ಊರಿಗೆ ಬಂದವಳು ನೀರಿಗೆ ಬರಲ್ವಾ?
Team Udayavani, Apr 2, 2020, 10:48 AM IST
ಸದ್ಯ ಕೋವಿಡ್ 19 ಭೀತಿಯಿಂದ ಚಿತ್ರರಂಗದ ಚಟುವಟಿಕೆಗಳೆಲ್ಲ ಬಂದ್ ಆಗಿದೆ. ಚಿತ್ರರಂಗದ ಚಟುವಟಿಕೆಗಳು ಸ್ಥಗಿತಗೊಂಡಿರುವುದರಿಂದ ಬಹುತೇಕ ಕಲಾವಿದರು, ತಂತ್ರಜ್ಞರು ಮನೆಯಲ್ಲಿ ಫ್ಯಾಮಿಲಿ ಜೊತೆಗೆ ಗೃಹಬಂಧಿಯಾಗಿದ್ದಾರೆ.
ಇನ್ನು ನಟಿ ಶುಭಾಪೂಂಜಾ ಕೂಡ ಸದ್ಯ ಕೋವಿಡ್ 19 ಬ್ರೇಕ್ ನಿಂದಾಗಿ ತಮ್ಮ ಊರಿನ ಕಡೆಗೆ ಮುಖ ಮಾಡಿದ್ದಾರೆ. ಸದ್ಯ ಮನೆಯಲ್ಲಿ ತಮ್ಮ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿರುವ ಶುಭಾ, ಮನೆ ಕೆಲಸ ಸೇರಿದಂತೆ ಒಂದಷ್ಟು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತೋಟದ ಕೆಲಸ, ಬಾವಿಯಿಂದ ನೀರು ತರೋದು.. ಹೀಗೆ ದಿನನಿತ್ಯದ ಕೆಲಸಗಳಲ್ಲಿ ಶುಭಾ ಬಿಝಿ.
ಕೋವಿಡ್ 19 ಬ್ರೇಕ್ ನಲ್ಲಿ ತಾವು ಮಾಡುತ್ತಿರುವ ಕೆಲಸಗಳ ಪೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಶುಭಾ ಪೂಂಜಾ ಶೇರ್ ಮಾಡಿರುವ ಪೋಟೋಗಳಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಬಿಗ್ ರೆಸ್ಪಾನ್ಸ್ ಸಿಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಶುಭಾ ಪೂಂಜಾ ನಾಯಕಿಯಾಗಿ ಅಭಿನಯಿಸಿದ್ದ ನರಗುಂದ ಬಂಡಾಯ ಚಿತ್ರ ತೆರೆಗೆ ಬಂದಿತ್ತು. ಆರಂಭದಲ್ಲಿ ಒಳ್ಳೆಯ ಓಪನಿಂಗ್ ಪಡೆದುಕೊಂಡಿದ್ದ ಚಿತ್ರ ತೆರೆಕಂಡ ಒಂದೇ ವಾರದೊಳಗೆ ಕೋವಿಡ್ 19 ಎಫೆಕ್ಟ್ ನಿಂದಾಗಿ ಚಿತ್ರಪ್ರದರ್ಶನವನ್ನು ಸ್ಥಗಿತಗೊಳಿಸಬೇಕಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11 ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ 5 ಕೋಟಿ ಲಂಚ, ರೋಲ್ ಕಾಲ್ ಲಾಯರ್..
Komal Kumar: ತೆರೆಗೆ ಬರಲು ಸಿದ್ದವಾಯ್ತು ʼಯಲಾ ಕುನ್ನಿʼ
Seetha Payana: ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ʼಸೀತಾ ಪಯಣʼ; ನಿರಂಜನ್ ಹೀರೋ
Chethan Kumar: ನಟ ಚೇತನ್ ವಿರುದ್ಧದ ವಾರಂಟ್ ಹಿಂಪಡೆದ ಕೋರ್ಟ್
Actor Darshan: ಅ.22ಕ್ಕೆ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.