ಲಾಕ್‌ಡೌನ್: ನೀರುಪಾಲಾದ ಸಾವಿರಾರು ಲೀ. ಹಾಲು
Team Udayavani, Apr 1, 2020, 4:16 PM IST
ರಾಯಬಾಗ: ಲಾಕ್ ಡೌನ್ ಹಿನ್ನೆಲೆಯಲ್ಲಿ ಸಮೀಪದ ಪಾಲಬಾಂವಿ ಗ್ರಾಮದ ಗೌಳಿಗರು ತಾವು ಎರಡು ತಂಡವಾಗಿ ದಿನನಿತ್ಯ ಸಂಗ್ರಹಿಸಿದ ಸುಮಾರು 3000 ಲೀಟರ್ ಹಾಲನ್ನು ಗ್ರಾಮದ ಹೊರವಲಯದಲ್ಲಿ ಹರಿಯುತ್ತಿರುವ ಘಟಪ್ರಭಾ ಎಡದಂಡೆ ಕಾಲುವೆಗೆ ಸುರಿದ ಘಟನೆ ನಡೆದಿದೆ.
ಗೌಳಿಗರ ಪ್ರಮುಖರಾದ ಹುಸೇನ್ ರಮಜಾನ್ ಕಲಾಲ್ ಹಾಗೂ ಹೈದರ್ ಮುಜಾವರ್ ಮಾತನಾಡಿ, ಒಂದು ದಿನಕ್ಕೆ ಸುಮಾರು 60 ಸಾವಿರ ರೂ. ನಂತೆ ಬಿಲ್ಲು ಹಾಲು ಉತ್ಪಾದಕರಿಗೆ ಪ್ರತಿ ವಾರ ಸಂದಾಯ ಮಾಡುತ್ತಿದ್ದು, ಸಂಗ್ರಹಿಸಿದ ಹಾಲನ್ನು ತೇರದಾಳ, ಕುಡಚಿ, ರಾಯಬಾಗ, ಮೊರಬ ಸೇರಿದಂತೆ ಪುಣೆ-ಮುಂಬೈ ಕಡೆಗೆ ಕಳುಹಿಸಲಾಗುತ್ತಿತ್ತು. ಸೋಮವಾರ ಕುಡಚಿಯಲ್ಲಿ ಪೊಲೀಸರು ಹಾಲಿನ ವಾಹನವನ್ನು ಸೀಜ್ ಮಾಡಿದ ಪರಿಣಾಮವಾಗಿ ಉಳಿದ ಹಾಲನ್ನು ಪಾಲಬಾವಿಯ ಘಟಪ್ರಭಾ ಕಾಲುವೆಗೆ ಸುರಿಯಲಾಯಿತು. ಇದರಿಂದ ಗೌಳಿಗರಿಗೆ ತುಂಬಾ ನಷ್ಟವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾ.ಪಂ.ನವರು ಗೌಳಿಗರಿಗೆ ಹಾಗೂ ಹಾಲು ಉತ್ಪಾದಕರಿಗೆ ಪರಿಹಾರದ ಜೊತೆಗೆ ಹಾಲು ಕಳುಹಿಸಲು ಸಮರ್ಪಕ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಗೌಳಿಗರಾದ ಗೋಪಾಲ ಬಳಿಗಾರ, ದಾನಪ್ಪ ಮಾದರ, ಹಣಮಂತ ಮಾದರ, ಅಬ್ಟಾಸ್ ಚೌಧರಿ, ಮಹಾಲಿಂಗ ಹಂದಿಗುಂದ, ಚಿಕ್ಕಪ್ಪ ಸುಲ್ತಾನಪೂರ, ದಾವಲ್ ಕಲಾಲ, ಮಲ್ಲಪ್ಪ ಮಾದರ, ನೀಲಪ್ಪ ನಾಯಿಕ ಇದ್ದರು.
ಹಾಲು ಸಂಗ್ರಹಿಸುವ ಗೌಳಿಗರಿಗೆ ಗ್ರಾ.ಪಂ ನೊಟೀಸ್: ಗ್ರಾಮದಲ್ಲಿರುವ ಡೇರಿಗೆ ಅತಿ ಹೆಚ್ಚು ಜನರು ಸೇರುವ ಸಾಧ್ಯತೆಯಿರುವುದರಿಂದ ಹಾಲು ಸಂಗ್ರಹಿಸದಂತೆ ಗ್ರಾ.ಪಂ ಕಾರ್ಯದರ್ಶಿ ಗೌಳಿಗರಿಗೆ ನೊಟೀಸ್ ನೀಡಿದ್ದಾರೆ. ಇದು ಗೌಳಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.