ಊಟ ನಮ್ದು ಅಷ್ಟೇ.. ಎಣ್ಣೆ ಇಲ್ಲ..! ಸಿ.ಎಂ. ಪತ್ರಿಕಾಗೋಷ್ಟಿಯಲ್ಲೊಂದು ರಸ ನಿಮಿಷ
Team Udayavani, Apr 2, 2020, 4:19 PM IST
ವಿಧಾನ ಸೌಧದದಲ್ಲಿ ಬುಧವಾರ ನಡೆದಿದ್ದ ಮುಖ್ಯಮಂತ್ರಿಗಳ ಸಭೆಯ ಮುಕ್ತಾಯದಲ್ಲಿ ಪತ್ರಕರ್ತರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಮದ್ಯದಂಗಡಿ ತೆರೆಯುವ ಕುರಿತಾಗಿ ಪ್ರಶ್ನಿಸಿದರು. ಪತ್ರಕರ್ತರ ಪ್ರಶ್ನೆ ಬಿ.ಎಸ್.ವೈ. ಅವರಿಗೆ ಅರ್ಥವಾಗದೇ ಇದ್ದಾಗ ಅವರ ಪಕ್ಕದಲ್ಲಿ ಇದ್ದ ಆರ್. ಆಶೋಕ್ ಅವರು ಮುಖ್ಯಮಂತ್ರಿಗಳಿಗೆ ಕೈ ಸನ್ನೆ ಮೂಲಕ ‘ಎಣ್ಣೆ.. ಎಣ್ಣೆ..’ ಎಂದು ತೋರಿಸಿದ್ದಾರೆ. ಇದಕ್ಕೆ ನಗುತ್ತಾ ಪ್ರತಿಕ್ರಿಯಿಸಿದ ಬಿ.ಎಸ್.ವೈ. ಅವರು ‘ಎಣ್ಣೆ ಬೇಕು ಅನ್ನುವವರು ಎಪ್ರಿಲ್ 14ರವರೆಗೆ ಕಾಯಬೇಕು…’ ಎಂದು ಹೇಳಿ ನಗುತ್ತಾ ಅಲ್ಲಿಂದ ನಿರ್ಗಮಿಸಿದ್ದಾರೆ.