ಕ್ವಾರೆಂಟೈನ್ : ಕಸ ಸಂಗ್ರಹಣೆಗೆ ಏಜೆನ್ಸಿ
Team Udayavani, Apr 4, 2020, 12:18 PM IST
ಬೆಂಗಳೂರು: ಕೋವಿಡ್ 19 ಸೋಂಕು ಹರಡುವ ಭೀತಿ ಇರುವ ಹಿನ್ನೆಲೆಯಲ್ಲಿ ಹಾಗೂ ಮುಂಜಾಗ್ರತಾ ಕ್ರಮವಾಗಿ ಹೋಮ್ ಕ್ವಾರೆಂಟೈನ್‌ಗೆ ಒಳಪಡಿಸಿದವರ ಮನೆಗಳಿಂದ ಕಸ ಸಂಗ್ರಹಿಸುವುದಕ್ಕೆ ಮತ್ತು ವಿಲೇವಾರಿಗೆ ಬಿಬಿಎಂಪಿ ಪ್ರತ್ಯೇಕ ಏಜನ್ಸಿಗಳನ್ನು ನೇಮಿಸಿದೆ.
ಪೌರಕಾರ್ಮಿಕರ ಸುರಕ್ಷತೆ ಹಾಗೂ ಹೋಮ್ ಕ್ವಾರೆಂಟೈನ್ ಮನೆ ಗಳ ತ್ಯಾಜ್ಯ ಸಂಗ್ರಹಿಸುವ ಕುರಿತು ರಾಜ್ಯ ಹೈಕೋರ್ಟ್ ಮಾ.30 ರಂದು ನೀಡಿದ ಆದೇಶದ ಅನ್ವಯ ನಿರ್ದಿಷ್ಟ ಕ್ರಮ ಕೈಗೊಂಡಿದ್ದು, ಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ಪತ್ರೆ, ಕ್ಲಿನಿಕ್ ಗಳಲ್ಲಿ ಉತ್ಪತ್ತಿಯಾಗುವ ಬಯೋ ಮೆಡಿಕಲ್ ತ್ಯಾಜ್ಯ ಸಂಗ್ರಹಿಸಲು ಮತ್ತು ವಿಲೇವಾರಿ ಮಾಡಲು ತಲಾ ಎರಡು ವಲಯಕ್ಕೆ ಒಂದರಂತೆ ಎಂಟು ವಲಯಗಳಿಗೆ ನಾಲ್ಕು ಏಜನ್ಸಿ ನೇಮಿಸಿ ಬಿಬಿಎಂಪಿಯ ಜಂಟಿ ಆಯುಕ್ತ ಸಫìರಾಜ ಖಾನ್ ಆದೇಶ ಹೊರಡಿಸಿದ್ದಾರೆ.
ಅನುಸರಿಸಬೇಕಾದ ಕ್ರಮಗಳು :
- ಕೆಲಸ ಆರಂಭಿಸುವ ಮುನ್ನ ಪ್ರತಿ ನಿತ್ಯ ಪೌರಕಾರ್ಮಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಈ ಬಗ್ಗೆ ಸೂಕ್ರ ಕ್ರಮ ಕೈಗೊಳ್ಳುವಂತೆ ವಿಭಾಗದ ಎಲ್ಲ ಸಹಾಯಕ ಎಂಜಿನಿಯರ್ ಗಳಿಗೆ, ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
- ಬಯೋ ಮೆಡಿಕಲ್ ತ್ಯಾಜ್ಯ ಸಂಗ್ರಹಿಸುವ ಪೌರಕಾರ್ಮಿಕರಿಗೆ ವೈಯಕ್ತಿಕ ರಕ್ಷಣಾ ಕಿಟ್ ನೀಡಬೇಕು.
- ಬಯೋ ಮೆಡಿಕಲ್ ತ್ಯಾಜ್ಯ ಸಂಗ್ರಹಿಸುವ ಪೌರಕಾರ್ಮಿಕರಿಗೆ ಪ್ರತಿನಿತ್ಯ ಹೊಸ ವೈಯಕ್ತಿಕ ರಕ್ಷಣಾ ಕಿಟ್ ನೀಡಬೇಕು.
- ಕಿಟ್‌ನಲ್ಲಿ ಮೂರು ಪದರದ ಮಾಸ್ಕ್, ಹ್ಯಾಂಡ್ ಗ್ಲೌಜ್, ಕನ್ನಡಕ, ಗೌನ್ ಪರಿಕರ ನೀಡಬೇಕು.
- ಪೌರಕಾರ್ಮಿಕರು ಬಳಸಿದ ರಕ್ಷಣಾ ಪರಿಕರಗಳನ್ನು ಸಂಗ್ರಹಿಸಿ ಬಯೋ ತ್ಯಾಜ್ಯ ಎಂದು ಪರಿಗಣಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು.
- ಪೌರಕಾರ್ಮಿಕರಿಗೆ ಅನಾರೋಗ್ಯ ಉಂಟಾದರೆ ಕೂಡಲೇ ಚಿಕಿತ್ಸೆ ಕೊಡಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.