ಏಶ್ಯನ್ ಯೂತ್ ಗೇಮ್ಸ್‌ಗೆ ಚೀನ ಆತಿಥ್ಯ
Team Udayavani, Apr 2, 2020, 9:19 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್ 19 ವೈರಸ್ ನ ಮೂಲ ಕೇಂದ್ರವಾದ ಚೀನದ ಶಂಟೋ ನಗರದಲ್ಲಿ ಮುಂದಿನ ವರ್ಷದ ನವೆಂಬರ್‌ನಲ್ಲಿ ಮೂರನೇ ಆವೃತ್ತಿಯ ಏಶ್ಯನ್ ಯೂತ್ ಗೇಮ್ಸ್ ನಡೆಯಲಿದೆ ಎಂದು ಒಲಿಂಪಿಕ್ ಕೌನ್ಸಿಲ್ ಆಫ್ ಏಶ್ಯ (ಒಸಿಎ) ತಿಳಿಸಿದೆ.
ಚೀನದ ವುಹಾನ್ ಕೊರೊನಾ ವೈರಸ್‌ನ ಕೇಂದ್ರಸ್ಥಾನವಾಗಿತ್ತು. ಇಲ್ಲಿ ಆರಂಭವಾದ ಈ ಮಹಾಮಾರಿ ವಿಶ್ವವನ್ನೇ ದಂಗುಬಡಿಸಿದೆ. ವೆಸ್ಟರ್ನ್ ಯುರೋಪ್ ಮತ್ತು ಅಮೆರಿಕದಲ್ಲಿ ಈ ವೈರಸ್ ವಿಪರೀತ ಹಾನಿ ಮಾಡಿದೆ. ಈ ಕಾರಣದಿಂದಾಗಿ ಟೋಕಿಯೊ ಒಲಿಂಪಿಕ್ಸ್ ಕೂಟ ಮುಂದೂಡಲ್ಪಟ್ಟಿತ್ತು.
ಏಶ್ಯನ್ ಯೂತ್ ಗೇಮ್ಸ್ ಕೂಟವನ್ನು ನ. 20ರಿಂದ 28ರ ವರೆಗೆ ನಡೆಸಲು ಒಸಿಎ ನಿರ್ಧರಿಸಿದೆ. ಆತಿಥ್ಯ ನಗರವನ್ನು 2019ರಲ್ಲಿ ನಡೆದ ಒಸಿಎ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಬಹು ಕ್ರೀಡಾಸ್ಪರ್ಧೆಗಳ ದಿನಾಂಕವನ್ನು ಬುಧವಾರ ಪ್ರಕಟಿಸಲಾಗಿದೆ. ಏಶ್ಯನ್ ಯೂತ್ ಗೇಮ್ಸ್‌ನಲ್ಲಿ 18 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಶಂಟೋ ನಗರದ ಸಂಘಟನಾ ಸಮಿತಿ ಜತೆ ನಡೆಸಿದ ಚರ್ಚೆಯ ಬಳಿಕ ದಿನಾಂಕವನ್ನು ನಿರ್ಧರಿಸಲಾಯಿತು ಎಂದು ಒಸಿಎ ಪ್ರಧಾನ ನಿರ್ದೇಶಕ ಹುಸೈನ್ ಆಲ್ ಮುಸಲ್ಲಾಮ್ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.