಲ ಎಂಬ ಮಾತೂ ಇದೆ.

ಆದರೆ ಅದನ್ನು ಒಪ್ಪಲು ಯಾರೂ ಸಿದ್ಧರಿಲ್ಲ. ಕಾಸು ಇದ್ದರೆ ಮಾತ್ರ ಸುತ್ತಲಿನ ಸಮಾಜದಲ್ಲಿ ಪರಿಚಿತರು- ಬಂಧುಗಳ ಗುಂಪಿನಲ್ಲಿ ಮರ್ಯಾದೆ ಸಿಗುತ್ತದೆ ಎಂದು ಪದೇ ಪದೆ ಸಾಬೀತಾಗಿರುವುದರಿಂದ ಹಣವಂತರಾಗಲು ಎಲ್ಲರೂ ಆಸೆ ಪಡುವವರೇ.ಒಂದು ಬಾರಿ ಶ್ರೀಮಂತ ಎಂದು ಕರೆಸಿಕೊಂಡರೆ ಆ ಕ್ಷಣದಿಂದಲೇ ಸೋಷಿಯಲ್‌ ಸ್ಟೇಟಸ್‌ ಬದಲಾಗುತ್ತದೆ. ಶ್ರೀಮಂತ ಎಂದು ಬ್ರ್ಯಾಂಡ್‌ ಆದಮೇಲೆ ನೀವು ಬೈಕಿನಲ್ಲೋ, ಸಿಟಿ ಬಸ್ಸಿನಲ್ಲೋ ಓಡಾಡಲು ಆಗುವುದಿಲ್ಲ. ಕಾರಿನಲ್ಲೇ ಓಡಾಡಬೇಕು. ಕಾರು ಅಂದ ತಕ್ಷಣ ಒಂದು ಸಂಗತಿ ನೆನಪಾಯ್ತು.

‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂಬುದು ಹಳೆಯ ಮಾತು. ‘ಹಾಸಿಗೆ ಇದೆಯಲ್ಲ, ಅದಕ್ಕಿಂತ ಕಡಿಮೆ ಕಾಲು ಚಾಚು’ ಎಂಬುದು ಈಗಿನ ಮಾತು. ಅಂದರೆ ನಮಗೆ ಫಾರ್ಚೂನರ್‌ ಕಾರು ಖರೀದಿಸುವ ಸಾಮರ್ಥ್ಯ ಇದ್ದರೂ ಅದಕ್ಕಿಂತ ಐದಾರು ಲಕ್ಷ ಕಡಿಮೆ ಬೆಲೆಯ ಕಾರು ಖರೀದಿಸುವುದು ಸೂಕ್ತ. ಏಕೆಂದರೆ ನಾಳಿನ ಪರಿಸ್ಥಿತಿ, ಸವಾಲುಗಳನ್ನು ಬಲ್ಲವರಾರು? ದಿಢೀರನೆ ಪೆಟ್ರೋಲ್‌ ಬೆಲೆ, ದಿನಸಿ, ಮೆಡಿಕಲ್‌ ಬಿಲ್ಲುಗಳೆಲ್ಲಾ ಒಮ್ಮೆಲೇ ಏರಿದರೆ? ನಮ್ಮೆಲ್ಲಾ ಉಳಿತಾಯ ಒಂದೇ ಸಲ ಅವಕ್ಕೆ ಖರ್ಚಾಗಿ ಬಿಟ್ಟರೆ? ಹೀಗಾಗಿ ಯಾವುದೇ ವಸ್ತು ಖರೀದಿಸುವ ಮುನ್ನ ಹಲವು ಲೆಕ್ಕಾಚಾರಗಳನ್ನು ಮಾಡಬೇಕಾಗುತ್ತದೆ.

ಈಗ ಮತ್ತೆ ಮೊದಲಿನ ಮಾತಿಗೆ ಹೋಗುವುದಾದರೆ, ಕಾರ್ಮಿಕ, ಪೆಟ್ಟಿಗೆ ಅಂಗಡಿ ಮಾಲೀಕ, ಹೋಟೆಲ್‌ ಉದ್ಯಮಿ, ತರಕಾರಿ ಮಾರಾಟಗಾರ- ಇವರೆಲ್ಲರೂ ಒಂದಷ್ಟು ಹೆಚ್ಚುವರಿ ಲಾಭ ಮಾಡಲು ಯೋಚಿಸುತ್ತಾರಲ್ಲ, ಅಂಥವರು ತಮಗೆ ಪರಿಚಿತವಾಗಿರುವ ಕ್ಷೇತ್ರದಲ್ಲಿ ಸಣ್ಣದೊಂದು ಬಂಡವಾಳ ಹೂಡಿ ರಿಸ್ಕ್ ತೆಗೆದುಕೊಂಡಾಗ ಮಾತ್ರ ಗೆಲ್ಲಲು ಸಾಧ್ಯ. ಒಬ್ಬ ಜಮೀನ್ದಾರ, ತಾನು ಕೃಷಿಯಲ್ಲಿ ಗೆದ್ದಿದ್ದೇನೆ ಎಂದು ಹೋಟೆಲ್‌ ಉದ್ಯಮದಲ್ಲೂ ಗೆಲ್ಲಲು ಸಾಧ್ಯವಿಲ್ಲ. ಅದು ಕಷ್ಟಕರ.

ಹೋಟೆಲ್‌ ಉದ್ಯಮದಲ್ಲಿ ಈಗಾಗಲೇ ಯಶಸ್ಸು ಕಂಡಿರುವ ಜನರ ಮಾರ್ಗದರ್ಶನ ಇದ್ದರೆ ಮಾತ್ರಗೆಲುವು ಸಾಧ್ಯ. ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಕಿಂಗ್‌ ಎನ್ನಿಸಿಕೊಂಡವ ಚಿತ್ರರಂಗಕ್ಕೆ ಬಂದು ಹಣ ಕಳೆದುಕೊಳ್ಳುವುದು, ಅಕೌಂಟೆಂಟ್‌ ಅನಿಸಿಕೊಂಡ ನೌಕರ ಬೇಕರಿ ಶುರು ಮಾಡಿ ಕೈಸುಟ್ಟುಕೊಳ್ಳುವುದು ಇವೆಲ್ಲಾ ನಿರ್ಲಕ್ಷ್ಯದಿಂದ ಆಗುವ ಅನಾಹುತ. ಹೀಗಾಗಿ ಹಾಸಿಗೆ ಇದ್ದಷ್ಟು ಅಲ್ಲ, ಇರುವುದಕ್ಕಿಂತ ಕಡಿಮೆ ಕಾಲು ಚಾಚಿದರೆ ಮಾತ್ರ ನೆಮ್ಮದಿ ಕಾಣಬಹುದು. ­

ಟಾಪ್ ನ್ಯೂಸ್

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

ARMY (2)

Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

20

Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.