ಬಾಗಲಕೋಟೆ: ಅಂಗಡಿಯಲ್ಲಿದ್ದ ವೃದ್ದನಿಗೆ ಸೋಂಕು ಹೇಗೆ ತಗುಲಿತು ಎನ್ನುವುದೇ ದೊಡ್ಡ ಸವಾಲು
Team Udayavani, Apr 3, 2020, 12:16 PM IST
ಬಾಗಲಕೋಟೆ : ನಗರದಲ್ಲಿ ವೃದ್ದನಿಗೆ ಕೋವಿಡ್-19 ವೈರಸ್ ಸೋಂಕು ಪತ್ತೆ ಹಿನ್ನೆಲೆ ಸೋಂಕಿತನ ಸಂಪರ್ಕದಲ್ಲಿ ಇದ್ದ 10 ಜನರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಐಸೋಲೇಶನ್ ನಲ್ಲಿಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹೇಳಿದರು.
ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಎಸ್ಪಿ ಲೋಕೇಶ್ ಜಗಲಾಸರ್, ಡಿಎಚ್ ಒ ಡಾ.ಅನಂತ ದೇಸಾಯಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಸೋಂಕಿತ ವ್ಯಕ್ತಿಯ ಅಂಗಡಿ, ಮನೆ ವ್ಯಾಪ್ತಿಯನ್ನು ಸಂಪೂರ್ಣವಾಗಿ ಕ್ವಾರಂಟೈನ್ ಪ್ರದೇಶವಾಗಿ ಘೋಷಿಸಿದ್ದು, ಸೋಂಕು ನಾಶಕ ಸಿಂಪಡಣೆ ಮಾಡಲಾಗಿದೆ. ಪ್ರದೇಶ ಸಂಪೂರ್ಣವಾಗಿ ಕ್ಯಾರಂಟೈನ್ ಮಾಡಲಾಗಿದ್ದು, ನಿಯಮ ಮೀರಿ ಯಾರೂ ಒಳಗೆ, ಹೊರಗೆ ಬರುವ ಪ್ರಯತ್ನ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಆ ಪ್ರದೇಶದ ಜನರಿಗೆ ನೀರು, ದಿನಸಿ ಅಗತ್ಯ ಸೌಲಭ್ಯ ಪೂರೈಕೆ ಜಿಲ್ಲಾಡಳಿತ ಮಾಡುತ್ತದೆ. ಹಳೇ ಬಾಗಲಕೋಟೆ ಏರಿಯಾದಲ್ಲಿ ಯಾವುದೆ ಅಂಗಡಿ ತೆರೆಯಲು ಅವಕಾಶ ಇಲ್ಲ. ಎಲ್ಲವೂ ಹೋಮ್ ಡಿಲೆವರಿ ಇರುತ್ತೆ. ಯಾರೂ ಹೊರ ಬರುವಂತಿಲ್ಲ ಎಂದರು.
ಸೋಂಕಿತ ವ್ಯಕ್ತಿಗೆ ಸಂಬಂಧಿಸಿ ಎರಡು ಅಂಗಡಿ ಇದೆ. ಅಂಗಡಿಗೆ ಹೋಗಿದ್ದವರು ಸ್ವಯಂ ಆಗಿ ಮುಂದೆ ಬಂದು ಆಸ್ಪತ್ರೆಗೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು.
ವೃದ್ದನಿಗೆ ಸೊಂಕು ಹೊರಗಿನಿಂದ ಬಂದ ವ್ಯಕ್ತಿಯಿಂದ ಬಂದಿರುವ ಅನುಮಾನವಿದೆ. ಆತ ಅಂಗಡಿ ಮತ್ತು ಮನೆ ಬಿಟ್ಟು ಎಲ್ಲೂ ಹೋಗಿರಲಿಲ್ಲ. ಆತನ ಮಗ ಮತ್ತು ಮಗಳು ಹತ್ತು ದಿನಗಳ ಹಿಂದೆ ಬೆಂಗಳೂರಿನಿಂದ ಬಂದಿದ್ದು, ಅವರ ರಕ್ತ ಮತ್ತು ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳಿಸಲಾಗಿದೆ. ಯಾರಿಂದ ಸೋಂಕು ಬಂತು ಎನ್ನುವ ತನಿಖೆ ನಡೆದಿದೆ ಎಂದರು.
ಅಂಗಡಿಗೆ ಕಳೆದ ಹತ್ತು ಹದಿನೈದು ದಿನಗಳಲ್ಲಿ ಯಾರು ಯಾರು ಬಂದಿದ್ದರು ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತದೆ. ಜಿಲ್ಲಾ ಆಸ್ಪತ್ರೆಗೆ ಬರುವ ಮುನ್ನ ಖಾಸಗಿ ಆಸ್ಪತ್ರೆಗೆ ಹೋಗಿದ್ದ. ಅಲ್ಲಿನ ಆಸ್ಪತ್ರೆ, ವೈದ್ಯರು, ಅಲ್ಲಿನ ಸಿಬ್ಬಂದಿ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಎಂದರು.
ಒಂದು ವೇಳ ಸೊಂಕಿತನ ಮಗ ಹಾಗೂ ಮಗಳಿಗೆ ಸೊಂಕು ಪತ್ತೆಯಾಗದಿದ್ರೆ ಅದು ಭಾರಿ ಆತಂಕಕ್ಕೆ ಕಾರಣವಾಗಲಿದೆ. ಆಗ ಸೊಂಕಿತನ ಅಂಗಡಿಗೆ ಬಂದವರ ಪ್ರತಿಯೊಬ್ಬರ ಪತ್ತೆ ಮಾಡಬೇಕಾಗುತ್ತದೆ. ಎಲ್ಲರನ್ನೂ ಬಿಡದೆ ತಪಾಸಣೆ ಮಾಡುತ್ತೇವೆ. ಆತನ ಅಂಗಡಿಗೆ ಹೋದವರು ಖುದ್ದಾಗಿ ಬಂದು ಸಹಕರಿಸಬೇಕು ಜಿಲ್ಲಾಡಳಿತ ಮನವಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.