![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 4, 2020, 5:00 PM IST
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಕೋವಿಡ್-19 ಸೋಂಕು ದೃಢಪಟ್ಟಿದ್ದು, ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಯುವಕನಿಗೆ ಸೋಂಕು ಖಚಿತವಾಗಿದೆ.
ಕೆಲವು ದಿನಗಳ ಹಿಂದೆ ವೈಯುಕ್ತಿಕ ಕೆಲಸ ನಿಮಿತ್ತ ದೆಹಲಿಗೆ ತೆರಳಿದ್ದ ತುಂಬೆ ಗ್ರಾಮದ ಯುವಕ ಮಾರ್ಚ್ 21 ರಂದು ರೈಲಿನಲ್ಲಿ ಮಂಗಳೂರಿಗೆ ಬಂದಿದ್ದ.
ನಿಝಾಮುದ್ದೀನ್ ಮಸೀದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವು ಜನರಿಗೆ ಸೋಂಕು ಕಂಡಬಂದ ಹಿನ್ನಲೆ ಅದೇ ಸಮಯದಲ್ಲಿ ದಿಲ್ಲಿಯಿಂದ ಮರಳಿ ಬಂದಿದ್ದ ಯುವಕನನ್ನು ಗುರುತಿಸಿ ಅತನ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿತ್ತು.ಇದೀಗ ಅದರ ವರದಿ ಬಂದಿದ್ದು ಯುವಕನಿಗೆ ಸೋಂಕು ಪಾಸಿಟಿವ್ ಅಗಿರುವುದು ದೃಢಪಟ್ಟಿದೆ
ಈತ ತುಂಬೆಯ ಮದಕ ಬೊಳ್ಳಾಡಿ ಪ್ರದೇಶದ ನಿವಾಸಿಯಾಗಿದ್ದು , ಗ್ರಾಮದಲ್ಲಿ 500ಕ್ಕೂ ಮನೆಗಳಿವೆ. ತಹಶೀಲ್ದಾರ್ ಮತ್ತು ಎಸ್ ಐ ಸ್ಥಳಕ್ಕೆ ಆಗಮಿಸಿದ್ದು ತುಂಬೆ ಗ್ರಾಮವನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಯಾರು ಮನೆಯಿಂದ ಹೊರಬಾರದಂತೆ ಪೊಲೀಸರು ಧ್ವನಿವರ್ಧಕ ಮೂಲಕ ಎಚ್ಚರಿಕೆಯ ಸಂದೇಶ ನೀಡಿದ್ದಾರೆ
You seem to have an Ad Blocker on.
To continue reading, please turn it off or whitelist Udayavani.