ಮಾಹಿತಿ ನೀಡದವನ ಕುಟುಂಬಕ್ಕೇ ಆಪತ್ತು!
Team Udayavani, Apr 4, 2020, 10:12 AM IST
ಕಲಬುರಗಿ: ಕೋವಿಡ್ 19 ಸೋಂಕು ನಿಯಂತ್ರಿಸಲು ಆಶಾ ಕಾರ್ಯಕರ್ತೆಯರು ಮನೆ ಮುಂದೆ ಬಂದು ಜಾಗೃತಿ ಮೂಡಿಸಿದರೂ ಅಸಡ್ಡೆ ವಹಿಸಿದ ಕುಟುಂಬ ಈಗ ಆಪತ್ತಿನಲ್ಲಿ ಸಿಲುಕಿದೆ. ಪ್ರವಾಸ ಮಾಹಿತಿ ನೀಡದೆ ಮನೆಯಲ್ಲಿ ಅವಿತುಕೊಂಡಿದ್ದ ವ್ಯಕ್ತಿಯ ಬದಲಿಗೆ ಆತನ ಪತ್ನಿಗೆ ಕೋವಿಡ್ 19 ವಕ್ಕರಿಸಿದೆ.
ದಿಲ್ಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಮರಳಿದ್ದ ಶಹಾಬಾದ್ ಪಟ್ಟಣದ ವ್ಯಕ್ತಿ ತಪಾಸಣೆಗೊಳಗಾಗದೆ ಮನೆಯಲ್ಲಿಯೇ ಠಿಕಾಣಿ ಹೂಡಿದ್ದರಿಂದ ಆತನ ಪತ್ನಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ.
ಮಾ. 19ಕ್ಕೆ ಮರಳಿದ್ದ!
ಶಹಾಬಾದ್ ಪಟ್ಟಣದ ವ್ಯಕ್ತಿಯ ಮನೆಗೂ ಆಶಾ ಕಾರ್ಯ ಕರ್ತೆಯರು ಹೋಗಿ ಕುಟುಂಬ ಸದಸ್ಯರ ಪ್ರವಾಸದ ಮಾಹಿತಿ ಕೇಳಿದ್ದರು. ಕುಟುಂಬದ ಹಿರಿಯ ವ್ಯಕ್ತಿ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿ ದಿಲ್ಲಿಯಿಂದ ಮಾ. 19ಕ್ಕೆ ಮರಳಿದ್ದರು. ಇದನ್ನು ಕುಟುಂಬವರು ಮುಚ್ಚಿಟ್ಟಿದ್ದರು. ಕೇಂದ್ರ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದವರ ಹೆಸರು-ವಿಳಾಸ ಸಹಿತ ಮಾಹಿತಿ ನೀಡಿತ್ತು. ಆ ಪಟ್ಟಿಯಲ್ಲಿ ಈತನ ಹೆಸರು ಕಂಡ ಅಧಿಕಾರಿಗಳು ಆತನ ಮನೆಗೆ ಧಾವಿಸಿದರು. ಅದಾಗಲೇ 60 ವಯಸ್ಸಿನ ಆತನ ಪತ್ನಿಯಲ್ಲಿ ಕೋವಿಡ್ 19 ಲಕ್ಷಣಗಳು ಹರಡಿದ್ದವು. ಹೀಗಾಗಿ ಪತಿ, ಪತ್ನಿಯನ್ನು ಆಸ್ಪತ್ರೆಗೆ ರವಾನಿಸಿದರು. ಪ್ರಯೋಗಾಲಯದ ವರದಿಯಲ್ಲಿ ಪತಿಯ ವರದಿ ನೆಗೆಟಿವ್ ಬಂದಿದ್ದು, ಪತ್ನಿಯದ್ದು ಪಾಸಿಟಿವ್ ಎಂದು ಬಂದಿದೆ. ಮುನ್ನೆಚ್ಚರಿಕೆಯಾಗಿ ಮಗ, ಸೊಸೆ, ಇಬ್ಬರು ಮೊಮ್ಮಕ್ಕಳನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.