ಆರೋಗ್ಯ ಯೋಧರು: ಈ ಶ್ವಾನ ಕೋವಿಡ್ 19 ಹೀರೋ
Team Udayavani, Apr 2, 2020, 5:38 PM IST
ಕೋವಿಡ್ 19 ವ್ಯಾಪಿಸಿರುವಂಥ ಈ ಸಂಕಷ್ಟದ ಸನ್ನಿವೇಶದಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು, ಸೋಂಕಿತರನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿರುವ ವೈದ್ಯರಿಗೆ ವಿಶ್ವಾದ್ಯಂತ ಶ್ಲಾಘನೆಗಳ ಸುರಿಮಳೆಯೇ ವ್ಯಕ್ತವಾಗಿದೆ. ಅವರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋಗಿ, ಕುಟುಂಬ ಸದಸ್ಯರನ್ನು ಭೇಟಿಯಾಗದೇ ಎಷ್ಟು ದಿನಗಳಾದವೋ? ಈ ಆರೋಗ್ಯ ಸಿಬಂದಿಯ ಮಾನಸಿಕ ಸ್ಥಿತಿಯನ್ನು ಮನಗಂಡು ಅಮೆರಿಕದ ಡೆನ್ವೆì ನ ಆಸ್ಪತ್ರೆಯೊಂದರ ವೈದ್ಯರೊಬ್ಬರು ತಮ್ಮ ನಾಯಿಯನ್ನೂ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಬಳಸಿಕೊಂಡಿದ್ದಾರೆ.
ಅಂದರೆ, ಆ ನಾಯಿಯನ್ನು ಅವರು ಆಸ್ಪತ್ರೆಗೆ ಕರೆತರುತ್ತಿದ್ದಾರೆ. ಅಷ್ಟೇ ಅಲ್ಲ, ಆಸ್ಪತ್ರೆಯಲ್ಲಿ ಅದಕ್ಕೊಂದು ವಿಶೇಷ ಕೊಠಡಿಯನ್ನೂ ನೀಡಲಾಗಿದೆ. ಸತತ ಶ್ರಮದಿಂದ ದಣಿದ ವೈದ್ಯರು, ನರ್ಸ್ ಗಳು ಹಾಗೂ ಇತರೆ ಸಿಬಂದಿ ತುಂಬಾ ಸುಸ್ತಾದಾಗ ಆ ಕೊಠಡಿಗೆ ತೆರಳುತ್ತಾರೆ. ವಿನ್ ಎಂಬ ಹೆಸರಿನ ಆ ನಾಯಿಯು ಇವರೊಂದಿಗೆ ಆಟವಾಡುತ್ತಾ ಅವರನ್ನು ಉಲ್ಲಸಿತರನ್ನಾಗಿಸುತ್ತಿದೆ.
ಇದೊಂದು ಥೆರಪಿ ಶ್ವಾನವಾಗಿದ್ದು, ಇದರೊಂದಿಗೆ ಸ್ವಲ್ಪ ಹೊತ್ತು ಕಳೆದರೆ, ಶಾರೀರಿಕವಾಗಿಯೂ ಮಾನಸಿಕವಾಗಿಯೂ ಉಲ್ಲಾಸ ಸಿಗುತ್ತದೆ. ವೈದ್ಯರು ರೋಗಿಗಳ ಸೇವೆಯಲ್ಲಿ ತೊಡಗಿದ್ದರೆ, ಈ ಶ್ವಾನವು ವೈದ್ಯರ ಸೇವೆಯಲ್ಲಿ ತೊಡಗುವ ಮೂಲಕ, ಇದು ಕೂಡ ಹೀರೋ ಎನಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.