ಪ್ಲಾಸ್ಮಾ ಟ್ರೀಟ್ಮೆಂಟ್ ಕೋವಿಡ್ 19ಗೆ ಮದ್ದು!

ಮುಳ್ಳನ್ನು ಮುಳ್ಳಿನಿಂದಲೇ ತೆಗಿರಿ ಎಂದರೆ ಇದೇನಾ...

Team Udayavani, Mar 31, 2020, 8:00 PM IST

ಪ್ಲಾಸ್ಮಾ ಟ್ರೀಟ್ಮೆಂಟ್ ಕೋವಿಡ್ ಗೆ ಮದ್ದು!

ಬೀಜಿಂಗ್‌: ಮುಳ್ಳನ್ನು ಮುಳ್ಳಿನಿಂದಲೇ ತೆಗಿಯಬೇಕು ಎಂಬ ಮಾತಿದೆ. ಅಕ್ಷರಶಃ ಇದೇ ಮಾತಿನ ಮೊರೆ ಹೋಗಿರುವ ವೈದ್ಯರು ಕೋವಿಡ್‌-19 ಗೆ ಮದ್ದು ಅರೆಯುತ್ತಿದ್ದಾರೆ. ಕೋವಿಡ್‌-19 ಮಣಿಸಿ ಗೆದ್ದು ಬಂದಿರುವ ರೋಗಿಗಳ ರಕ್ತವನ್ನೇ ಕೋವಿಡ್‌-19 ವಿರುದ್ಧ ಪ್ರಯೋಗಿಸಲು ಮುಂದಾಗಿದ್ದಾರೆ.

ಹೌದು ಕೋವಿಡ್‌-19 ದಿಂದ ಬೇಸತ್ತಿರುವ ವಿಶ್ವಕ್ಕೆ ಸಮಾಧಾನದ ಸುದ್ದಿಯೊಂದಿದೆ. ಅದೂ ಚೀನದಿಂದಲೇ. ಕೋವಿಡ್‌-19ಗೆ ತಕ್ಕ ಲಸಿಕೆ ಸಿದ್ಧವಾಗದಿದ್ದರೂ, ಅದರ ವಿರುದ್ದ ಸಮರ್ಥ ಹೋರಾಟ ರೂಪಿಸಿ ಜೀವವನ್ನುಳಿಸಿಕೊಳ್ಳಬಲ್ಲ ರೋಗ ನಿರೋಧಕ ವ್ಯವಸ್ಥೆಯೊಂದನ್ನು ಚೀನ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ಹೇಗೆ ಕೆಲಸ ಮಾಡುತ್ತದೆ?
ವಿಜ್ಞಾನಿಗಳು ರೋಗದಿಂದ ಗುಣಮುಖರಾಗಿರುವ ‘ಹೆಚ್ಚು ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಗಳ ರಕ್ತ ಮಾದರಿ ಸಂಗ್ರಹಿಸಿ ಅದರಲ್ಲಿನ ಶಕ್ತಿಯುತ ಪ್ಲಾಸ್ಮಾ ಕಣಗಳನ್ನು ಒಂದುಗೂಡಿಸಿ ಸೋಂಕಿತ ರೋಗಿಗಳಿಗೆ ನೀಡಲುದ್ದೇಶಿಸಿದ್ದಾರೆ. ಆ ಮೂಲಕ ಅವರಲ್ಲೂ ರೋಗ ನಿರೋಧ ವ್ಯವಸ್ಥೆಯನ್ನು ಬಲಪಡಿಸಲು ಮುಂದಾಗಿದ್ದಾರೆ.

ಆರಂಭಿಕ ಪ್ರಯೋಗ
ಕೋವಿಡ್‌-19 ಸೋಂಕಿನಿಂದ ಸಂಪೂರ್ಣವಾಗಿರುವ ಗುಣಮುಖರಾಗಿರುವವರ ರಕ್ತದ ಪ್ಲಾಸ್ಮಾ ಪಡೆದು ಮೊದಲ ಹಂತದ ಪರೀಕ್ಷಾರ್ಥವಾಗಿ ಚೀನಾದ ವಿಜ್ಞಾನಿಗಳು ವೆಂಟಿಲೇಟರ್‌ನಲ್ಲಿನ ಐವರು ರೋಗಿಗಳಿಗೆ ಮೇಲೆ ಪ್ರಯೋಗಿಸಿದ್ದಾರೆ. ಇದು ಫಲಪ್ರದವಾಗಿದೆ ಎಂಬ ವರದಿಗಳು ಬರುತ್ತಿವೆ.

ಪ್ರಯೋಜನ ಏನು?
ಇದರಿಂದ ಸಾವಿನ ಸಂಖ್ಯೆಗೆ ಕಡಿವಾಣ ಬೀಳಲಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ವ್ಯವಸ್ಥೆ ಬಲಗೊಳ್ಳಲಿದೆ. ಇದು ರೋಗಿಗಳನ್ನು ವೆಂಟಿಲೇಟರ್‌ಗಳಿಂದ ದೂರವಿಡುವಷ್ಟರ ಮಟ್ಟಿಗೆ ನೆರವಾಗುತ್ತದೆ. ಅಂದರೆ ಕೃತಕ ಉಸಿರಾಟವಿಲ್ಲದೆ ರೋಗಿಗಳು ಬದುಕಬಹುದಾಗಿದೆ. ಇದರಿಂದ ಸಾವಿಗೆ ಬಲಿಯಾಗುತ್ತಿರುವವರ ಸಂಖ್ಯೆಗೆ ಕಡಿವಾಣ ಬೀಳಲಿದೆ.

ಸ್ಪಾನಿಶ್‌ ಫ್ಲೂನ ಪ್ರಯೋಗ
ಶತಮಾನದ ಹಿಂದೆ ಅಂದರೆ 1918ರಲ್ಲಿ ಸಾವಿಗೆ ಕಾರಣವಾದ ಸಾಂಕ್ರಾಮಿಕ ರೋಗ ಸ್ಪಾನಿಶ್‌ ಫ್ಲೂ ವಿರುದ್ಧವೂ ಇದೇ ತಂತ್ರ ಬಳಸಿ ರೋಗಿಗಳನ್ನು ಉಳಿಸಲಾಗಿತ್ತು. ಪ್ಲಾಸ್ಮಾ ದಾನಿಗಳ ನಿರೀಕ್ಷೆಯಲ್ಲಿ ವಿಜ್ಞಾನಿಗಳು ಕೋವಿಡ್‌-19 ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿರುವವರ ರಕ್ತದ ಪ್ಲಾಸ್ಮಾ ಸಂಗ್ರಹಿಸುತ್ತಿದ್ದಾರೆ. ಇದಕ್ಕೆ “ಹೈಪರ್‌ಇಮ್ಯೂನ್‌’ ವ್ಯಕ್ತಿಗಳು ಬೇಕಾಗಿದೆ.

ಅಂತಹವರನ್ನು ಗುರುತಿಸಿ, ಅವರಿಂದ ಪ್ಲಾಸ್ಮಾ ಪಡೆದು ಚಿಕಿತ್ಸೆ ಮುಂದುವರಿಸಲಾಗುತ್ತದೆ. ಇತಿಹಾಸದಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡಿರುವ ದಾಖಲೆ ಇದೆ.

ಟಾಪ್ ನ್ಯೂಸ್

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-russia

Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!

doctor 2

America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ

1-chinn

Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್‌ ಸ್ಪಷ್ಟನೆ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್‌ ರುವಾಂಡದಿಂದ ಭಾರತಕ್ಕೆ ಗಡಿಪಾರು!

Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್‌ ರುವಾಂಡದಿಂದ ಭಾರತಕ್ಕೆ ಗಡಿಪಾರು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.