ಹೊಂ ಕ್ವಾರಂಟೈನ್‌ ಕುಟುಂಬಕ್ಕೆ ರೇಷನ್‌ ದೇಣಿಗೆ


Team Udayavani, Apr 2, 2020, 6:00 PM IST

ballry-tdy-1

ಬಳ್ಳಾರಿ: ಕೋವಿಡ್ 19 ವೈರಸ್‌ ಭೀತಿಯಿಂದಾಗಿ ತಮ್ಮ ತಮ್ಮ ಊರುಗಳಿಗೆ ವಾಪಸ್ಸಾಗುತ್ತಿರುವ ಕೂಲಿ ಕಾರ್ಮಿಕರಿಗೆ ಹಲವು ಸಂಘ ಸಂಸ್ಥೆ, ಸಮಾಜ ಸೇವಕರಿಂದ ರಸ್ತೆಯುದ್ದಕ್ಕೂ ಊಟದ ವ್ಯವಸ್ಥೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಆದರೆ ಗೃಹ ಬಂಧನದಲ್ಲಿರುವ ವೈರಸ್‌ ಶಂಕಿತ ಕುಟುಂಬಕ್ಕೆ ನೆರೆಹೊರೆಯವರು ದೇಣಿಗೆ ಸಂಗ್ರಹಿಸಿ ತಿಂಗಳ ದವಸ ಧಾನ್ಯಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಜತೆಗೆ ಹೊರಬರದಂತೆ ಜಾಗೃತಿಯನ್ನೂ ಮೂಡಿಸಿದ್ದಾರೆ.

ಕೋವಿಡ್ 19  ವೈರಸ್‌ ಭೀತಿ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ವೈರಸ್‌ ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ ಡೌನ್‌ ವಿಧಿಸಿರುವ ಹಿನ್ನೆಲೆಯಲ್ಲಿ ಎಲ್ಲವೂ ಬಂದ್‌ ಆಗಿದೆ. ದೂರದೂರುಗಳಿಂದ ದುಡಿಯಲೆಂದು ಬೃಹತ್‌ ನಗರಗಳಿಗೆ ವಲಸೆ ಬಂದಿದ್ದ ಕೂಲಿ ಕಾರ್ಮಿಕರೆಲ್ಲರೂ ವೈರಸ್‌ ಭೀತಿಯಿಂದಾಗಿ ತಮ್ಮ ತಮ್ಮ ಊರುಗಳಿಗೆ ವಾಪಸ್‌ ಆಗುತ್ತಿದ್ದಾರೆ. ಹೀಗೆ ಬೆಂಗಳೂರಿಗೆ ದುಡಿಯಲೆಂದು ಕುಟುಂಬ ಸಮೇತ ರಾಜ್ಯದ ರಾಜಧಾನಿ ಬೆಂಗಳೂರಿಗೆ ಹೋಗಿದ್ದ ಬಳ್ಳಾರಿ ನಗರದ 7ನೇ ವಾರ್ಡ್‌ನಲ್ಲಿರುವ ಗಾರೆ ಕೆಲಸದ ಕುಟುಂಬ ಸಹ ಕಳೆದ ಎರಡ್ಮೂರು ದಿನಗಳ ಹಿಂದೆ ಬಳ್ಳಾರಿಗೆ ಆಗಮಿಸಿದೆ. ಬೆಂಗಳೂರಿನಲ್ಲಿ ಕೋವಿಡ್ 19  ವೈರಸ್‌ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಕುಟುಂಬಕ್ಕೂ ಬಳ್ಳಾರಿಯಲ್ಲಿ ವೈದ್ಯರು ತಪಾಸಣೆ ವೇಳೆ ಸ್ಕ್ರೀನಿಂಗ್‌ ಮಾಡಿದ್ದು, 14 ದಿನಗಳ ಕಾಲ ಗೃಹಬಂಧನ (ಹೋಮ್‌ ಕ್ವಾರಂಟೈನ್) ದಲ್ಲಿರುವಂತೆ ಸೂಚಿಸಿದ್ದು, ಅದರಂತೆ ಮನೆಯಲ್ಲಿ ಇರಿಸಿರುವುದು ನೆರೆಹೊರೆಯ ಜನರನ್ನು ಆತಂಕಕ್ಕೀಡು ಮಾಡಿದೆ.

ನಗರದ 6 ಮತ್ತು 7ನೇ ವಾರ್ಡ್‌ಗಳು ಸಂಪೂರ್ಣ ಕೂಲಿ ಕಾರ್ಮಿಕರಿಂದ ಕೂಡಿರುವ ಸ್ಲಂ ಪ್ರದೇಶಗಳಾಗಿವೆ. ಹೆಚ್ಚಿನ ಪ್ರಮಾಣದಲ್ಲಿ ವೃದ್ಧರು, ಮಕ್ಕಳು ಇದ್ದು, ಶಾಲೆಗಳು, ಟ್ಯೂಷನ್‌ ಗಳು ರಜೆಯಲ್ಲಿರುವ ಕಾರಣ ಮಕ್ಕಳು, ಯುವಕರು ರಸ್ತೆಗಳಲ್ಲೇ ಆಟವಾಡುತ್ತಾ ಇರುತ್ತಾರೆ. ಇಂಥ ಪ್ರದೇಶಗಳಲ್ಲಿ ಸೋಂಕು ಹರಡಿದರೆ ಅದರ ಪರಿಣಾಮ ಊಹಿಸಲೂ ಅಸಾಧ್ಯವಾಗಲಿದೆ.

ಮೇಲಾಗಿ ಕೇಂದ್ರ ಸರ್ಕಾರದ ಲಾಕ್‌ಡೌನ್‌ ಆದೇಶದಿಂದ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳಿಂದ ವಾರ್ಡ್‌ಗಳಲ್ಲೂ ಸಾಧ್ಯವಾದಷ್ಟು ಮಕ್ಕಳು, ಯುವಕರು, ವೃದ್ಧರು ಮನೆಯಿಂದ ಹೊರಗೆ ಬರುವುದನ್ನು ತಡೆಹಿಡಿಯಲಾಗಿದೆ. ಆದರೂ, ಬೆಳಗ್ಗೆ ಮತ್ತು ಸಂಜೆ ಹೊತ್ತಲ್ಲಿ ಬೀದಿಗಳ ರಸ್ತೆಬದಿಯಲ್ಲಿ ನಿಲ್ಲುವುದು, ಮಕ್ಕಳು ಆಟವಾಡುವುದು ಸಾಮಾನ್ಯ. ಹಾಗಾಗಿ ಇಂಥಹ ಸಂದರ್ಭದಲ್ಲಿ ಗೃಹಬಂಧನದಲ್ಲಿರುವ ಶಂಕಿತ ಸೋಂಕಿತರು ಸಂಚರಿಸಿದಲ್ಲಿ ಇತರರಿಗೆ ಹರಡುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ ಗೃಹ ಬಂಧನದಲ್ಲಿರುವವರಿಗೆ ತಿಂಗಳ ರೇಷನ್‌ ನೀಡುವ ಮೂಲಕ ಮನೆಯಿಂದ ಹೊರಗಡೆ ಬಾರದಂತೆ ಮನವಿ ಮಾಡಲಾಗಿದೆ. ಜತೆಗೆ ವಾರ್ಡ್‌ಗಳಲ್ಲೂ ಕೆಲವೊಂದು ರಸ್ತೆಗಳನ್ನು ಸಹ ಬಂದ್‌ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.

ಕಡುಬಡವರಾದ ಶಂಕಿತ ಕುಟುಂಬದ ವ್ಯಕ್ತಿಗಳು, ಅನ್ಯಕಾರ್ಯನಿಮಿತ್ತ ಪದೇ ಪದೆ ಹೊರಗಡೆ ಸಂಚರಿಸುವ ಸಾಧ್ಯತೆಯಿರುವುದರಿಂದ ಇತರರಿಗೂ ಸೋಂಕು ಆವರಿಸಲಿದೆ ಎಂದು ಭಯಭೀತರಾದ ನೆರೆಹೊರೆಯ ಜನರು ಪ್ರತಿಯೊಬ್ಬರಿಂದ ಸುಮಾರು 2 ಸಾವಿರ ರೂಗಳಷ್ಟು ದೇಣಿಗೆ ಸಂಗ್ರಹಿಸಿದ್ದಾರೆ. ಮೂವರು ಸದಸ್ಯರುಳ್ಳ ಈ ಕುಟುಂಬಕ್ಕೆ ಒಂದು ತಿಂಗಳಿಗೆ ಆಗುವಷ್ಟು 25 ಕೆಜಿ ಅಕ್ಕಿ, 3 ಲೀಟರ್‌ ಎಣ್ಣೆ, 2 ಉಪ್ಪಿನ ಪ್ಯಾಕೇಟ್‌, ತಲೆಗೆ ಹಚ್ಚಿಕೊಳ್ಳಲು ಕೊಬ್ಬರಿ ಎಣ್ಣೆ, ಬೆಳಗ್ಗೆ ಹಲ್ಲುಜ್ಜಲು ಟೂತ್‌ಪೇಸ್‌ ಸೇರಿದಂತೆ ಇನ್ನಿತರೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಜತೆಗೆ ದಯಮಾಡಿ ವೈದ್ಯರು ಸೂಚಿಸಿರುವ ನಿಗದಿತ 14 ದಿನಗಳ ಕಾಲ ಹೊರಗಡೆ ಬಾರದಂತೆ ಮನೆಯಲ್ಲೇ ಇರುವಂತೆಯೂ ಕೋರಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ದೇಣಿಗೆ ನೀಡಿದ ಮುಖಂಡರು ಉದಯವಾಣಿಗೆ ತಿಳಿಸಿದ್ದಾರೆ.

 

-ವೆಂಕೋಬಿ ಸಂಗನಕಲ್ಲು

ಟಾಪ್ ನ್ಯೂಸ್

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

Ballari-BYV

Waqf Notice: ಸಿಎಂ ಪಿತೂರಿ, ಸಚಿವ ಜಮೀರ್‌ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ

Ramulu

By Election: ಮಾತಿನ ಭರದಲ್ಲಿ ವಿಜಯೇಂದ್ರಗೂ ಪಾಲು ಎಂದ ಶ್ರೀರಾಮುಲು!

Vijayendra (2)

Modi,BSY ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆ ಇರಲಿ: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ

Kotturu: ಹಸಿರು ಪಟಾಕಿ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ಮಾಮೂಲಿ ಪಟಾಕಿ ಮಾರಾಟ…

Kotturu: ಹಸಿರು ಪಟಾಕಿ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ಮಾಮೂಲಿ ಪಟಾಕಿ ಮಾರಾಟ…

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.