ಕನ್ನಡದಲ್ಲೂ ತೆರೆಕಾಣಲಿದೆ ಆರ್‌ಆರ್‌ಆರ್
Team Udayavani, Apr 3, 2020, 4:50 PM IST
ಕನ್ನಡದಲ್ಲಿ ಈಗ ಡಬ್ಬಿಂಗ್ ಸಿನಿಮಾಗಳು ಸದ್ದು ಮಾಡಲಾರಂಭಿಸಿರೋದು ನಿಮಗೆ ಗೊತ್ತೇ ಇದೆ. ಈಗಾಗಲೇ ತೆಲುಗು, ತುಳು, ಹಿಂದಿ ಚಿತ್ರಗಳು ಕನ್ನಡಕ್ಕೆ ಡಬ್ ಆಗಿವೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ ಆರ್ ಆರ್‌ಆರ್. ಬಾಹುಬಲಿ ಚಿತ್ರದ ದೊಡ್ಡ ಯಶಸ್ಸಿನ ನಂತರ ರಾಜ್ ಮೌಳಿ ನಿರ್ದೇಶಿಸುತ್ತಿರುವ ಚಿತ್ರ ಇದಾಗಿದ್ದು, ಈಗಾಗಲೇ ದೊಡ್ಡ ನಿರೀಕ್ಷೆ ಹುಟ್ಟಸಿದೆ. ಈಗ ಈ ಚಿತ್ರ ಕನ್ನಡದಲ್ಲೂ ಡಬ್ ಆಗಿ ಬಿಡುಗಡೆಯಾಗಲಿದೆಯಂತೆ.
ಹೀಗೊಂದು ಸುದ್ದಿ ಯುಗಾದಿ ಸಂದರ್ಭದಲ್ಲಿ ಹೊರಬಂದಿದೆ. ಕಳೆದ ಬಾರಿ ಬಾಹುಬಲಿ ಚಿತ್ರ ಕನ್ನಡದಲ್ಲಿ ಡಬ್ ಆಗುತ್ತದೆ ಎಂದು ಹೇಳಲಾಗಿತ್ತಾದರೂ ಅದು ನೇರವಾಗಿ ಬಿಡುಗಡೆಯಾಗಿತ್ತು. ಆದರೆ ಈ ಬಾರಿ ಆರ್‌ಆರ್‌ಆರ್ ಚಿತ್ರ ಬರೋಬ್ಬರಿ 10 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಅದರಲ್ಲಿ ಕನ್ನಡವೂ ಸೇರಿದೆಯಂತೆ. ಈ ಮೂಲಕ ಬಿಗ್ ಬಜೆಟ್‌ನ ಚಿತ್ರವೊಂದು ಕನ್ನಡಕ್ಕೆ ಡಬ್ ಆಗುತ್ತಿದೆ. ಇತ್ತೀಚೆಗೆ ಚಿತ್ರದ ಮೋಶನ್ ಪೋಸ್ಟರ್ ಕನ್ನಡದಲ್ಲೂ ಬಿಡುಗಡೆಯಾಗಿ.ಮೆಚ್ಚುಗೆ ಗಳಿಸಿತ್ತು. ಇದಕ್ಕೆ ನಿರ್ದೇಶಕ ರಾಜ್‌ಮೌಳಿ ಕನ್ನಡಿಗರಿಗೆ ಕನ್ನಡದಲ್ಲೇ ಧನ್ಯವಾದ ಹೇಳಿದ್ದಾರೆ. ನಿಮ್ಮ ಉತ್ತಮ ಪ್ರತಿಕ್ರಿಯೆಗೆ ತುಂಬು ಹೃದಯದ ಧನ್ಯವಾದಗಳು ಎಂದಿದ್ದಾರೆ.
ಈ ಚಿತ್ರದಲ್ಲಿ ತೆಲುಗಿನ ಸ್ಟಾರ್ ನಟರಾದ ರಾಮ್ ಚರಣ್ ತೇಜಾ ಹಾಗೂ ಜ್ಯೂನಿಯರ್ ಎನ್‌ಟಿಆರ್ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟ ಅಜೇಯ್ ದೇವಗನ್ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಚಿತ್ರದ ಕಥೆ ಸೇರಿದಂತೆ ಯಾವ ಅಂಶವನ್ನೂ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಇನ್ನು ಕನ್ನಡದಲ್ಲಿ ಈಗಾಗಲೇ ಮೆಗಾಸ್ಟರ್ ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ, ಸಲ್ಮಾನ್ ಖಾನ್ ಅವರ ದಬಾಂಗ್ 3 ಸೇರಿದಂತೆ ಸಾಕಷ್ಟು ಸ್ಟಾರ್ ನಟರ ಚಿತ್ರಗಳು ಕನ್ನಡಕ್ಕೆ ಡಬ್ ಆಗಿವೆ. ಈಗ ಆರ್‌ಆರ್ ಆರ್ ಸರದಿ. ಸುಮಾರು 350 ಕೋಟಿ ರೂಪಾಮಿ ಬಜೆಟ್‌ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಎಲ್ಲಾ ಓಕೆ ಆರ್‌ಆರ್‌ಆರ್ ಎಂದರೇನು ಎಂದು ನೀವು ಕೇಳಬಹುದು. ಮೂಲಗಳ ಪ್ರಕಾರ, ರೌದ್ರಂ ರಣಂ ರುಧಿರಂ ಎನ್ನಲಾಗಿದೆ. ಇದು ಸ್ವಾತಂತ್ರ್ಯ ಹೋರಾಟಗಾರರಿಬ್ಬರ ಕಥೆ ಎನ್ನಲಾ ಗಿದೆ. ಚಿತ್ರದ ಬಹುತೇಕ ಚಿತ್ರೀಕಣ ಸೆಟ್‌ನಲ್ಲೇ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.