20 ಸಖಿಯರ ಜತೆ ಥಾಯ್ ರಾಜ ಜರ್ಮನಿಯಲ್ಲಿ ಐಸೋಲೇಶನ್! ದೇಶ ಬಿಟ್ಟ ರಾಜನ ವಿರುದ್ಧ ಆಕ್ರೋಶ
ಲಾಕ್ ಡೌನ್ ಉಲ್ಲಂಘಿಸಿ ವಿಶೇಷ ಅನುಮತಿ ಮೇರೆಗೆ ಇಡೀ ಐಶಾರಾಮಿ ಗ್ರ್ಯಾಂಡ್ ಹೋಟೆಲ್ ಬುಕ್
Team Udayavani, Mar 31, 2020, 3:25 PM IST
ಬರ್ಲಿನ್:ಮಾರಣಾಂತಿಕ ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಥಾಯ್ ಲ್ಯಾಂಡ್ ಪ್ಲೇ ಬಾಯ್ ರಾಜ 20 ಸಖಿಯರ ಜತೆ ಜರ್ಮನಿಯ ಐಶಾರಾಮಿ ಹೋಟೆಲ್ ನಲ್ಲಿ ಐಸೋಲೇಶನ್ ನಲ್ಲಿ ಇದ್ದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಥಾಯ್ ಲ್ಯಾಂಡ್ ರಾಜ ಮಹಾ ವಜಿರಾಲೋಂಗ್ ಕೋರ್ನಾ (67ವರ್ಷ) ಲಾಕ್ ಡೌನ್ ಉಲ್ಲಂಘಿಸಿ ವಿಶೇಷ ಅನುಮತಿ ಮೇರೆಗೆ ಇಡೀ ಐಶಾರಾಮಿ ಗ್ರ್ಯಾಂಡ್ ಹೋಟೆಲ್ ಅನ್ನು ಬುಕ್ ಮಾಡಿಕೊಂಡಿರುವುದಾಗಿ ದ ಇಂಡಿಪೆಂಡೆಂಟ್ ತಿಳಿಸಿರುವುದಾಗಿ ಹೇಳಿದೆ.
ಸ್ವಯಂ ಐಸೋಲೇಶನ್ ನಲ್ಲಿರುವ ರಾಜ ತನ್ನೊಂದಿಗೆ ಅಡುಗೆ ಸೇವಕರು ಹಾಗೂ 20 ಮಂದಿ ಸಖಿಯರನ್ನು ಕರೆದೊಯ್ದಿರುವುದಾಗಿ ಬ್ರಿಟನ್ ಪತ್ರಿಕೆ ವರದಿ ಮಾಡಿರುವುದಾಗಿ ಜರ್ಮನ್ ಟ್ಯಾಬ್ಲಾಯ್ಡ್ ಬಿಲ್ಡ್ ವರದಿ ಮಾಡಿದೆ.
ಮಾರಣಾಂತಿಕ ಕೋವಿಡ್ 19 ವೈರಸ್ ಭೀತಿಯಿಂದಾಗಿ ತನ್ನೊಂದಿಗೆ ಕರೆದೊಯ್ದಿದ್ದ ಸುಮಾರು 119 ಮಂದಿ ಸಿಬ್ಬಂದಿಗಳನ್ನು ಥಾಯ್ ಲ್ಯಾಂಡ್ ಗೆ ವಾಪಸ್ ಕಳುಹಿಸಿರುವುದಾಗಿ ವರದಿ ವಿವರಿಸಿದೆ. ಈ ಸಂದರ್ಭದಲ್ಲಿ ವಜಿರಲೋಂಗ್ ಜತೆ ನಾಲ್ಕನೇ ಪತ್ನಿ ಇದ್ದಾರೆಯೇ ಅಥವಾ ಇಲ್ಲವೋ ಎಂಬುದು ಖಚಿತವಾಗಿಲ್ಲ ಎಂದು ವರದಿ ತಿಳಿಸಿದೆ.
ವಾಜಿರಲೋಂಗ್ ಕಾರ್ನ್ ತಂದೆ, ಹಿಂದಿನ ದೊರೆ ಭೂಮಿಬೋಲ್ ಅದುಲ್ಯದೇಜ್ ಅವರು 2016ರಲ್ಲಿ ನಿಧನರಾದ ಎರಡೂವರೆ ವರ್ಷಗಳ ನಂತರ ಪಟ್ಟಾಭಿಷೇಕ ನಡೆದಿತ್ತು. ಮಹಾರಾಜ ವಜಿರಲೋಂಗ್ ಕಾರ್ನ್ ಹತ್ತನೇ ರಾಮ ಎಂದೇ ಜನಪ್ರಿಯರಾಗಿದ್ದರು. ಇವರು ರಾಯಲ್ ಥಾಯ್ ಸೇನೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇವರು ಒಟ್ಟು ನಾಲ್ಕು ಮದುವೆಯಾಗಿದ್ದು,
ಪಟ್ಟಾಭಿಷೇಕಕ್ಕೆ ಕೆಲವು ದಿನ ಇರುವಾಗ ತನ್ನ ಭದ್ರತಾಪಡೆಯ ಉಪ ಕಮಾಂಡರ್ ಸುಥಿತಾ ಅವರನ್ನು ವಿವಾಹವಾಗಿದ್ದರು.
ಥಾಯ್ ಲ್ಯಾಂಡ್ ನಲ್ಲಿ ಭುಗಿಲೆದ್ದ ಆಕ್ರೋಶ:
ಕೋವಿಡ್ ನಂತಹ ಮಾರಣಾಂತಿಕ ವೈರಸ್ ಹಬ್ಬುತ್ತಿರುವ ಸಂದರ್ಭದಲ್ಲಿ ರಾಜ ದೇಶ ಬಿಟ್ಟು ಐಶಾರಾಮಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿರುವುದಕ್ಕೆ ಥಾಯ್ ಲ್ಯಾಂಡ್ ನಲ್ಲಿ ಆಕ್ರೋಶ ಭುಗಿಲೆದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ರಾಜ ಯಾಕೆ ಬೇಕು ಎಂಬ ಹ್ಯಾಶ್ ಟ್ಯಾಗ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಥಾಯ್ ಲ್ಯಾಂಡ್ ನಲ್ಲಿ 1500 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು, ಸುಮಾರು 9 ಮಂದಿ ಸಾವನ್ನಪ್ಪಿದ್ದು, ಫೆಬ್ರುವರಿಯಿಂದ ಈವರೆಗೂ ರಾಜ ಥಾಯ್ ಲ್ಯಾಂಡ್ ನಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ ಎಂದು ವರದಿ ಹೇಳಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.