9/11 ಮೀರಿಸಿದ ಸಾವಿನ ಸಂಖ್ಯೆ ; ಎಪ್ರಿಲ್ ತಿಂಗಳು, ಅಮೆರಿಕಕ್ಕೆ ಅತ್ಯಂತ ನಿರ್ಣಾಯಕ
Team Udayavani, Apr 1, 2020, 7:35 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಜಗತ್ತಿನ ಬಲಾಡ್ಯ ರಾಷ್ಟ್ರ ಅಮೆರಿಕದಲ್ಲಿ ಕೋವಿಡ್ 19 ವೈರಸ್ ನಿಂದ ಸಾವಿಗೀಡಾದವರ ಸಂಖ್ಯೆ 3, 200ನ್ನು ದಾಟಿದೆ. ಈ ಸಂಖ್ಯೆ 9/11ರ ದಾಳಿಯಲ್ಲಿ ಮಡಿದವರ ಸಂಖ್ಯೆಗಿಂತ ಅಧಿಕವಾಗಿದೆ. 2001ರಲ್ಲಿ ಅಲ್ ಖೈದಾ ಉಗ್ರ ಸಂಘಟನೆ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ನಡೆಸಿದ್ದ ದಾಳಿ ಯಲ್ಲಿ 2,977 ಮಂದಿ ಜೀವ ಕಳೆದುಕೊಂಡಿದ್ದರು.
ಇದೇ ವೇಳೆ, ಕೋವಿಡ್ 19 ಕಾರ್ಕೋಟಕ, ಅಮೆರಿಕದ ಹೆಗಲೇರಿ ಕುಳಿತಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರು, ಸಂಪೂರ್ಣ ಲಾಕ್‌ಡೌನ್ ಹೊರತಾಗಿ, ಬೇರೆ ದಾರಿಗಳೇ ಉಳಿದಿಲ್ಲ. ಎಪ್ರಿಲ್ ತಿಂಗಳು ಅತ್ಯಂತ ನಿರ್ಣಾಯಕ ಘಟ್ಟ ಎಂದು ಟ್ರಂಪ್ ಘೋಷಿಸಿದ್ದಾರೆ. 33 ಕೋಟಿ ಜನಸಂಖ್ಯೆಯ ಅಮೆರಿಕದಲ್ಲಿ ಈಗ 25 ಕೋಟಿ ಮಂದಿ, ಮನೆಯಿಂದ ಹೊರಗೆ ಕಾಲಿಡುತ್ತಿಲ್ಲ. ಸೋಂಕಿತರ ಸಂಖ್ಯೆ 2 ಲಕ್ಷ ಗಡಿ ಸಮೀಪಿಸುತ್ತಿದೆ. ಸೋಮವಾರ ಒಂದೇ ದಿನ 541 ಮಂದಿ ಅಸುನೀಗಿದ್ದರು.
10 ಲಕ್ಷಕ್ಕೂ ಅಧಿಕ ಮಂದಿ ಕೋವಿಡ್ 19 ವೈರಸ್ ಪರೀಕ್ಷೆಗೆ ಒಳಗಾಗಿದ್ದಾರೆ. ಈಗ ಪ್ರತಿನಿತ್ಯ 1 ಲಕ್ಷ ಮಂದಿ, ಪರೀಕ್ಷೆಗೆ ಒಳಪಡುತ್ತಿದ್ದು, ಆಸ್ಪತ್ರೆಗಳೇ ಜನರ ಗೂಡಾಗುತ್ತಿವೆ. “ಈ ವಾರ ಅಥವಾ ಮುಂದಿನ ವಾರದಲ್ಲಿ ಇದು ಅತ್ಯಂತ ಭೀಕರ ಸ್ಥಿತಿ ತಲುಪಲಿದೆ. ಇಲ್ಲಿಯ ತನಕ ಆಸ್ಪತ್ರೆಗಳಲ್ಲಿ ಜನದಟ್ಟಣೆಯನ್ನು ನಾವು ನೋಡಿಲ್ಲ. ಇನ್ನು ಎಲ್ಲವನ್ನೂ ನೋಡಬೇಕಾಗಿದೆ, ಎದುರಿಸಬೇಕಾಗಿದೆ’ ಎಂದು ನ್ಯೂಯಾರ್ಕ್‌ನ, ಭಾರತೀಯ ಮೂಲದ ವೈದ್ಯ ಶಮಿತ್ ಪಟೇಲ್ ಹೇಳಿದ್ದಾರೆ.
ನೆಲೆಸುವ ಅವಕಾಶ ಹೆಚ್ಚಿಸಿ
ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಬೇರೆ ದೇಶಗಳಿಂದ ಹೋಗಿ ದುಡಿಯುತ್ತಿರುವ 4.7 ಕೋಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಇವರಲ್ಲಿ ಭಾರತೀಯರೇ ಹೆಚ್ಚಾಗಿದ್ದಾರೆ. ಹಾಗೊಂದು ವೇಳೆ ಅವರು ಕೆಲಸ ಕಳೆದುಕೊಂಡರೆ, ಅವರು ಹೊಂದಿರುವ ಎಚ್1ಬಿ ವೀಸಾ ನಿಯಮಗಳ ಅನುಸಾರ ಅವರು ಕೆಲಸ ಕಳೆದುಕೊಂಡ ಅನಂತರವೂ ಅಮೆರಿಕದಲ್ಲಿ 60 ದಿನಗಳ ಕಾಲ ‘ಅನುಮತಿ ವಾಸ್ತವ್ಯ’ ಹೂಡಬಹುದು. ಹಾಗಾಗಿ, ಈ ಅವಕಾಶವನ್ನು 180 ದಿನಗಳಿಗೆ ಹೆಚ್ಚಿಸಬೇಕು ಎಂದು ಟ್ರಂಪ್ ಸರಕಾರವನ್ನು ಆಗ್ರಹಿಸಿರುವ ಆ ಉದ್ಯೋಗಿಗಳು, ವೈಟ್‌ಹೌಸ್ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಸಹಿ ಸಂಗ್ರಹಣೆ ಅಭಿಯಾನ ಆರಂಭಿಸಿದ್ದಾರೆ.
– ಎಲ್ಲೆಂದರಲ್ಲಿ ಆಸ್ಪತ್ರೆ ನಿರ್ಮಿಸುತ್ತಿರುವ ಸೇನೆ
– 3200 ಮೀರಿದ ಸಾವಿನ ಸಂಖ್ಯೆ
– 10 ಲಕ್ಷಕ್ಕೂ ಹೆಚ್ಚು ಮಂದಿ ನಾಗರಿಕರು ಸೋಂಕು ಪರೀಕ್ಷೆಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.