ಕೋಟೆ :ವಯೋವೃದ್ಧರಿಗೆ ಊಟ ನೀಡುತ್ತಿರುವ ಗ್ರಾ.ಪಂ. ಅಧ್ಯಕ್ಷೆ
Team Udayavani, Mar 31, 2020, 5:16 AM IST
ಕಟಪಾಡಿ: ಕೋವಿಡ್ 19 ವೈರಸ್ ವ್ಯಾಪಿಸದಂತೆ ಕರೆಯಲಾದ ಲಾಕ್‌ಡೌನ್ ಕರೆಯಿಂದ ಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕೃತಿಕಾ ರಾವ್ ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಅಶಕ್ತರು, ವಯೋವೃದ್ಧರನ್ನು ಗುರುತಿಸಿ ಸ್ವತಃ ಅಡುಗೆ ಸಿದ್ಧಪಡಿಸಿ, ಊಟವನ್ನು ನೀಡುತ್ತಿದ್ದಾರೆ.
ಈಕೆ ಸಿದ್ಧ ಪಡಿಸಿದ ಅಡುಗೆಯಲ್ಲಿ ಪ್ರತಿಯೊಬ್ಬರಿಗೂ ಮಧ್ಯಾಹ್ನದ ಮತ್ತು ರಾತ್ರಿಯ ಸೇರಿ ಎರಡು ಹೊತ್ತಿನ ಊಟವನ್ನು ಕಳೆದ ಎರಡು ದಿನಗಳಿಂದ ನೀಡುತ್ತಾ ಬರುತ್ತಿದ್ದಾರೆ. ಸುಮಾರು 60ಕ್ಕೂ ಅಧಿಕ ಊಟವನ್ನು ಸಿದ್ಧಪಡಿಸಿ ಇದುವರೆಗೆ ವಿತರಿಸಿರುತ್ತಾರೆ. ಪರಿಸ್ಥಿತಿ ತಿಳಿಗೊಳ್ಳುವವರೆಗೆ ಮುಂದುವರಿಸುವ ಇರಾದೆಯನ್ನು ವ್ಯಕ್ತಪಡಿಸಿರುತ್ತಾರೆ.
ಈ ಭಾಗದ ಅಶಕ್ತ ವಯೋವೃದ್ಧರು ಇಂತಹ ತುರ್ತು, ಸಂದಿಗ್ಧ ಪರಿಸ್ಥಿಯನ್ನು ಅರಿತ ಹೆಣ್ಣು ಮಗಳು ಈ ರೀತಿಯಾಗಿ ವಯೋವೃದ್ಧರಾದ ನಮಗೆ ಕೈಯಡುಗೆ ಊಟ ನೀಡುತ್ತಿದ್ದು ಬಹಳಷ್ಟು ಶ್ರೇಷ್ಠ ಕೆಲಸ ಎಂದು ಹರಸಿದ್ದು, ಈಕೆಯ ಈ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.ಕೋಟೆ ಗ್ರಾ.ಪಂ. ಸದಸ್ಯರಾದ ರತ್ನಾಕರ ಕೋಟ್ಯಾನ್, ಲಲಿತಾ ಸೇರಿಗಾರಿ, ಆಶಾ ಕಾರ್ಯಕರ್ತೆ ಚಂದ್ರಕಲಾ, ಪ್ರಸನ್ನ ಭಟ್, ನಿತಿನ್, ಸಂತೋಷ್ ಮೆಂಡನ್ ಜೊತೆಗಿದ್ದು ಸಹಕರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.