ಅಂಡರ್-17 ಫುಟ್‌ಬಾಲ್ ಕೋಚ್ ಡೆನ್ನೆರ್‌ಬಿ ತವರಿಗೆ
Team Udayavani, Apr 1, 2020, 6:35 PM IST
ಹೊಸದಿಲ್ಲಿ: ಭಾರತೀಯ ವನಿತಾ ಅಂಡರ್-17 ಫುಟ್‌ಬಾಲ್ ತಂಡದ ಸ್ವೀಡನ್‌ನ ಕೋಚ್ ಥಾಮಸ್ ಡೆನ್ನರ್‌ಬಿ ಅವರು ಬುಧವಾರ ತವರಿಗೆ ತೆರಳಿದ್ದಾರೆ.
ಕೋವಿಡ್ 19 ವೈರಸ್ ನಿಯಂತ್ರಣಕ್ಕಾಗಿ ದೇಶದಲ್ಲಿ ಲಾಕ್‌ಡೌನ್ ಘೋಷಿಸಿದ ಕಾರಣ ವನಿತಾ ಆಟಗಾರ್ತಿಯರ ತರಬೇತಿ ಸ್ಥಗಿತಗೊಂಡಿದೆ. ಸ್ವೀಡನ್ ಸರಕಾರ ದೇಶದಲ್ಲಿರುವ ತನ್ನ ಪ್ರಜೆಗಳನ್ನು ತವರಿಗೆ ಕರೆಸಿಕೊಳ್ಳಲು ವಿಶೇಷ ವಿಮಾನಯಾನ ವ್ಯವಸ್ಥೆ ಮಾಡಿದ್ದು ಅದರಲ್ಲಿ ಡೆನ್ನರ್‌ಬಿ ಮತ್ತು ಫಿಟ್‌ನೆಸ್ ಕೋಚ್ ಪೆರ್ ಕಾರ್ಲ್ಸ್‌ಸನ್ ಅವರು ತವರಿಗೆ ತೆರಳಿದ್ದಾರೆ. ಹೌದು ಕೋಚ್ ಡೆನ್ನೆರ್‌ಬಿ ಬುಧವಾರ ಸ್ವೀಡನ್‌ಗೆ ತೆರಳಿದ್ದಾರೆ. ಸದ್ಯ ತರಬೇತಿಯನ್ನು ನಿಲ್ಲಿಸಲಾಗಿದೆ ಮತ್ತು ಎಲ್ಲ ಆಟಗಾರರು ತವರಿಗೆ ತೆರಳಿದ್ದಾರೆ ಎಂದು ಅಖೀಲ ಭಾರತ ಫುಟ್‌ಬಾಲ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಕುಶಲ್ ದಾಸ್ ಹೇಳಿದ್ದಾರೆ.
ಫಿಫಾ ಅಂಡರ್-17 ವನಿತಾ ವಿಶ್ವಕಪ್ ಕೂಟವು ಭಾರತದ ಐದು ತಾಣಗಳಲ್ಲಿ ನವೆಂಬರ್ 2ರಿಂದ 21ರ ವರೆಗೆ ನಡೆಯಲಿದೆ.
60ರ ಹರೆಯದ ಅನುಭವಿ ಡೆನ್ನೆರ್‌ಬಿ ಅವರನ್ನು ಕಳೆದ ವರ್ಷದ ನವೆಂಬರ್‌ನಲ್ಲಿ ಭಾರತೀಯ ವನಿತಾ ಅಂಡರ್-17 ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿತ್ತು. 2011ರಲ್ಲಿ ಜರ್ಮನಿಯಲ್ಲಿ ನಡೆದ ಪಿಫಾ ವನಿತಾ ವಿಶ್ವಕಪ್‌ನಲ್ಲಿ ಸ್ವೀಡಿಷ್ ತಂಡ ಮೂರನೇ ಸ್ಥಾನ ಮತ್ತು 2012ರ ಲಂಡನ್ ಒಲಿಂಪಿಕ್ಸ್‌ನನಲ್ಲಿ ಕ್ವಾರ್ಟರ್‌ಫೈನಲ್ ತಲುಪುವಲ್ಲಿ ಡೆನ್ನೆರ್‌ಬಿ ಪ್ರಮುಖ ಪಾತ್ರ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bomb Threat: ಹೋಟೆಲ್, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bomb Threat: ಹೋಟೆಲ್, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.