ಲಾಕ್‌ಡೌನ್ : ಮುಂಬಯಿಯಿಂದ ಚಿಂಚೋಳಿಗೆ 600 ಕೀ.ಮಿ ಕಾಲ್ನಡಿಗೆಯಲ್ಲಿ ಹೊರಟ ದಿಟ್ಟೆ..
Team Udayavani, Apr 2, 2020, 1:00 PM IST
ಮುಂಬಯಿ : ಈಕೆಯ ಹೆಸರು ರುಕ್ಮಿಣಿ ಬಾಯಿ. ಗುಲ್ಬರ್ಗ ಬಳಿಯ ಚಿಂಚೋಳಿಯವಳು. ಮುಂಬಯಿಯಲ್ಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದಳು. ಕೋವಿಡ್ 19 ಪರಿಣಾಮದಿಂದ ಇಡೀ ದೇಶವೇ ಲಾಕ್‌ಡೌನ್ ಆಗಿದೆ.
ಮುಂಬಯಿಯಿಂದ ತನ್ನೂರು ಚಿಂಚೋಳಿಗೆ ಹೋಗಲು ಬಸ್ಸು, ರೈಲುಗಳಿಲ್ಲ. ಎಷ್ಟು ದಿನವೆಂದು ಮುಂಬಯಿಯಲ್ಲಿ ಊಟಕ್ಕೂ ಕಷ್ಟಪಟ್ಟುಕೊಂಡು ಇರಬೇಕು. ಅದಕ್ಕೇ ಹೊರಟಿದ್ದಾಳೆ ಚಿಂಚೋಳಿಗೆ. ಸಾರ್ವಜನಿಕ ಸಾರಿಗೆ, ಖಾಸಗಿ ವಾಹನಗಳಿಲ್ಲದೇ ಈಕೆ ತನ್ನ ಮಕ್ಕಳೊಂದಿಗೆ 600 ಕಿ.ಮೀ ಅನ್ನು ಕಾಲ್ನಡಿಗೆಯಲ್ಲಿ ನಡೆದು ಊರನ್ನು ತಲುಪಬೇಕು.
ಮುಂಬಯಿ ಟು ಚಿಂಚೋಳಿ ಮುಖದಲ್ಲಿ ಸದಾ ನಗುವನ್ನೇ ತುಂಬಿಕೊಂಡಿರುವ ರುಕ್ಮಿಣಿ, ನಾಲ್ಕು ದಿನಗಳಹಿಂದೆ ಮುಂಬಯಿಂದ ಹೊರಟಿದ್ದಾಳೆ. 600 ಕಿ.ಮೀ ನಡೆದರೆ ಅವಳ ಊರು ತಲುಪುತ್ತದೆ. ಮೂರು ದಿನಗಳಲ್ಲಿ ಒಂದು ದಿನ ರಾತ್ರಿ ನಿದ್ದೆಯನ್ನೂ ಮಾಡಿಲ್ಲ. ಇವಳೊಂದಿಗೆ ಇಬ್ಬರು ಮಕ್ಕಳೂ ಸಾಥ್ ನೀಡುತ್ತಿದ್ದಾರೆ.
ಟ್ವಿಟರ್‌ನಲ್ಲಿ ಪೋಟೋ ವೈರಲ್ : ಇನ್ನೂ ತಬಸ್ಸುಮ್ ಎಂಬವರು ತಮ್ಮ ಟ್ವಿಟರ್ ಖಾತೆಯ ವಾಲ್‌ನಲ್ಲಿ ರುಕ್ಮಿಣಿ ಬಾಯಿಯ ಬಗ್ಗೆ ಬರೆದುಕೊಂಡಿದ್ದು, ಆಕೆ ನಡೆದು ಹೋಗುತ್ತಿರುವ ಪೋಟೋವನ್ನು ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್‌ಗೆ ಸಾಕಷ್ಟು ಜನರು ಸ್ಪಂದಿಸಿದ್ದಾರೆ. ಜನರು ಆಕೆಯ ಧೈರ್ಯ ಮತ್ತು ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೆಲವರು ನಮ್ಮ ದೇಶದ ಬಡಜನರ ಪರಿಸ್ಥಿತಿ ಇದು ಎಂದು ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಅಂತರ ನಿಯಮವನ್ನು ಆಕೆ ಚಾಚೂ ತಪ್ಪದೇ ಪಾಲಿಸುತ್ತಿದ್ದಾಳೆ ಎಂದೂ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.